ಡಿಕೆಶಿ ಆರೋಗ್ಯ ಸುಧಾರಣೆಗಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ 501 ಕಾಯಿ ಪ್ರಾರ್ಥನೆ

ಹಾಸನ: ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಆರೋಗ್ಯ ಸುಧಾರಣೆಗಾಗಿ ಪಕ್ಷದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದಲ್ಲದೇ 501 ತೆಂಗಿನ ಕಾಯಿಯನ್ನು ಹೊಡೆಯುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
       ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ಹಾಸನ ನಗರದ ದೇವಿಗೆರೆ, ಗಾಂಧಿ ಬಜಾರ್ ಬಳಿ ಇರುವಶ್ರೀ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂದೆ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರ ಆರೋಗ್ಯ ಮತ್ತು ಸಮಾಜದ ಜನರ ಆರೋಗ್ಯ ಸುಧಾರಣೆಗಾಗಿ ಪಕ್ಷದ ಕಾರ್ಯಕರ್ತರು 501 ತೆಂಗಿನಕಾಯಿಯನ್ನು ಹೊಡೆದು ಪ್ರಾರ್ಥಿಸಿದರು. ನಂತರ ಅಜಾದ್ ರಸ್ತೆಯಲ್ಲಿರುವ ಅಜರತ್ ಸೈಯಾದ್ ಅಹಮದ್ ಶಾ ಖಾದ್ರಿ ಉರುಫ್ ಗುಜರಾತಿ ಬಾದ್ ಶಾ ದರ್ಗದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಎನ್.ಆರ್. ವೃತ್ತದ ಬಳಿ ಇರುವ ಅಂತ ಅಂತೋಣಿಯವರ ಚರ್ಚ್‍ನಲ್ಲಿ ಪಾರ್ಥಿಸಿದರು. 
      ಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಹಾಸನ ಗ್ರಾಮಾಂತರ ಬ್ಲಾಕ್ ಸಮಿತಿ ಅಧ್ಯಕ್ಷ ರಘು ಮಾತನಾಡಿ, ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೋನಾ ಖಾಯಿಲೆಯಿಂದ ಜಗತ್ತೆ ತತ್ತರಿಸಿ ಹೋಗಿದೆ. ಕೆಲ ದಿವಸಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದಂತಹ ಡಿ.ಕೆ. ಶಿವಕುಮಾರ್ ರವರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಈಗಾಗಾಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಕೊರೋನಾ ಸೋಂಕಿನಿಂದ ದೂರವಾಗಿ, ಗುಣಮುಖರಾಗಿ ವಾಪಸ್ ಬರಲಿ ಎಂದು ಸಮಾಜದ ಜನತೆಗೂ ಕೂಡ ಬೇಡಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಾಸನ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಪ್ರದೇಶದಿಂದ 501 ತೆಂಗಿನಕಾಯಿ ಹೊಡೆದು ದೇವರಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಜೊತೆಗೆ ಮಸೀದಿಗಳಲ್ಲಿ, ಚರ್ಚ್‍ಗಳಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು. 
      ಈಸಂದರ್ಭದಲ್ಲಿ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಮದ್ ಆರೀಪ್, ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ರಂಜೀತ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಣ್ಣ, ಶಿವಕುಮಾರ್, ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯೆ ನೇತ್ರಾವತಿ ದೇವರಾಜು ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post