ರಾಮನಾಥಪುರ:. ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹೊಗೆಸೊಪ್ಪು ಆಗಸ್ಟ್‍ನಲ್ಲಿ ಅನುಸರಿಸಬೇಕಾದ ಕೃಷಿ ಕಾರ್ಯಗಳ ಬಗ್ಗೆ ರಾಮನಾಥಪುರ ತಂಬಾಕು ಹರಾಜು ಕಟ್ಟೆ ಅಧೀಕ್ಷಕರಾದ ಅಮಲ್ ಡಿ.ಸಾಮ್ ಹಾಗೂ ಸಿದ್ದರಾಮದಾಂಗೆ ಅವರು ರೈತರು ಬೆಳದ ತಂಬಾಕು ಹದ ಗೊಳಿಸುವ ವಿಚಾರವಾಗಿ ಮಾಹಿತಿ ನೀಡಿದರು.
ರಾಮನಾಥಪುರ ಸುಬ್ರಹ್ಮಣ್ಯ ನಗರದಲ್ಲಿರುವ ಹರಾಜು ಮಾರುಕಟ್ಟೆ ವ್ಯಾಪ್ತಿಯ ರೈತರು ತವ ಹೊಗೆಸೊಪ್ಪು ಬೆಳೆದ ರೈತರು ಸರಿಯಾಗಿ ಬಲಿತು ಹದವಾಗಿ ಹಣ್ಣಾದ ಒಂದೇ ಸಮನಾದ ಎಲೆಗಳನ್ನು ಕಟಾವು ಮಾಡುವುದರಿಂದ ಅಧಿಕ ಇಳುವಳಿ ಮತ್ತು ಉತ್ತಮ ಗುಣಮಟ್ಟವನ್ನು ಪಡೆಯಬಹುದು. ಹೆಚ್ಚು ಎಲೆಗಳನ್ನು ಕರಕಡ್ಡಿಗಳಿಗೆ ಜೋಡಿಸುವುದಾಗಲಿ ಬೇರಲ್‍ನಲ್ಲಿ ಅತ್ಯಧಿಕ ಕರಕಡ್ಡಿ ಮಾಲೆಗಳನ್ನು ಜೋಡಿಸುವುದಾಗಿ ಮಾಡಬಾರದು. ಈ ರೀತಿ ಮಾಡಿದ್ದಲ್ಲಿ ಹದ ಮಾಡಲು ಯೋಗ್ಯವಾದ ಎಲೆಗಳ ಲಕ್ಷಣಗಳು ಈ ಕೆಳಗೆ ನಮೂದಿಸಿದಂತಿರಬೇಕು. ಅಂಚಿನ ಬಣ್ಣ ನಸು ಹಳದಿಯಾಗಿ ಮಾರ್ಪಟ್ಟಿರಬೇಕು. ಮೇಲೆ ಮಿತವಾದ ಚುಕ್ಕಿಗಳು ಕಂಡುಬರಬೇಕು. ಸುಕ್ಕಗೊಂಡು ಹೊಳಪನ್ನು ಕಳೆದುಕೊಂಡು ಕೆಳಭಾಗಕ್ಕೆ ಬಾಗಿಕೊಂಡಿರಬೇಕು.
