ಸಕಲೇಶಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಆಯ್ಕೆಯಾಗುವುದು ಖಚಿತ ಎಂದು ಕೆಪಿಸಿಸಿ ವೀಕ್ಷಕ ಮಂಜುನಾಥ್ ಹೇಳಿದರು.
ಪಟ್ಟಣದ ನಂಜಮ್ಮ ಮಹಿಳಾ ಸಮಾಜದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆಶಿವಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದ ಆನ್ ಲೈನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆಶಿವಕುಮಾರ್ ಪದಗ್ರಹಣ ಮಾಡುತ್ತಿದ್ದು ಜೊತೆಯಲ್ಲಿ ಸಲೀಂ ಅಹಮ್ಮದ್ ರವರು, ಸತೀಶ್ ಜಾರಕಿಹೊಳೆಯವರು ಹಾಗೂ ಈಶ್ವರ ಖಂಡ್ರೆಯವರುಗಳು ಸಹ ಪದಗ್ರಹಣ ಮಾಡುತ್ತಿದ್ದಾರೆ.ಇದರ ಪ್ರಯುಕ್ತ ತಾಲೂಕಿನ 26 ಪಂಚಾಯತಿಗಳಲ್ಲಿ ಹಾಗೂ ಪಟ್ಟಣದಲ್ಲಿ ಪ್ರತಿಯೋರ್ವ ಕಾಂಗ್ರೆಸ್ ಕಾರ್ಯಕರ್ತರು ಅವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾರಿರಲೆಂದು ಜೂಮ್ ಆ್ಯಪ್ ಮುಖಾಂತರ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಂತೆ ಮಾಡಲಾಗಿದೆ. ರಾಜ್ಯದ ಸುಮಾರು10000 ಕ್ಕೂ ಹೆಚ್ಚು ಪಂಚಾಯತಿಗಳಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಪಕ್ಷ ಸಂಘಟನೆಗೆ ಜೂಮ್ ಆ್ಯಪ್ ಬಳಸಲಾಗುವುದು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ತಾಲೂಕಿನಲ್ಲಿ ಬಲಿಷ್ಠಗೊಳಿಸಲಾಗುವುದು ಎಂದರು.
ಬಾಳ್ಳುಪೇಟೆ ವರದಿ :- ಇಲ್ಲಿನ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯ ಯಡೇಹಳ್ಳಿ ಆರ್ ಮಂಜುನಾಥ್ ನೇತೃತ್ವದಲ್ಲಿ ಬೆಳಗೋಡು ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ ಹಾಗೂ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ವೇಳೆ ಮಾತನಾಡಿದ ಅವರು,
ಡಿ ಕೆ ಶಿವಕುಮಾರ್ ಅವರ ಪದಗ್ರಹಣದಿಂದ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು.ಶಿವಕುಮಾರ್ ಅವರ ಪದ ಗ್ರಹಣದಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇವೇಳೆ ಬಿಎಸ್ಪಿಯಿಂದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಸಲೀಂ, ಟಿಎಪಿಸಿಎಮ್ಎಸ್ ಅಧ್ಯಕ್ಷ ಲೋಹಿತ್, ತಾ.ಪಂ ಸದಸ್ಯ ಯಡೆಹಳ್ಳಿ ಮಂಜುನಾಥ್, ಪಕ್ಷದ ಮುಖಂಡರುಗಳಾದ ವಿದ್ಯಾಶಂಕರ್, ಡಿ.ಸಿ ಸಣ್ಣಸ್ವಾಮಿ, ಹಿತೈಷಿ, ತಸ್ಲೀಂ, ಗೊದ್ದು ಲೋಕೇಶ್,ಫಾರೂಕ್ ,ಪುರಸಭಾ ಸದಸ್ಯೆ ಅನ್ನಪೂರ್ಣ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಜೈಕುಮಾರ್ ಬನವಾಸೆ. ಭುವನಕ್ಷ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ: ಜೂಮ್ ಆ್ಯಪ್ ನಲ್ಲಿ ಕಾರ್ಯಕರ್ತರು ಬಾಗಿ
ಸಕಲೇಶಪುರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಆಯ್ಕೆಯಾಗುವುದು ಖಚಿತ ಎಂದು ಕೆಪಿಸಿಸಿ ವೀಕ್ಷಕ ಮಂಜುನಾಥ್ ಹೇಳಿದರು.
