ಹಾಸನ:ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾ ಲಿನೆನ್ಸ್ ಬಟ್ಟೆ ಕಾರ್ಖಾನೆಯ ಕಾರ್ಮಿಕರು ಹಾಗೂ ಸಿಬ್ಬಂದಿ ಸೇರಿ 113 ಜನರಿಗೆ ಕರೊನಾ ದೃಢಪಟ್ಟಿದ್ದು, ಕಂಪನಿ ಸೀಲ್ ಡೌನ್ ಮಾಡಲಾಗಿದೆ.
ಸೋಂಕಿತರೆಲ್ಲರೂ ಶ್ರೀ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನೂ ಎರಡು ಸಾವಿರ ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ನಡೆಯಬೇಕಿದೆ. ಇದುವರೆಗೆ ನಡೆದ 500 ಪರೀಕ್ಷೆಯಲ್ಲಿ 113ಕ್ಕೂ ಹೆಚ್ಚು ಪಾಸಿಟಿವ್ ವರದಿಯಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಶನಿವಾರ ಮಧ್ಯಾಹ್ನ ಕಂಪನಿ ಸೀಲ್ ಡೌನ್ ಮಾಡಲಾಯಿತು.
Tags
ಹಾಸನ