ಬೇಲೂರು: ಕೊರೋನಾಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಬಾಗಿಲು ಮುಚ್ಚಿದ್ದ ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇಗುಲ
ಇಂದಿನಿಂದ ಆರಂಭಗೊಂಡಿತು.ಮಹಾಮಾರಿ ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಎರಡು
ತಿಂಗಳ ಹಿಂದೆ ಬಾಗಿಲು ಮುಚ್ಚಿದ್ದ ಚನ್ನಕೇಶವಸ್ವಾಮಿ ದೇಗುಲದ ಬಾಗಿಲನ್ನು ಇಂದಿನಿಂದ ತೆರೆಯಲಾಗಿದ್ದು, ಮುಖ್ಯ ಅರ್ಚಚಕರಾದ ಕೃಷ್ಣಸ್ವಾಮಿಭಟ್ಟರ್ ಹಾಗೂ
ಶ್ರೀನಿವಾಸ ಭಟ್ಟರ್ ವಿಷೇಶ ಪೂಜೆ ಸಲ್ಲಿಸಿದರು.
ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿದ್ಯುಲ್ಲತಾ ಮಾತನಾಡಿ, ಸರ್ಕಾರದ ಆದೇಶ
ದಂತೆ ಪ್ರವಾಸಿಗರು ಹಾಗೂ ಭಕ್ತರಿಗೆ ದೇವಾಲಯ ಒಳ ಪ್ರವೇಶಿಸುವಾಗ ಕಡ್ಡಾಯವಾಗಿ ಮಾಸ್ಕ್ ಥರ್ಮಾ ಸ್ಕ್ಯಾನಿಂಗ್ ಹಾಗೂ ಸ್ಯಾನಟೇಸರ್ ನೀಡಲಾಗುವುದು.
ಅದರಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈಗಾಗಲೇ ದೇವಾಲಯದಲ್ಲಿ ಗುರುತು ಮಾಡಿರುವ
ಬಾಕ್ಸ್ ಗಳಲ್ಲಿ ನಿಂತು ಅಂತರವನ್ನು ಕಾಯ್ದುಕೊಳ್ಳಬೇಕು ಎಂದರು.
Tags
ಬೇಲೂರು