ಎರಡು ತಿಂಗಳಾದರೂ ಸರಕಾರಕ್ಕೆ ನೀಡದ ಸಭೆಯ ನಡವಳಿಕೆ : ಹೆಚ್.ಪಿ. ಸ್ವರೂಪ್


ಹಾಸನ: ಕಳೆದ ಎರಡು ತಿಂಗಳಾದರೂ ನಡೆದ ಸಭೆಯ ಬಗ್ಗೆ ಇದುವರೆಗೂ ಜಿಪಂ ಸದಸ್ಯರಿಗೂ ಮತ್ತು ಸರಕಾರಕ್ಕೆ ನಡವಳಿಕೆ ಪತ್ರ ನೀಡಿರುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರಗಲ ತಾರತಮ್ಯ ನೀತಿ ಅನುಸಿರಿಸಿದರೇ ಜೆಡಿಎಸ್ ಪಕ್ಷದವತಿಯಿಂದ ಹೋರಾಟ ಮಾಡುವುದಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಎಚ್ಚರಿಸಿದರು.
       ನಗರದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಜೆಡಿಎಸ್ ಪಕ್ಷಕ್ಕೆ ಬಹುಮತವಿದ್ದರೂ ಎಲ್ಲಾ ಸದಸ್ಯರು ಪಕ್ಷ ಭೇದ ಮರೆತು ಇಲ್ಲಿಯವರೆಗೂ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇವೆ. ಆದರೇ ಜಿಪಂ ಅಧ್ಯಕ್ಷರಾದ ಶ್ವೇತಾ ದೇವರಾಜುರವರು ಇತರೆ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೇ ಸರ್ವಾಧಿಕಾರಿ ಧೋರಣೆಯಿಂದ ನಡೆದುಕೊಳ್ಳುತಿರುವುದಾಗಿ ಖಂಡಿಸಿದರು. 
      2020 ಮೇ 27ಕ್ಕೆ ಅವಧಿ ಮುಗಿದಿರುವುದರಿಂದ ಜಿಪಂ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗುತ್ತದೆ.  ಕೂಡಲೇ ಇರುವ ಸಮಿತಿಗಳ, ಅಧ್ಯಕ್ಷರು ಹಾಗೂ ಸದಸ್ಯರುಗಳ ಚುನಾವಣೆಯ ದಿನಾಂಕವನ್ನು ನಿಗಧಿಗೊಳಿಸಲು ಒತ್ತಾಯಿಸುವುದಾಗಿ ಹೇಳಿದರು. ಜಿಲ್ಲಾ ಪಂಚಾಯತಿಯಲ್ಲಿ ಬಹುಮತ ಹೊಂದಿರುವ ಜೆಡಿಎಸ್ ಪಕ್ಷದ ಸದಸ್ಯರುಗಳು ಎಲ್ಲಾ ಅಧ್ಯಕ್ಷರಿಗೆ ಪತ್ರ ಮೂಲಕ ಕೋರಲಾಗಿದೆ. ನಮ್ಮ ಪತ್ರದ ಮೇರೆಗೆ ಅಧ್ಯಕ್ಷೆ ಶ್ವೇತಾದೇವರಾಜು ರವರು ಸೆಪ್ಟಂಬರ್ 5ಕ್ಕೆ ಜಿಪಂ ವಿಶೇಷ ಸಭೆಯನ್ನು ನಿಗಧಿ ಮಾಡಿದ್ದಾರೆ. ಸಭೆಯ ಅಜೆಂಡದಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ನೇಮಕ ಮಾಡುವ ಬಗ್ಗೆ ಯಾವ ವಿಷಯ ಸೂಚಿ ಇರುವುದಿಲ್ಲ ಎಂದು ಕಿಡಿಕಾರಿದರು. ಜೂನ್ ನಲ್ಲಿ ಸಾಮಾನ್ಯ ಸಭೆ ನಡೆದು ಸುಮಾರು 2 ತಿಂಗಳು ಕಳೆದರೂ ಸಹ ಇದುವರೆಗೂ ಸಭೆಯ ನಡವಳಿಕೆಯನ್ನು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮತ್ತು ಸರಕಾರಕ್ಕೆ ನೀಡಿರುವುದಿಲ್ಲ. ಸಭೆಯ ನಡವಳಿಕೆಯನ್ನೇ ತಿದ್ದುವ ಸಂಭವ ಇರುವುದರಿಂದ ಇದು ಪಂಚಾಯತ್ ರಾಜ್ ನಿಯಮಗಳಿಗೆ ವಿರುದ್ಧವಾದ ಕ್ರಮವಾಗಿದ್ದು, ಜಿಪಂ ಅಧ್ಯಕ್ಷರ ಸರ್ವಾದಿಕಾರಿ ಧೋರಣೆಯಾಗಿದೆ ಎಂದು ದೂರಿದರು. ವಿಧಾನಸಭಾ ಅಧಿವೇಶನ ನಡೆಯುವುದರಿಂದ ಶಾಸಕರು ಸಭೆಗೆ ಬರಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ ಗಣನೆಗೆ ತೆಗೆದುಕೊಳ್ಳದೇ ಸಭೆ ನಡೆಸಿ 87 ಕಾಮಗಾರಿಗಳಿಗೆ 1 ಕೋಟಿ ರೂಗಳ ಕ್ರಿಯಾ ಯೋಜನೆಯಡಿ ಕೈಗೆತ್ತಿಕೊಳ್ಳಲು ಅನುಮೋದನೆಗೆ ಮಂಡಿಸಿದ್ದಾರೆ. ಇದೊಂದು ಏಕಪಕ್ಷೀಯ ನಿರ್ಧಾರವಾಗಿದ್ದು, ಸಭೆಯ ತೀರ್ಮಾನಗಳು ಸಿಂದುರವಾಗಿರುವುದಿಲ್ಲ ಎಂದರು. 
