ಹಾಸನ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ತಾತ್ಕಾಲಿಕ ಸೀಲ್ ಡೌನ್

ಹಾಸನ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಡೆಡ್ಲಿ ವೈರಸ್ ಪೊಲೀಸರನ್ನೂ ಬೆಂಬಿಡದೇ ಕಾಡುತ್ತಿದೆ. 

ಇಂದು ಒಬ್ಬರು ಕೆಎಸ್ಆರ್ ಪಿ ಪೊಲೀಸರಲ್ಲಿ‌ ಪಾಸಿಟಿವ್ ದೃಢವಾಗಿದ್ದು, ಅವರು ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ಕರ್ತವ್ಯ ನಿರತ ಭೇಟಿ ಹಿನ್ನಲೆ ಆರ್.ಸಿ.ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯನ್ನು ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಿ, ಸ್ಯಾನಿಟೈಸ್ ಮಾಡಲಾಗುತ್ತಿದೆ.

Post a Comment

Previous Post Next Post