ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು 2005-06 ನೇ ಸಾಲಿನಲ್ಲಿ ಹಾಸನದಲ್ಲಿ 100 ವಿದ್ಯಾರ್ಥಿಗಳ ಪ್ರದೇಶಾತಿಯೊಂದಿಗೆ ಪ್ರಾರಂಭವಾಗಿದ್ದು , ಇದುವರೆಗೂ ರಾಜ್ಯದಲ್ಲಿ ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯುನ್ನತ ಕಾಲೇಜಲ್ಲಿ ಒಂದಾಗಿದೆ . 2015-16 ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 100 ರಿಂದ 150 ಕ್ಕೆ ಹೆಚ್ಚಿಸಿ ಸರ್ಕಾರವು ಆದೇಶಿಸಿದೆ . ವಿದ್ಯಾರ್ಥಿಗಳ ಸಂಖ್ಯೆಯನ್ನು 150 ಕ್ಕೆ ಹೆಚ್ಚಿಸಿರುವುದರಿಂದ ಹಾಗೂ ಎಂ.ಸಿ.ಐ. ನಿಯಮಾವಳಿಗಳ ಪ್ರಕಾರ ಹಾಲಿ ಅನುಮೋದನೆ ಗೊಂಡಿರುವ ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 25 ಬೋಧಕ ಹಾಗೂ 99 ಬೋಧಕೇತರ ಹುದ್ದೆಗಳನ್ನು ಸೃಜಿಸಬೇಕಾಗಿತ್ತು . ಆದರೆ ಕಳೆದ ಶೈಕ್ಷಣಿಕ ವರ್ಷದವರೆಗೂ ಸರ್ಕಾರವು ಈ ಹೆಚ್ಚುವರಿ ಹುದ್ದೆಗಳನ್ನು ಸೃಜಿಸದ ಹಿನ್ನೆಲೆಯಲ್ಲಿ MBBS ಪದವಿ ಕೋರ್ಸ್‌ಗಳ ಮಾನ್ಯತೆಯೇ ರದ್ದಾಗುವ ಅಪಾಯವಿರುವುದನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರಲ್ಲಿ ಶಾಸನ ಪ್ರೀತಮ್ ಜೆ ಗೌಡ ಮಾಡಿಕೊಂಡ ಮನವಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಸ್ಪಂದಿಸಿ ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಒಳಿತಿಗಾಗಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅತೀ ಅವಶ್ಯವಿದ್ದ ಹುದ್ದೆಗಳ ಪೈಕಿ 15 ಹೆಚ್ಚುವರಿ ಬೋಧಕ ಹುದ್ದೆಗಳನ್ನು ಮಂಜೂರು ಮಾಡುವ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಹಾಗೂ ಸಂಸ್ಥೆಯ ಉಳಿವಿಗಾಗಿ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ .
Tags
ಹಾಸನ