ಹಾಸನ: ಕೊರೋನಾ ಸಮಯದಲ್ಲಿ ಎರಡೆರಡು ಹೂ-ಕೋಸು ನೀಡುವ ಹೆಚ್.ಕೆ. ಮಹೇಶ್ ಗೆ ಶಾಸಕರಾದ ಪ್ರೀತಮ್ ಜೆ. ಗೌಡರು ಮಾಡಿರುವ ಕೆಲಸಗಳ ಬಗ್ಗೆ ಏನು ತಿಳಿದಿದೆ ಎಂದು ಬಿಜೆಪಿ ಮುಖಂಡರಾದ ವೇಣುಗೋಪಾಲ್ ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕ್ಷೇತ್ರದ ಶಾಸಕರು ಕೊರೋನಾ ಸಂದರ್ಭದಲ್ಲಿ ಪ್ರತಿನಿತ್ಯ ಆಹಾರದ ಕಿಟ್ ನೀಡಿ ಬಡ ಜನತೆಗೆ ನೆರವಾಗಿದ್ದಾರೆ. ಆದರೇ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಮಹೇಶ್ ರವರು ಕೇವಲ ಹೂಕೋಸು ನೀಡಿದನ್ನೇ ದೊಡ್ಡದು ಎಂದು ಕೊಂಡು ಶಾಸಕರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಿರುವುದರಲ್ಲಿ ಹುರುಳಿಲ್ಲದ್ದ ಆರೋಪವಾಗಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾದ ದಿನದಿಂದ ಕ್ಷೇತ್ರದ ಶಾಸಕರಾದ ಪ್ರೀತಂಗೌಡರ ನೇತೃತ್ವದಲ್ಲಿ ಹಲವು ತಂಡಗಳನ್ನ ಕಟ್ಟಿಕೊಂಡು ಕ್ಷೇತ್ರದಲ್ಲಿನ ಬಡವರು, ನಿರ್ಗತಿಕರಿಗೆ ಪ್ರತಿನಿತ್ಯ ಫುಡ್ ಪ್ಯಾಕೆಟ್‍ಗಳು, ಮನೆ ಮನಗೆ ಅಹಾರದ ಕಿಟ್, ಮಕ್ಕಳ ಆಟಿಕೆ, ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್‍ಗಳು ಹೀಗೆ ಹತ್ತು ಹಲವು ಜನಪರ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ಶಾಸಕರು ವಾರದಲ್ಲಿ 2 ದಿನ ಹಾಸನದಲ್ಲಿದ್ದರೆ 5ದಿನ ಬೆಂಗಳೂರಿನಲ್ಲಿ ಕುಳಿತು ವ್ಯವಹಾರ ನೆಡೆಸುತ್ತಾರೆ ಎಂದು ಹೆಚ್.ಕೆ. ಮಹೇಶ್ ರವರು ಹೇಳಿಕೆ ನೀಡಿದ್ದಾರೆ. ಶಾಸಕರ ಕಾರ್ಯವೈಕರಿ ಬಗ್ಗೆ ಮಾತನಾಡುವ ಮಹೇಶ್ ಅವರು, ಕ್ಷೇತ್ರದ ಜನತೆಗೆ ನೀಡಿರುವ ಕೊಡುಗೆ ಏನು? ಎರಡೆರಡು ಹೂ ಕೋಸನ್ನ ಜನರಿಗೆ ನೀಡಿದ್ದನ್ನ ಬಿಟ್ಟರೆ ಒಂದೂ ಫುಡ್ ಕಿಟ್ ನಿಡಿದ ಉದಾಹರಣೆ ಇಲ್ಲ, ಹೀಗಿರುವ ವಾರಕ್ಕೆರಡು ಪತ್ರಿಕಾಗೋಷ್ಠಿ ಮಾಡಿ ಶಾಸಕರ ವಿರುದ್ಧ ಆರೋಪಮಾಡುವುದು ಎಷ್ಟು ಸರಿ ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪುನಿತ್, ಮಗಣ್ಣಗೌಡ, ಯೋಗೀಶ್, ಸ್ವಾಮಿ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.
Tags
ಹಾಸನ