ಇಂದು ಕೊರೊನಾದಿಂದ ಚಿತ್ರರಂಗ ಎದುರಿಸುತ್ತಿರುವ ಸ್ಥಿತಿಗತಿಗಳ ಬಗ್ಗೆ ಶಿವರಾಜ್ ಕುಮಾರ್ ಮನೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು.. ಮೊದಲಿನಿಂದಲೂ ಅಣ್ಣಾವ್ರ ಮನೆಯಲ್ಲೇ ಚರ್ಚೆಗಳು ನಡೀತಿದ್ವು. ಸ್ಯಾಂಡಲ್ವುಡ್ಗೆ ಈಗ ನಾಯಕನೊಬ್ಬನ ಅವಶ್ಯಕತೆ ಇದೆ. ಹೀಗಾಗಿ ಶಿವಣ್ಣರನ್ನು ನಾಯಕತ್ವವನ್ನು ವಹಿಸಿಕೊಳ್ಳಬೇಕು ಅಂತಾ ಒಮ್ಮತದಿಂದ ನಾವು ಮನವಿ ಮಾಡಿದ್ದೀವಿ ಎಂದರು.
ನಂತರ ಮಾತನಾಡಿದ ಸಾ.ರಾ.ಗೋವಿಂದ್.. ಶಿವಣ್ಣನ ನಾಯಕತ್ವದಲ್ಲಿ ಇನ್ಮುಂದೆ ಸ್ಯಾಂಡಲ್ವುಡ್ ನಡೆಯಲಿದೆ ಎಂದರು.
ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ- ಶಿವಣ್ಣ
ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ.. ಎಲ್ಲಾ ಡಿಪಾರ್ಟ್ಮೆಂಟ್ನಿಂದ ಒಗ್ಗಟ್ಟಾಗಿ ಬಂದಿರೋದು ಖುಷಿ ತಂದಿದೆ. ಇಂಡಸ್ಟ್ರಿಯ ಸಾಕಷ್ಟು ಸಮಸ್ಯೆಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ. ಸಾವಿರ ಜನರನ್ನು ಹಿಂದೆ ಇಟ್ಟುಕೊಂಡರಷ್ಟೇ ನಾಯಕ ಆಗಲ್ಲ.. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು.. ಆಗಲೇ ನಾಯಕ ಆಗೋದು. ನನ್ನನ್ನು ಕಂಡರೆ ಎಲ್ಲರೂ ಇಷ್ಟಪಡ್ತಾರೆ. ಇನ್ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗೋಣ.. ಮಾದರಿ ಇಂಡಸ್ಟ್ರಿಯಾಗಿ ಬಾಳೋಣ.. ಕೊರೊನಾ ಏನೂ ದೊಡ್ಡ ವಿಷಯವಲ್ಲ.. ಅದನ್ನು ಹೋಗಲಾಡಿಸಬಹುದು ಎಂದರು.