ಆಶಾ ಕಾರ್ಯಕರ್ತರ ಕನಿಷ್ಠ ವೇತನಕ್ಕಾಗಿ ಮುಷ್ಕರ

ಸಕಲೇಶಪುರ  : ಆಶಾ ಕಾರ್ಯಕರ್ತೆಯರ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಪಟ್ಟಣದ ಹಳೆ ಬಸ್ಸ್ಟಾಂಡ್ ನಿಂದ ಹೊರಟ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ದೇಶ ಸೇರಿದಂತೆ ಜಗತ್ತು ಕೋರಾನಾದಿಂದ ನರಳುತ್ತಿದ್ದರೆ, ರಾಜ್ಯವನ್ನು ಆಳುತ್ತಿರುವವರು ಕೋರಾನದ ಹೆಸರಿನಲ್ಲಿ ಸುಮಾರು 2 ರಿಂದ 3 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದೆ. ಆದರೆ, ಆಶಾ ಕಾರ್ಯಕರ್ತೆಯರ ಕನಿಷ್ಠ ಬೇಡಿಕೆ ಈಡೇರಿಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಶಾ ಕಾರ್ಯಕರ್ತರಿಂದ ಮಗುವಿನ ಜನನದಿಂದ ಹಿಡಿದು ಮರಣದ ವರೆಗೂ ಎಲ್ಲಾ ಮಾಹಿತಿಗಳನ್ನು ಇವರಿಂದಲೇ ಪಡೆಯುತ್ತದೆ. ದೇಶದಲ್ಲೆಡೆ ಅಪೌಷ್ಟಿಕ ದಿಂದ ಮರಣ ಪ್ರಮಾಣ  ಕಡಿಮೆಯಾಗಿದ್ದರೆ ಅದರ ಶ್ರೇಯ ಅಶಾ ಕಾರ್ಯಕರ್ತರಿಗೆ ಸಲ್ಲಬೇಕು ಆಶಾ ಕಾರ್ಯಕರ್ತರು ಆಶಾ ದೀಪವಾಗಿದ್ದಾರೆ . ತಮ್ಮ ಜೀವನವನ್ನು ಕತ್ತಲೆಯಲ್ಲಿಟ್ಟು. ರೋಗಿಗಳ ಆರೋಗ್ಯದ ಕಡೆ ಗಮನಹರಿಸುತ್ತಾರೆ ಅದರೆ ಸೌಲಬ್ಯ ನೀಡದ ಸರಕಾರಕ್ಕೆ ದಿಕ್ಕಾರವಿದೆ. ದೇಶದಲ್ಲೆಡೆ ಜನರು ಲಾಕ್ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರ ಬರಬಾರದು ಎಂದು ಸರಕಾರ ನಿರ್ದೇಶನ ನೀಡಿದರೆ, ಆಶಾ ಕಾರ್ಯಕರ್ತರನ್ನು ಮಾತ್ರ ಕೋರಾನಾ ಪೀಡಿತನ  ಮನೆಯ ಬಾಗಿಲಿಗೆ ಕಳುಹಿಸುತ್ತಿತ್ತು ಸರಕಾರ ಎಲ್ಲಾ ಕೆಲಸವನ್ನು ಆಶಾ ಕಾರ್ಯಕರ್ತರಿಂದ ಪಡೆದು ಅವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲ ವಾಗಿದೆ ಎಂದು ಹೇಳಿದರು. ಕಳೆದ ಜನವರಿ ತಿಂಗಳಿನಿಂದ ಗಳನ್ನು ಈಡೇರಿಸುವಂತೆ ನಡೆಸಿದರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಆಶ್ವಾಸನೆ ಮಾತ್ರ ನೀಡಿದೆ. ಆದರೆ ಯಾವುದೇ ಬೇಡಿಕೆ ಈಡೇರಿಸಲಿಲ್ಲ ಆ ಕಾರಣದಿಂದಾಗಿ ಇಂದು ಬೀದಿಯಲ್ಲಿ ಬಂದು ನಿಂತು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಸರಕಾರ ಕೂಡಲೇ ಆಶಾ ಕಾರ್ಯಕರ್ತರಿಗೆ ಕನಿಷ್ಠ ವೇತನ 12 ಸಾವಿರ ರೂಪಾಯಿಗಳನ್ನು ನೀಡಬೇಕು ಅವರ ಜೀವಕ್ಕೆ ಭದ್ರತೆಯನ್ನು ನೀಡಬೇಕು ವಿಮೆಯನ್ನು ಮಾಡಿಸಬೇಕು ಎನ್ 95 ಮಾಸ್ಕ್ ಪಿಪಿಟ್ ಗಳನ್ನು ಒದಗಿದಬೇಕು ಇಲ್ಲದಿದ್ದಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.
ಈ ಸಂದರ್ಬದಲ್ಲಿ ತಾಲುಕು ಕಾಂಗ್ರೆಸ್ ಅದ್ಯಕ್ಷ ಹಾನುಬಾಳು ಭಾಸ್ಕರ್, ಕಾರ್ಯದರ್ಶಿ ಸಲೀಮ್ ಕೊಲ್ಲಹಳ್ಳಿ, ಪಕ್ಷದ  ತಾಪಂ ಸದಸ್ಯರಾದ ಎಡೆಹಳ್ಳಿ ಮಂಜುನಾಥ್, ಉದಯ್,  ಮುಖಂಡರಾದ, ತಸ್ಲೀಮ್, ಗಾಯತ್ರಿ, ಬೈಕೆರೆ ದೇವರಾಜ್, ಗೊದ್ದು ಲೋಕೇಶ್, ಫಾರೂಕ್, ಆಶಾ ಕಾರ್ಯಕರ್ತೆಯ ಸಂಘದ ಅಧ್ಯಕ್ಷೆ ಗೌರಮ್ಮ ಇನ್ನತರರು ಇದ್ದರು

Post a Comment

Previous Post Next Post