ಹಾಸನ: ಒಂದು ಕಡೆ ಕೊರೋನಾ ಸೋಂಕಿಗೆ ಜನರು ತತ್ತರಿಸಿ ಹೋಗಿರುವಾಗ ಇಲ್ಲೊಂದು ಭಯ ಹುಟ್ಟಿಸುವ ವಾಮಚಾರ ನಡೆದಿದ್ದು, ಇದನ್ನು ಮೊದಲು ನೋಡಿದ ರೈತರಿಬ್ಬರೂ ಹಾಸಿಗೆ ಹಿಡಿದಿರುವ ಘಟನೆ ಬೇಲೂರು ತಾಲೂಕಿನ ಅಡಗೂರು ಬಳಿ ಕ್ಯಾತಿನಕೆರೆಯ ಮಲ್ಲಪುರ ರಸ್ತೆಯಲ್ಲಿ ಘಟನೆ ನಡೆದಿದೆ.
ಗ್ರಾಮದಿಂದ ರೈತರು ಜಮೀನಿಗೆ ಹಾದು ಹೋಗುವ ರಸ್ತೆ ಬಳಿ ಯಾರೋ ಅಪರಿಚಿತ ವ್ಯಕ್ತಿಗಳು ವಾಮಚಾರ ನಡೆಸಿದ್ದು, ಅದಕ್ಕೆ ಸೀರೆ ಹಾಕಿರುವ, ಕೈಗೆ ಬಳೆ, ಚಿನ್ನದಾಗೆ ಇರುವ ಮೂಗ್ಬಟ್, ಹೋಲೆ, ಕೊರಳಿಗೆ ಸರ, ತಲೆ ಜೆಡೆಗೆ ಹೂವು ಇರುವ ಬೃಹತಕಾರದ ಹೆಣ್ಣು ರೂಪ ಇರುವ ಗೊಂಬೆಯನ್ನು ನಿಲ್ಲಿಸಲಾಗಿದೆ. ಇದರ ಮುಂಬಾಗ ರಕ್ತದಲ್ಲಿ ಬೆರೆಕೆ ಮಾಡಿದ ಅನ್ನ ಇಡಲಾಗಿದೆ. ಪಕ್ಕದಲ್ಲಿಯೇ ಮೇಕೆ ಮರಿಯನ್ನು ಬಲಿ ತಲೆ ಕಡಿದು ಅಲ್ಲೆ ಎಸೆದಿದ್ದು, ಅದರ ತಲೆ ಸ್ಥಳದಲ್ಲಿ ಇರುವುದಿಲ್ಲ. ನಿಂಬೆ ಹಣ್ಣು ಕೂಡ ಇದ್ದು, ಬಾಳೆಕಂದು ಕಡಿಯಲಾಗಿದೆ. ಮಡಿಕೆಯಲ್ಲಿ ಕುಂಕುಮ ಬೆರೆಸಿರುವ ನೀರು, ತೆಂಗಿನ ಕಾಯಿ ಇದ್ದು, ಜೊತೆಗೆ ದುಡ್ಡು ಕೂಡ ಅಲ್ಲೆ ಇಟ್ಟಿದ್ದಾರೆ. ಇನ್ನು ಹಳೆ ಚಪ್ಪಲಿ, ಶೂ ಬಿದ್ದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ, ತಹಸಿಲ್ದಾರ್ ಗೆ ಮತ್ತು ಪಿಡಿಒಗೆ ಕರೆ ಮಾಡಿದರೇ ಹೆದರಿ ಯಾರು ಸ್ಥಳಕ್ಕೆ ಬರುತ್ತಿಲ್ಲ. ಊರಿನ ರೈತರಿಬ್ಬರೂ ಜಮೀನಿಗೆ ನೀರು ಬಿಡಲು ಹೋದಾಗ ಇದನ್ನು ನೋಡಿ ನಮಗೆ ತಿಳಿಸಿದ್ದು, ಅವರು ಜ್ವರ ಬಂದು ಮನೆಯಲ್ಲಿ ಮಲಗಿದ್ದಾರೆ.
ಇಲ್ಲಿನ ಸ್ಥಳೀಯರು ಹೇಳುವಂತೆ, ಈ ವಾಮಚಾರವನ್ನು ಒಳ್ಳೆಯದಕ್ಕೆ ಮಾಡಿದ್ದರೂ, ಕೆಟ್ಟದಕ್ಕೆ ಮಾಡಿದ್ದರೂ ಗೊತ್ತಿಲ್ಲ. ಇದನ್ನು ನೋಡಿದಾಗ ಯಾರೊ ಅಜ್ಜಿ ಸತ್ತಿಹೋಗಿರಬೇಕೆಂದು ಮೊದಲು ಗಾಬರಿಯಾದೆವು. ಹತ್ತಿರ ಬಂದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿತು. ಇದನ್ನು ನೋಡಿದ ಅಡಗೂರು ಮತ್ತು ಕ್ಯಾತಿನಕೆರೆ ಜನತೆ ಭಯಬೀತರಾಗಿ ಈ ಜಾಗದಲ್ಲೆ ಯಾರು ಓಡಾಡುತ್ತಿಲ್ಲ. ಅಮವಾಸೆ ಮತ್ತು ಹುಣ್ಣಿಮೆ ದಿನ ಈ ಭಾಗದಲ್ಲಿ ವಾಮಚಾರ ಹೆಚ್ಚು ನಡೆಯುತ್ತಿದ್ದು, ಇದಲ್ಲದೇ ಶಾಸ್ತç ಹೇಳುವವರು ಸೇರಿದಂತೆ ವಾಮಚಾರದ ಬಗ್ಗೆ ತಿಳಿಸುವವರು ಹೆಚ್ಚು ಜನ ಇಲ್ಲಿ ಇದ್ದಾರೆ. ಜನರನ್ನು ಭಯಭೀತರಾಗಿ ಮಾಡಿ ಹಣ ಸುಲಿಗೆ ಮಾಡುವ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ಹೇಳಿದಾಗ ಸಬ್ ಇನ್ಸ್ ಪೆಕ್ಟರ್ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ನಂತರ ಪಿಡಿಒ ಮತ್ತು ತಹಸೀಲ್ದಾರ್ ಗೂ ತಿಳಿಸಿದ್ದೇವು. ಆದರೇ ಇದಕ್ಕೂ ನಮಗೂ ಸಂಬAಧವಿಲ್ಲ, ಕೊರೋನಾ ಬಗ್ಗೆ ಮಾತ್ರ ಗೊತ್ತು ಎಂದು ಜಾರಿಕೊಂಡಿದ್ದಾರೆ ಎಂದರು. ಕೊರೋನಾ ಮಹಾಮಾರಿ ತೊಲಗಿ ಹೋಗಲಿ ಎಂದು ಪೂಜೆ ಮಾಡಿದ್ದರೇ ನಮ್ಮ ಅಭ್ಯಂತರವಿಲ್ಲ. ಆದರೇ ಯಾರೋ ಹೇಳಿದ ಮಾತಿಗೆ ಮತ್ತೊಬ್ರಿಗೆ ಕೆಡಕನ್ನು ಭಯಸಲು ಮಾಡಿರಬಹುದೇ, ಇಲ್ಲವೇ ನಿಧಿ ಸಿಗಬಹುದು ಎಂಬ ಆಸೆಗೆ ಮಾರು ಹೋಗಿರಬಹುದೇ ಎಂಬ ಅನುಮಾನ ಎಂದು ಮಾಹಿತಿ ನೀಡಿದರು.