ಭೂಮಿಯಲ್ಲಿ ಬೆಳದ ಎಲೆಗಳನ್ನು ಬೆಳಗಿನ ವೇಳೆಯಲ್ಲಿಯೇ ಮುರಿದು ಅದೇ ದಿನ ಸಂಜೆಯೊಳಗೆ ಬೇರಲ್‍ನಲ್ಲಿ ಜೋಡಿಸಿ ಹದ ಮಾಡುವ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಗಿಡದಲ್ಲಿ ಸರಿಯಾಗಿ ಬಲಿತ ಒಂದೆರಡು ಎಲೆಗಳನ್ನು ಮಾತ್ರ ಮುರಿದು ಹದ ಮಾಡಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮುರಿದ ಎಲೆಗಳು ಜಾಗರೂಕತೆ ವಹಿಸಿ ಬಿಸಿಲಿನ ಬೇಗೆಗೆ ಒಡ್ಡದಂತೆ ಗೋಣಿ ತಾಟಿನಿಂದ ಮುಚ್ಚಿ ತಕ್ಷಣವೇ ಸಾಗಿಸಿ ನೆರಳಿನಲ್ಲಿ ಜೋಡಿಸಬೇಕು. ಒಂದು ಟಾರ್ಪಲಿನ್ ಮೇಲೆ ಎಲೆಗಳನ್ನು ಜೋಡಿಸಿ ಎಲೆ ತೇವಾಂಶ ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು. ಮುರಿದ ಎಲೆಗಳನ್ನು ರಾಶಿ ಹಾಕದೇ ಗಾಳಿಯಾಡಲು ಅನುಕೂಲವಾಗುವಂತೆ ಕ್ರಮವಾಗಿ ಜೋಡಿಸುವುದು ಉತ್ತಮ ಬಲಿಯುವಿಕೆಯಲ್ಲಿ ಏಕರೂಪತೆ ಇಲ್ಲದಿದ್ದಲ್ಲಿ ಬಲಿಯುವಿಕೆಯ ಆಧಾರದ ಮೇಲೆ ಕಡು ಹಸಿರು ತಿಳಿ ಹಸಿರು ಮತ್ತು ಹಳದಿ ಎಲೆಗಳೆಂದು ಮೂರು ಗುಂಪಾಗಿ ವಿಂಗಡಿಸಿ ಪ್ರತ್ಯೇಕ ಕರಕಡ್ಡಿಗಳಿಗೆ ಕಟ್ಟಬೇಕು.
ತಂಬಾಕು ಕರೆ ಕಡ್ಡಿ ಕಟ್ಟುವುದು ;-ಅರೆಬಲಿತ ಕಡು ಹಸಿರು ಎಲೆಗಳುಳ್ಳ ಕರಕಡ್ಡಿಗಳನ್ನು ಬೇರಲ್ ಮೇಲ್ಬಾಗದಲ್ಲಿ ತಿಳಿ ಹಸಿರು ಬಣ್ಣದ ಸರಿಯಾಗಿ ಬಲಿತ ಎಲೆಗಳುಳ್ಳ ಕರಕಡ್ಡಿಗಳನ್ನು ಮಧ್ಯಭಾಗದಲ್ಲೂ ಅತಿಬಲಿತ ಹಳದಿ ಎಲೆಗಳುಳ್ಳು ಕರಕಡ್ಡಿಗಳನ್ನು ತಳ ಭಾಗದಲ್ಲೂ ಜೋಡಿಸಬೇಕು. ಮುರಿದ ಎಲೆಗಳನ್ನು ವಿಂಗಡಿಸದೇ ಮಿಶ್ರ ಮಾಡಿ ಕರಕಡ್ಡಿಗಳಿಗೆ ಕಟ್ಟುವುದು ತಪ್ಪು. ಬಲಿಯುವಿಕೆಯ ಆಧಾರದ ಮೇಲೆ ಕರಕಡ್ಡಿಗಳನ್ನು ಜೋಡಿಸುವುದರಿಂದ ಹದ ಮಾಡುವಾಗ ಉಂಟಾಗಬಹುದಾದ ನೂನ್ಯತೆಗಳನ್ನು ಹೋಗಲಾಡಿಸಿ ಕೆಳದರ್ಜೆಯ ಹೊಗೆಸೊಪ್ಪಿನ ಉತ್ಪಾದನೆಯನ್ನು ಕಡಿಮೆಗೊಳಿಸಬಾರದು. ಎಲೆಯ ಬಲಿಯುವಿಕೆಯಲ್ಲಿ ತಳಿಗಳ ನಡುವೆ ವ್ಯತ್ಯಾಸವಿರುವುದರಿಂದ ವಿವೇಚನೆಯಿಂದ ತಳಿಗಳಿಗೆ ಅನುಸಾರವಾಗಿ ಎಲೆ ಮುರಿಯುವ ಕಾರ್ಯಗಳನ್ನು ಕೈಗೊಳ್ಳಬೇಕು. ಹೆಚ್ಚು ಎಲೆಗಳನ್ನು ಕರಕಡ್ಡಿಗಳಿಗೆ ಕಟ್ಟುವುದಾಗಲೀ ಬೇರಲ್‍ನಲ್ಲಿ ಜಾಸ್ತಿ ಕರಕಡ್ಡಿಗಳನ್ನು ಜೋಡಿಸುವುದಾಗಲಿ ಮಾಡಬಾರದು. ಈ ರೀತಿ ಮಾಡಿದ್ದಲ್ಲಿ ಶಾಖದ ಹರಡುವಿಕೆಯನ್ನು ಸಮನಾಗಿರದೇ ತೇವಾಂಶ ಆವಿಯಾಗದೇ ಹೆಚ್ಚು ಕಾಲ ಎಲೆಯಲ್ಲಿಯೇ ಉಳಿಯುವುದರಿಂದ ಮಚ್ಚೆ ಇತ್ಯಾದಿ ನೂನ್ಯತೆಗಳು ಕಂಡುಬರುತ್ತವೆ ಎಂದರು.
