ಸಕಲೇಶಪುರ: ಸ್ಥಳೀಯರಿಗೂ ಪ್ರವಾಸಿಗರಿಗೂ ಸಂಘರ್ಷ ಉಂಟಾಗಬಾರದೆಂಬ ನಿಟ್ಟಿನಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು.
ತಾಲೂಕಿನ ಪ್ರವಾಸಿ ಸ್ಥಳವಾದ ಮಂಜ್ರಾಬಾದ್ ಕೋಟೆಗೆ ಭೇಟಿ ನೀಡಿದ ನಂತರ ಮಾತನಾಡಿ ಮಂಜ್ರಾಬಾದ್ ಕೋಟೆ ಸಕಲೇಶಪುರ ಭಾಗದಲ್ಲಿ ಪ್ರಮುಖವಾದ ಕೋಟೆ, ರೈನ್ ವಾಟರ್ ಹಾರ್ ವೆಸ್ಟಿಂಗ್ ಈ ಹಿಂದೆಯೆ ಮಾಡಿದ್ದಾರೆ. ನಮ್ಮ ಪೂರ್ವಿಕರ ಜ್ಞಾನಕ್ಕೆ ಅಬಾರಿಯಾಗಿದ್ದೇನೆ. ಕೋಟೆಗೆ ಬರುವ ಕೆಲವು ಕಿಡಿಗೇಡಿಗಳು ಅಲ್ಲಲ್ಲಿ ತಮ್ಮ ಹೆಸರುಗಳನ್ನು ಕೆತ್ತುವುದರಿಂದ ಕೋಟೆಯ ಮೂಲಸ್ವರೂಪಕ್ಕೆ ಸ್ವಲ್ಪ ಧಕ್ಕೆಯಾಗಿದೆ. ಕಳೆದ ಬಾರಿ ಕೋಟೆಯ ಅಭಿವೃದ್ದಿಗಾಗಿ ಸುಮಾರು 3 ಕೋಟಿ ರೂ ಮೀಸಲಿಟ್ಟಿದ್ದರು ಸಹ ಕ್ರಿಯಾ ಯೋಜನೆ ಆಗಾದ ಕಾರಣ ಇನ್ನು ಅಭಿವೃದ್ದಿ ಕಾರ್ಯಕೈಗೊಂಡಿಲ್ಲ.ಪುರಾತತ್ವ ಇಲಾಖೆಯ ಅನುಮತಿ ಪಡೆದು ಅಭಿವೃದ್ದಿ ಮಾಡಬೇಕಾಗುತ್ತದೆ. ತಕ್ಷಣ ಪುರಾತತ್ವ ಇಲಾಖೆ ವತಿಯಿಂದ ಅನುಮತಿ ಪಡೆದು ಕೋಟೆಯನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಈ ಭಾಗದಲ್ಲಿ ಸಿಗುವಷ್ಟು ಉತ್ತಮ ಆಮ್ಲಜನಕ ಬೇರೆಲ್ಲೂ ಸಿಗುವುದಿಲ್ಲ ಹಂಗಾಗಿ ಪ್ರವಾಸಿಗರು ಊರ ಊರುಗಳಿಂದ ಇಲ್ಲಿಗೆ ಬರಲು ಹಾತೊರೆಯುತ್ತಾರೆ. ಸದ್ಯ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಪ್ರವಾಸೋದ್ಯಮಕ್ಕೆ ನಷ್ಟವಾಗಿರುವುದು ನಿಜ, ಕನಿಷ್ಠವೆಂದರು ಸುಮಾರು 7000 ಕೋಟಿಯಷ್ಟು ನಷ್ಟವಾಗಿದೆ. ಹೊರ ಊರುಗಳಿಂದ ಬರುವವರಿಂದ ಕೋವಿಡ್ ಹರಡುತ್ತದೆಂಬ ಭಯ ಇರುವುದರಿಂದ ಸ್ಥಳೀಯರು ಪ್ರವಾಸಿಗರ ಆಗಮನವನ್ನು ವಿರೋಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಬದಲಾಗುವುದರಲ್ಲಿ ಅನುಮಾನವಿಲ್ಲ. ಒಂದೆ ಸತಿ ಅಂತರಾಜ್ಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸದ್ಯದ ಪರಿಸ್ಥಿತಿಯಲ್ಲಿ ತೆರೆದುಕೊಳ್ಳುವುದು ಕಷ್ಟ, ಸ್ಥಳೀಯ ಪ್ರವಾಸೋದ್ಯಮವನ್ನು ಮಾತ್ರ ತೆರೆಯಲು ಅವಕಾಶ ಸಿಗುತ್ತದೆ. ನೋಡು ಬಾ ನಮ್ಮೂರ ಯೋಜನೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ಸ್ಥಳಗಳನ್ನು ಬೆಳಕಿಗೆ ತರಲಾಗುತ್ತಿದೆ ಎಂದರು.. ಕೋವಿಡ್ 1ಚಿಕ್ಕಮಗಳೂರಿಗೆ ಈಶ್ವರಪ್ಪನವರು ಬಂದಿರುವುದರ ಬಗ್ಗೆ ಮಾಹಿತಿಯಿಲ್ಲ, ಅಶೋಕ್ ರವರು ಹಾಗೂ ಜಗದೀಶ್ ಶೆಟ್ಟರ್ ರವರು ಅಧಿಕೃತವಾಗಿ ಚಿಕ್ಕಮಗಳೂರಿಗೆ ಬಂದಿದ್ದು ನಿಜ, ಆದರೆ ಯಾವುದೆ ಸಭೆ ನಡೆದಿಲ್ಲ ಎಂದರು.
ಈ ಸಂಧರ್ಭದಲ್ಲಿಉಪವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ಮಂಜುನಾಥ್, ಇ.ಓ ಹರೀಶ್,ಮಾಜಿ ಶಾಸಕ ಎಚ್.ಎಮ್ ವಿಶ್ವನಾಥ್ ,ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ್ ಸಂಘಿ,ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜಿತೇಂದ್ರ, , ಮುಂತಾದವರು ಹಾಜರಿದ್ದರು.
Tags
ಸಕಲೇಶಪುರ