ಆಲೂರು : ಹಸುವಿನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಆಲೂರು ತಾಲ್ಲೂಕಿನ ಹಸಗನೂರು ಗ್ರಾಮದಲ್ಲಿ ನಡೆದಿದೆ.
ಜುಲೈ 2 ರಂದು ಬೆಳಿಗ್ಗೆ 9 ಘಂಟೆ ಸುಮಾರಿಗೆ ಹಸಗನೂರು ಗ್ರಾಮದ ದೇವರಾಜೇಗೌಡ ಅವರಿಗೆ ಸೇರಿದ ಸುಮಾರು 40 ಸಾವಿರ ಬೆಲೆ ಬಾಳುವ ಸಿಂಧಿ ಹಸು ಮನೆಯ ಪಕ್ಷದ ಹಿತ್ತಲಿನಲ್ಲಿ ಮೇವು ತಿನ್ನುತ್ತಿದ್ದ ಸಂದರ್ಭದಲ್ಲಿ ಅಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಹಸುವಿನ ಮೇಲೆ ಬಿದ್ದ ಪರಿಣಾಮ ಹಸು ಸ್ಥಳದಲ್ಲಿಯೇ ಮೃತಪಟ್ಟಿದೆ.
ಸ್ಥಳಕ್ಕೆ ತಾಲೂಕು ಪೆÇಲೀಸ್ ಠಾಣೆ ಅಧಿಕಾರಿಗಳು, ಸೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗೇಗೌಡ, ಕಿರಿಯ ಇಂಜಿನಿಯರ್ ಜೀವನ್ ಹಾಗೂ ಪಶು ವೈದ್ಯಾಧಿಕಾರಿ ಡಾ.ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Tags
ಆಲೂರು