ಬಿತ್ತನೆ ತಳಿ ಆಯ್ಕೆ:- ರತ್ನ ಮತ್ತು ಭವ್ಯ ತಳಿಗಳಲ್ಲಿ ಆರೇಳು ದಿನಗಳ ಅಂತರದಲ್ಲಿ ಪ್ರತಿ ಸಲ 2- 3 ಎಲೆಗಳನ್ನು ಬಲಿತ ಎಲೆಗಳನ್ನು ಮುರಿಯಬಹುದು. ಕಾಂಚನ ತಳಿಯಲ್ಲಿ ಎಲೆಯ ಬಲಿಯುವಿಕೆ ನಿಧಾನವಾಗಿರುವುದರಿಂದ ಗಿಡದ ತಳಭಾಗದ ಎಲೆ ಮುರಿಯುವಿಕೆಯ ನಡುವಿನ ಅಂತರ ಏಳು ದಿನ ಹಾಗೂ ಮೇಲ್ಭಾಗದ ಎಲೆಗಳಿಗೆ ಒಂಬತ್ತು ದಿನಗಳ ಅಂತರ ಬೇಕಾಗುತ್ತದೆ. ಈ ತಳಿಯಲ್ಲಿ ಪ್ರತಿ ಸಲ 1- 2 ಎಲೆಗಳ ಮಾತ್ರ ಸರಿಯಾಗಿ ಬಲಿತಿದ್ದು ಮುರಿಯಲು ಸಿದ್ದವಾಗಿರುತ್ತದೆ. ಎಲೆ ಕಟ್ಟುವುದು ಮತ್ತು ಬೇರಲ್‍ನಲ್ಲಿ ಕಡ್ಡಿಗಳನ್ನು ಜೋಡಣೆ ಮಾಡುವುದು.
ಎಲೆಗಳ ಹಿಂಭಾಗವು ಒಂದಕ್ಕೊಂದು ಹೊಂದಿಕೊಂಡಂತೆ ಎರಡರಿಂದ ಮೂರು ಎಲೆಗಳಿಗೊಂದು ಗೊಂಚಲಿನಂತೆ ಜೋಡಿದಾರ ಪದ್ದತಿಯಲ್ಲಿ ಕರಕಡ್ಡಿಗಳಿಗೆ ಎಲೆಗಳನ್ನು ಕಟ್ಟಬೇಕು. ಪ್ರತಿ ಕಡ್ಡಿಯಲ್ಲಿ 32- 36 ಗೊಂಚಲುಗಳು ಮೀರದಂತೆ ಎಚ್ಚರವಹಿಸಬೇಕು. ಎಲೆಗಳ ನಡುವೆ ಗಾಳಿಯಾಡಲು ಹಾಗೂ ಶಾಖ ಸಮನಾಗಿ ಹರಡಲು ಸಹಾಯವಾಗುವಂತೆ ಸಾಕಷ್ಟು ಅಂತರವಿರಿಸಿ ಬೇರಲ್ ಅಳತೆಗನುಸಾರವಾಗಿ ಕೆಳಗೆ ಶಿಫಾರಸ್ಸು ಮಾಡಿದಷ್ಟು ಕರಕಡ್ಡಿಗಳನ್ನು ಜೋಡಿಸಬೇಕು ಎಂದು ಮಾಹಿತಿ ನೀಡಿದ್ದಾರೆ.