ಆಲೂರು : ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ರಮ್ಯಾ ಗೋಪಿನಾಥ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ನಂದಿನಿ ದೊರೆಸ್ವಾಮಿ ಅವರು ಪಕ್ಷದ ಒಡಂಬಡಿಕೆಯಂತೆ ರಾಜೀನಾಮೆ ನೀಡಿದ್ದ ಕಾರಣ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ನಡೆಸಲಾಯಿತು.ಜೆಡಿಎಸ್ ಪಕ್ಷದ ರಮ್ಯಾ ಗೋಪಿನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಮ್ಯಾ ಗೋಪಿನಾಥ್ ಮಾತನಾಡಿ, ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಾಲ್ಲೂಕಿನ ಜನತೆಗೆ ಒದಗಿಸುವುದರ ಜೊತೆಗೆ ಜನಗಳ ಹಿತವನ್ನು ಕಾಯುವುದಾಗಿ ತಿಳಿಸಿದ ಅವರು ಮೂರನೇ ಅವಧಿಗೆ ಉಪಾಧ್ಯಕ್ಷ ಸ್ಥಾನ ಸಿಗಲು ಕಾರಣರಾದ ಜೆಡಿಎಸ್ ಪಕ್ಷದ ಎಲ್ಲಾ ನಾಯಕರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಚುನಾವಣಾಧಿಕಾರಿಗಳಾಗಿ ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಮತ್ತು ತಹಶೀಲ್ದಾರ್ ಶರೀನ್ ತಾಜ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರಶೆಟ್ಟಿ , ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಕೆ.ಎಸ್. ಮಂಜೇಗೌಡ ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಟರಾಜ್ ನಾಕಲಗೂಡು, ಸಿ.ವಿ.ಲಿಂಗರಾಜು ,ಉಮೇಶ್ ,ಎಂ.ಎಚ್ .ರಂಗೇಗೌಡ, ನಂದಿನಿ ದೊರೆಸ್ವಾಮಿ , ಜೆಡಿಎಸ್ ಮುಖಂಡರಾದ ಅಜ್ಜೇಗೌಡ ಬಸವರಾಜು,ಯೋಗೇಶ್ , ಮಲ್ಲಿಕಾರ್ಜುನ್,ಗೋಪಿನಾಥ್ ನೂತನ ಉಪಾಧ್ಯಕ್ಷರಿಗೆ ಶುಭ ಕೋರಿದರು
Tags
ಆಲೂರು