.ಅರಸೀಕೆರೆ : ತಾಲ್ಲೂಕಿನಾದ್ಯಂತ ವೇಗವಾಗಿ ಹರಡುತ್ತಿರುವ ಕರೊನ ಮಹಾಮಾರಿಯಿಂದಾಗಿ, ತಾಲ್ಲೂಕಿನಲ್ಲಿ ಕರೊನ ಸೊಂಕಿತರ ಮಟ್ಟ 29ಕ್ಕೆ ಏರಿದೆ. ಇದರಿಂದಾಗಿ ಮುಂಜಾಗ್ರತೆ ಕ್ರಮವಾಗಿ ತಾಲ್ಲೂಕಿನಾದ್ಯಂತ (ಜುಲೈ 1) ಇಂದಿನಿಂದ ಬೆಳಿಗ್ಗೆ 6 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಬೇಕಾಗಿ ಜೂನ್ 30ರಂದು ತಾಲ್ಲೂಕಿನಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯು ನಿರ್ಧರಿಸಿದೆ. 2ಘಂಟೆಯ ನಂತರ ಅನಾವಶ್ಯಕವಾಗಿ ಹೊರಗೆ ತಿರುಗುವಂತಿಲ್ಲ. ಪ್ರತೀ ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಇರುತ್ತದೆ.
ಹಾಗೂ ಜುಲೈ 15ರವರೆಗೆ ಹೇರ್ ಕಟಿಂಗ್ ಸಲೂನ್ ಗಳನ್ನು ಬಂದ್ ಮಾಡಲು ಸವಿತಾ ಸಮಾಜ ನಿರ್ಧರಿಸಿದೆ ಎಂದು ಸಮಾಜದ ಮುಖಂಡ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಆರಸೀಕೆರೆ ಶಾಸಕರಾದ ಕೆ.ಎಂ ಶಿವಲಿಂಗೇಗೌಡರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರಾದ ನಟರಾಜ್ ಹಾಗೂ ಮಾತ್ತಿತರ ಗಣ್ಯರು ಹಾಜರಿದ್ದರು.
Tags
ಅರಸೀಕೆರೆ