ಶ್ರವಣಬೆಳಗೊಳ : 74 ನೇ ಸ್ವಾತಂತ್ರ್ಯ ದಿನವನ್ನು ಮಧ್ಯರಾತ್ರಿ 12 ಗಂಟೆಗೆ ಆಚರಣೆ ಮಾಡಲಾಯಿತು. ಭಾ.ಜ.ಪ ರಾಜ್ಯ ಪರಿಷತ್ ಸದಸ್ಯ ಚಿಕ್ಕಬಿಳ್ತಿ ಪ್ರವೀಣ್ ಧ್ವಜಾರೋಹಣ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಜೆ.ರವಿ. ಹಾಗೂ ಮಂಜುಳ ಕುಮಾರ್ ಹಾಜರಿದ್ದರು. ಇದೆ ವೇಳೆ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಎಷ್ಟು ಹೇಳಿದರು ಸಾಧ್ಯವಿಲ್ಲ ಅವರ ಬಲಿದಾನ ತುಂಬಾ ಬೆಲೆ ತರುವಂತದ್ದು. ಹಾಗೂ ಕೊರೊನಾ ಇರುವ ಕಾರಣ ಈ ಬಾರಿ ಬಹಳ ಸರಳವಾಗಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು. ಇದೆ ವೇಳೆ . ಭಾ.ಜ.ಪ. ತಾಲ್ಲೂಕು ಯುವಮೊರ್ಚ ಕಾರ್ಯದರ್ಶಿ ಶ್ರವಣ್ .ಜಿ. ಹಾಗೂ ಕಾರ್ಯಕಾರಿಣಿ ಸದಸ್ಯ ಮನು ಹಾಗೂ ಹೊಸಳ್ಳಿ ಪುನೀತ್, ರಾಘವೇಂದ್ರ, ರೂಪೆಶ್ , ಎಸ್.ಕೆ. ಪುನೀತ್, ಗಗನ್ ಬಾಹುಬಲಿ , ರತನ್ ಇನ್ನೀತರಿದ್ದರು .
Tags
ಚನ್ನರಾಯಪಟ್ಟಣ