ಬೀದಿ ನಾಟಕಕ್ಕೆ ಸರಕಾರ ಆಧ್ಯತೆ ನೀಡಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಬಿ.ಟಿ. ಮಾನವ ಮನವಿ

ಹಾಸನ: ಸರಕಾರದ ವಿವಿಧ ಇಲಾಖೆಗಳಲ್ಲಿ ನಡೆಸಲಾಗುವ ಜಾಗೃತಿ ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳನ್ನು ಸ್ಥಳೀಯ ಕಲಾವಿದರಿಗೆ ನೀಡುವಂತೆ ಹಾಸನ ಜಿಲ್ಲಾ ಬೀದಿ ನಾಟಕ ಕಲಾವಿದರ ಒಕ್ಕೂಟದ ಬಿ.ಟಿ. ಮಾನವ ಮನವಿ ಮಾಡಿದರು.



      ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ವಿವಿಧ ಇಲಾಖೆಗಳಿಂದ ಜಾಗೃತಿಯಂತಹ ಹಲವಾರು ಕಾರ್ಯಕ್ರಮವನ್ನು ಹಾಸನ ಜಿಲ್ಲೆಯ ಬೀದಿ ನಾಟಕಗಾರರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆದರೇ ಇತ್ತಿಚಿಗೆ ಎನ್.ಜಿ.ಓ. ಗಳಿಗೆ ಮತ್ತು ಸಂಘ-ಸAಸ್ಥೆಗಳಿಗೆ ಕಾರ್ಯಕ್ರಮ ನೀಡುತ್ತಿರುವುದರಿಂದ ಸ್ಥಳೀಯ ಕಲಾವಿದರ ಜೀವನೋಪಾಯಕ್ಕೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು. ಕೊರೋನಾ ಹರಡಿದ ವೇಳೆ ಕಲಾವಿದರು ತೀರ ಸಂಕಷ್ಟಕ್ಕೀಡಾಗಿದ್ದು, ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಕಲಾವಿದರು ಎಂದರೆ ಅವರು ಭಿಕ್ಷÄಕರಲ್ಲ. ತಮ್ಮ ಕಲೆಯನ್ನು ಪ್ರದರ್ಶಿಸಿ ಮತ್ತೊಬ್ಬರಿಗೆ ಅರ್ಥ ಮಾಡಿಸುವವರು. ನಮ್ಮನ್ನು ಸರಕಾರ ಕಡೆಗಣಿಸದೇ ಬೀದಿ ನಾಟಕದ ಕಲಾವಿದರಿಗೆ ಆಧ್ಯತೆ ಕೊಡಬೇಕು. ಆಯಾ ಜಿಲ್ಲೆಯ ಕಲಾವಿದರಿಗೆ ಅವಕಶ ಕೊಡುವ ಮೂಲಕ ಕಲಾವಿದರನ್ನು ಗೌರವಿಸುವಂತೆ ಮನವಿ ಮಾಡಿದರು.

        ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬೀದಿ ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷ ಗುಂಡುರಾಜು, ಹಿರಿಯ ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಕುಮಾರ್, ಕಾರ್ಯದರ್ಶಿ ನೀಲಮ್ಮ, ದರ್ಶನ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post