ಸಕಲೇಶಪುರ: ಶಾಲೆಗಳಿಗೆ ಕೋವಿಡ್ 19 ಹಿನ್ನೆಲೆ ರಜಾವಿರುವುದರಿಂದ ಶಾಲಾ ಮಕ್ಕಳಿಗೆ ಬಿಸಿಯೂಟದ ಬದಲು ಆಹಾರ ಪದಾರ್ಥಗಳನ್ನು ವಿತರಿಸಲಾಗುವುದು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮಂಜುನಾಥ್ ಹೇಳಿದರು.
ಪಟ್ಟಣದ ಸಂತ ಜೋಸೆಫರ ಶಾಲೆ ಸೇರಿದಂತೆ ಕೆಲವು ಶಾಲೆಗಳಿಗೆ ಅಕ್ಷರ ದಾಸೋಹ ವತಿಯಿಂದ ವಿಧ್ಯಾರ್ಥಿಗಳಿಗೆ ನೀಡಲು ಆಹಾರ ಪದಾರ್ಥಗಳನ್ನು ನೀಡಿದ ನಂತರ ಮಾತನಾಡಿ ಸರ್ಕಾರದ ಆದೇಶದಂತೆ ಬೇಸಿಗೆ ಅವಧಿಯ 37 ದಿನಗಳ ಕಾಲದ ಅಕ್ಕಿ, ಬೇಳೆ ಹಾಗೂ ಹಾಲಿನ ಪುಡಿ ವಿತರಣೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು 7653 ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟದ ಪ್ರಯೋಜನ ಪಡೆಯುತ್ತಿದ್ದು ಸುಮಾರು 3ಕೆ.ಜಿ 900 ಗ್ರಾಮನಷ್ಟು ಅಕ್ಕಿ ಎಲ್ಲಾರಿಗೂ ವಿತರಣೆ ಮಾಡಲಾಗುತ್ತಿದ್ದು ಜೊತೆಗೆ 600 ಗ್ರಾಮ್ ಬೇಳೆ ಹಾಗೂ 500 ಗ್ರಾಮ್ ಹಾಲಿನ ಪುಡಿ ಸಹ ವಿತರಣೆ ಮಾಡಲಾಗುತ್ತಿದೆ. ಈಗಾಗಲೆ ಶೇ.30ರಷ್ಟು ಗುರಿ ಸಾಧಿಸಲಾಗಿದ್ದು ಅಕ್ಕಿ ಹಾಗೂ ಬೇಳೆ ಸಂಪೂರ್ಣವಾಗಿ ಬರದಿರುವುದಿರಂದ ಎಲ್ಲಾರಿಗೂ ಆಹಾರ ಪದಾರ್ಥಗಳನ್ನು ತಲುಪಿಸುವುದು ತುಸು ವಿಳಂಬವಾಗುತ್ತಿದೆ ಎಂದರು.
ಈ ಸಂದರ್ಬದಲ್ಲಿ ಸಂತ ಜೋಸೆಫರ ಪ್ರೌಡಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಆಶಾ ಪೆರೆರಾ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತ, ಶಿಕ್ಷಕರಾದ ಕೀರ್ತಿ ಕುಮಾರ್, ಚೈತ್ರ ಮತ್ತು ತಮ್ಮಣ್ಣ ಇನ್ನಿತರರು ಇದ್ದರು
Tags
ಸಕಲೇಶಪುರ