ಹಾಸನ: ತಾಲೂಕಿನ ಕೋರವಂಗಲದಲ್ಲಿರುವ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಎ.ಎಲ್.ಎಫ್.ಎ. ಹಾಗೂ ಕಾಲೇಜಿನ ಸಹಯೋಗದಲ್ಲಿ ವನೋಮಹೋತ್ಸವನ್ನು ಆಚರಿಸಲಾಯಿತು.
ಇದೆ ವೇಳೆ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಸ್.ಪಿ. ಪ್ರಕಾಶ್ ರವರು, ಈ ಪ್ರಕೃತಿ ಉಳಿದರೆ ನಾವೆಲ್ಲಾ ಉಳಿಯಲು ಸಾಧ್ಯ. ಆದರೇ ಇಂದು ನಾವುಗಳು ನಿಸರ್ಗವನ್ನು, ಗಿಡ-ಮರಗಳನ್ನು, ಕಲ್ಯಾಣಿಗಳನ್ನು ನಾಶ ಮಾಡುತ್ತಿರುವುದಕ್ಕೆ ಪರಿಸರದ ವಾತವರಣದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಣದಿಂದ ಎಲ್ಲಾವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಉತ್ತಮವಾದ ನಿಸರ್ಗವನ್ನು ತರಬೇಕಾದರೇ ಸಾರ್ವಜನಿಕರಲ್ಲಿ ಮೊದಲು ಜಾಗೃತಿ ಬರಬೇಕು. ಮಕ್ಕಳಿಂದಲೇ ನಿಸರ್ಗದ ಬಗ್ಗೆ ಪ್ರೀತಿ, ಗಿಡವನ್ನು ಬೆಳೆಸುವ ಗುಣ ಬರಬೇಕು ಎಂದು ಅಭಿಪ್ರಾಯಪಟ್ಟರು. ಪರಿಸರಕ್ಕೆ ಏನಾದರೂ ಹಾನಿ ಉಂಟಾದರೇ ಯಾವ ರೀತಿ ದುಷ್ಪಾರಿಣಾಮ ಉಂಟಾಗುತ್ತದೆ ಎಂಬುದು ಎಲ್ಲಾರಿಗೂ ತಿಳಿದಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆತಂಕವ್ಯಕ್ತಪಡಿಸಿದರು. ನೀರು, ಗಾಳಿ, ನೆಲವಾಗಿರಬಹುದು ಎಲ್ಲಾದರ ಮೇಲು ಸಹಾ ನಾವು ವಿವಿಧ ಚಟುವಟಿಕೆಯನ್ನು ನಡೆಸುವುದರ ಮೂಲಕ ಹಾನಿ ಉಂಟು ಮಾಡುತ್ತಿದ್ದೇವೆ. ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲಾರ ಜವಬ್ಧಾರಿ ಮತ್ತು ಕರ್ತವ್ಯ ಎಂದು ಬಾವಿಸಬೇಕು. ಇಂದು ಉತ್ತಮ ಪರಿಸರ ಕಾಪಾಡಿಕೊಂಡು ಬಂದರೇ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರ ಕೊಡಲು ಸಾಧ್ಯ ಎಂದರು. ಲಯನ್ಸ್ ಕ್ಲಬ್, ಲಿಯೋ ಕ್ಲಬ್, ಎ.ಎಲ್.ಎಫ್.ಎ. ಹಾಗೂ ಕಾಲೇಜಿನ ಸಹಯೋಗದಲ್ಲಿ ವನೋಮಹೋತ್ಸವನ್ನು 200 ಸಸಿ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಹೆಚ್.ಆರ್. ಚಂದ್ರೇಗೌಡ, ಕಾರ್ಯದರ್ಶಿ ಹೆಚ್.ಕೆ. ನಾಗೇಶ್, ಲಯನ್ಸ್ ವೈದ್ಯರಾದ ಎಸ್. ಜಯಣ್ಣ, ಕಮ್ಯೂನಿಟಿ ಛೇರ್ಮನ್ ಸಿ. ಶಿವಸ್ವಾಮಿ, ಎಸ್.ಪಿ. ಅನಂತರಾಜು ಕ್ಲಬ್ ಸಲಹೆಗಾರರು ಅಶೋಕ್ ಕುಮಾರ್, ಕೆ. ರಮೆಶ್, ರೂಪ ಆನಂದ್, ಹೆಚ್.ಎಸ್. ಆನಂದ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