ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ಗೌರವ ಧನ ಸರ್ಕಾರಕ್ಕೆ ಮನವಿ

ಆಲೂರು : ಆಶಾ ಕಾರ್ಯಕರ್ತೆಯರಿಗೆ ಮಾಸಿಕ 12 ಸಾವಿರ ರೂಪಾಯಿಗಳ ಗೌರವ ಧನವನ್ನು ಖಾತರಿ ಪಡಿಸುವಂತೆ ಮತ್ತು ಕರೊನಾ ಸೋಂಕು ಕಾರ್ಯಕರ್ತೆಯರಿಗೆ ಹರಡದಂತೆ ರಕ್ಷಣೆ ಪಡೆಯಲು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಾಗ್ರಿಗಳನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಆಶಾ ಕಾಂiÀರ್iಕರ್ತೆಯರ ಸಂಘದವರು ತಹಸೀಲ್ದಾರ್ ಶಿರೀನ್ ತಾಜ್ ರವರ ಮೂಲಕ ಸರ್ಕಾರಕ್ಕೆ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅದ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಮಂಗಳ, ಕಾರ್ಯದರ್ಶಿ ಲಕ್ಷ್ಮಿ, ಕಾರ್ಯಕರ್ತೆಯರಾದ ಲತಾ, ದ್ರಾಕ್ಷಾಯಿಣಿ, ಶಾರದಾ, ನೇತ್ರಾವತಿ, ಪುಷ್ಪಲತಾ ಸೇರಿದಂತೆ ಇತರರು ಹಾಜರಿದ್ದರು.

Post a Comment

Previous Post Next Post