ಪ್ರವಾಸೋದ್ಯಮ ಇಲಾಖೆ ವಶದಲ್ಲಿದ್ದ 2ಎಕರೆ ಜಾಗವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ


ತಿ.ನರಸೀಪುರ. ಅ.22:-ವಿಶ್ವ ವಿಖ್ಯಾತ ಸೋಮನಾಥಪುರ ಗ್ರಾಮದ ಕೇಶವ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆ ವಶದಲ್ಲಿದ್ದ 2ಎಕರೆ ಜಾಗವನ್ನು ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಲು ಹಸ್ತಾಂತರಿಸುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಜಂಟಿ ನಿರ್ದೇಶಕರ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡೆಸಿದ್ದಾರೆ 
ಕಳೆದ ಕೆಲ ವರ್ಷಗಳಿಂದ ಸೋಮನಾಥಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಾವಸ್ಥೆಗೆ ತಲುಪಿರುವ ಹಳೆ ಕಟ್ಟಡದಲ್ಲಿದ್ದು ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ರವರಲ್ಲಿ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಶಾಸಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಅದರ ಪರಿಣಾಮವಾಗಿ ಕೇಶವ ದೇವಾಲಯದ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆ ವಶದಲ್ಲಿದ್ದ 2ಎಕರೆ ಜಾಗವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿಕೊಡುವ ಸಂಬಂಧ ಪ್ರವಾಸೋದ್ಯಮ ಇಲಾಖೆಯಿಂದ ಜಂಟಿ ನಿರ್ದೇಶಕರ ತಂಡ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡೆಸಿದ್ದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಮತ್ತು ಶಾಸಕರು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರ ಕಾರ್ಯಕ್ಮೆ ಮೆಚ್ಚುಗೆ ವ್ಯಕ್ತವಾಗಿದೆ.

 ಸ್ಥಳ ಪರಿಶೀಲನೆ ವೇಳೆ  ಜಯಪಾಲ ಭರಣಿ  ಮೈಸೂರು ಜಿಲ್ಲಾ  ಪಂಚಾಯತ್ ಆಡಳಿತ ಪಕ್ಷದ ನಾಯಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ತಹಸೀಲ್ದಾರ್ ನಾಗೇಶ್, ಪ್ರವಾಸೋದ್ಯಮ ಇಲಾಖೆಯಿಂದ ಜಂಟಿ ನಿರ್ದೇಶಕ(ಪಿ&ಪಿ)ಹೆಚ್.ಪಿ.ಜನರ್ಧನ್
ಸೋಸಲೆ ಹೋಬಳಿ ಆರ್.ಐ. ಮಹದೇವನಾಯ್ಕ ಸೇರಿದಂತೆ ಮತ್ತಿತ್ತರರು ಹಾಜರಿದ್ದರು

Post a Comment

Previous Post Next Post