ಪಟ್ಟಣದ ನಂಜಮ್ಮ ಮಹಿಳಾ ಸಮಾಜದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆಶಿವಕುಮಾರ್ ಅಧಿಕಾರ ಸ್ವೀಕಾರ ಸಮಾರಂಭದ ಆನ್ ಲೈನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆಶಿವಕುಮಾರ್ ಪದಗ್ರಹಣ ಮಾಡುತ್ತಿದ್ದು ಜೊತೆಯಲ್ಲಿ ಸಲೀಂ ಅಹಮ್ಮದ್ ರವರು, ಸತೀಶ್ ಜಾರಕಿಹೊಳೆಯವರು ಹಾಗೂ ಈಶ್ವರ ಖಂಡ್ರೆಯವರುಗಳು ಸಹ ಪದಗ್ರಹಣ ಮಾಡುತ್ತಿದ್ದಾರೆ.ಇದರ ಪ್ರಯುಕ್ತ ತಾಲೂಕಿನ 26 ಪಂಚಾಯತಿಗಳಲ್ಲಿ ಹಾಗೂ ಪಟ್ಟಣದಲ್ಲಿ ಪ್ರತಿಯೋರ್ವ ಕಾಂಗ್ರೆಸ್ ಕಾರ್ಯಕರ್ತರು ಅವರ ಜೊತೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾರಿರಲೆಂದು ಜೂಮ್ ಆ್ಯಪ್ ಮುಖಾಂತರ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಂತೆ ಮಾಡಲಾಗಿದೆ. ರಾಜ್ಯದ ಸುಮಾರು10000 ಕ್ಕೂ ಹೆಚ್ಚು ಪಂಚಾಯತಿಗಳಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಪಕ್ಷ ಸಂಘಟನೆಗೆ ಜೂಮ್ ಆ್ಯಪ್ ಬಳಸಲಾಗುವುದು. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ತಾಲೂಕಿನಲ್ಲಿ ಬಲಿಷ್ಠಗೊಳಿಸಲಾಗುವುದು ಎಂದರು.
ಬಾಳ್ಳುಪೇಟೆ ವರದಿ :- ಇಲ್ಲಿನ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ತಾಲ್ಲೂಕು ಪಂಚಾಯತಿ ಸದಸ್ಯ ಯಡೇಹಳ್ಳಿ ಆರ್ ಮಂಜುನಾಥ್ ನೇತೃತ್ವದಲ್ಲಿ ಬೆಳಗೋಡು ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ ಹಾಗೂ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ವೇಳೆ ಮಾತನಾಡಿದ ಅವರು,
ಡಿ ಕೆ ಶಿವಕುಮಾರ್ ಅವರ ಪದಗ್ರಹಣದಿಂದ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ. ಮುಂದಿನ ದಿನಗಳಲ್ಲಿ ಡಿಕೆಶಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು.ಶಿವಕುಮಾರ್ ಅವರ ಪದ ಗ್ರಹಣದಿಂದ ಯುವಕರಲ್ಲಿ ಹೊಸ ಉತ್ಸಾಹ ಮೂಡಿದೆ. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇವೇಳೆ ಬಿಎಸ್ಪಿಯಿಂದ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಸಲೀಂ, ಟಿಎಪಿಸಿಎಮ್ಎಸ್ ಅಧ್ಯಕ್ಷ ಲೋಹಿತ್, ತಾ.ಪಂ ಸದಸ್ಯ ಯಡೆಹಳ್ಳಿ ಮಂಜುನಾಥ್, ಪಕ್ಷದ ಮುಖಂಡರುಗಳಾದ ವಿದ್ಯಾಶಂಕರ್, ಡಿ.ಸಿ ಸಣ್ಣಸ್ವಾಮಿ, ಸಯ್ಯದ್ ಮುಫೀಜ್, ಹಿತೈಷಿ, ತಸ್ಲೀಂ, ಗೊದ್ದು ಲೋಕೇಶ್,ಫಾರೂಕ್ ,ಪುರಸಭಾ ಸದಸ್ಯೆ ಅನ್ನಪೂರ್ಣ, ಅಣ್ಣಪ್ಪ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಜೈಕುಮಾರ್ ಬನವಾಸೆ. ಭುವನಕ್ಷ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Tags
ಸಕಲೇಶಪುರ