      ಜಿಲ್ಲಾ ಪಂಚಾಯತಿಯಲ್ಲಿ ಅಳವಡಿಸಲಾಗಿರುವ ಲಿಫ್ಟ್ ಬಗ್ಗೆ ಹಾಗೂ ಜಿಪಂ ಅಧ್ಯಕ್ಷರ ಮತ್ತು ಉಪಧ್ಯಕ್ಷರ ಪ್ರವಾಸದ ಭತ್ಯೆ ಬಗ್ಗೆ ಹಲವಾರು ದೂರುಗಳು ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಸರ್ವಾನುಮತದಿಂದ ತೀರ್ಮಾನವಾಗಿದೆ. ಸಭೆಯ ವಿಷಯಗಳನ್ನು ದಾಖಲಿಸಿಲು ಕೋರಿದ್ದರೂ ಸಭೆಯ ನಡವಳಿಕೆ ನೀಡಿರುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು. 
     15ನೇ ಹಣಕಾಸಿನಲ್ಲಿ 6 ಕೋಟಿ 20 ಲಕ್ಷ ರೂಗಳು ಇದೆ. ಮೇ ತಿಂಗಳ 15ರ ಹಣಕಾಸು ಒಂದುವರೆ ಕೋಟಿ ರೂ ಇದ್ದು, ಇನ್ನು ಜಿಪಂ ಅಧ್ಯಕ್ಷರ ವಿವೇಚನ ಕೋಟ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇದರಲ್ಲಿ ಇದ್ದಾರೆ ಇದರಲ್ಲಿ 1 ಕೋಟಿ ರೂಗಳ ಹಣ ಇರುತ್ತದೆ ಎಂದರು. ಅಧ್ಯಕ್ಷರ ವಿವೇಚನ ಹಣದಲ್ಲಿ ಅರಸೀಕೆರೆ ಕ್ಷೇತ್ರಕ್ಕೆ 38 ಲಕ್ಷ, ಅರಕಲಗೂಡಿಗೆ 12 ಲಕ್ಷ, ಚನ್ನರಾಯಪಟ್ಟಣ ಕ್ಷೇತ್ರಕ್ಕೆ 22 ಲಕ್ಷ ರೂಗಳು, ಸಕಲೇಶಪುರ ಕ್ಷೇತ್ರಕ್ಕೆ 2 ಲಕ್ಷ, ಹೊಳೆನರಸೀಪುರ ಕ್ಷೇತ್ರಕ್ಕೆ 4 ಲಕ್ಷ ಹಾಗೂ ಆಲೂರು ಕ್ಷೇತ್ರಕ್ಕೆ 4 ಲಕ್ಷ ಹಣ ಹಂಚಿಕೆ ಮಾಡಿರುವುದಾಗಿ ಹೇಳಿದರು. ಜಿಲ್ಲಾ ಪಂಚಾಯತಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛóತಾ ಮಿಷನ್ ಸಮಿತಿ ಸಭೆಯನ್ನು ನಡೆಸಿದ್ದು, ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿದಂತೆ ಜಿಲ್ಲಾ ಪಂಚಾಯತ್ ವಿವೇಚನೇಡಿಯಲ್ಲಿ ಲಭ್ಯವಿರುವ 100 ಲಕ್ಷಗಳ ಅನುಧಾನವನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ತೀವ್ರ ಎದುರಿಸುತ್ತಿರುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸುವುದಾಗಿ ಹೇಳಿದ ಎಲ್ಲಾವನ್ನು ಪರಿಗಣೆಗೆ ತೆಗೆದುಕೊಳ್ಳದಿದ್ದರೇ ಹೋರಾಟದ ಹಾದಿ ಹಿಡಿಯುವುದಾಗಿ ಎಚ್ಚರಿಸಿದರು. 
     ಸುದ್ದಿಗೋಷ್ಠಿಯಲಿ ಸದಸ್ಯೆ ಮಮತಾರಮೇಶ್, ಜೆಡಿಎಸ್ ಪಕ್ಷದ ಶಿವಣ್ಣ, ದರ್ಶನ್ ಬಾಬು ಇತರರು ಉಪಸ್ಥಿತರಿದ್ದರು.
ಕೊನೆಗೂ ಎಚ್ಚೆತ್ತುಕೊಂಡ ನಗರಸಭೆ, ಪೊಲೀಸ್ ಇಲಾಖೆ
ನಿರ್ಗತಿಕರನ್ನು ಹುಡುಕಿ ಪುನರ್ ವಸತಿ ಕೇಂದ್ರಕ್ಕೆ ರವಾನೆ
ಹಾಸನ: ನಗರದ ಹೃದಯ ಬಾಗದ ರಸ್ತೆ ಬಳಿ ನಿರ್ಗತಿಕ ಓರ್ವಳ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ನಗರಸಭೆ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರುಗಳು ಸೇರಿ ಹಾಸನ ನಗರದ ಸುತ್ತ ಮುತ್ತ ಸಂಚರಿಸಿ ನಿರ್ಗತಿಕರುಗಳು ಮತ್ತು ಭಿಕ್ಷುಕರನ್ನು ಗುರುತಿಸಿ ಪುನರ್ ವಸತಿ ಕೇಂದ್ರಕ್ಕೆ ರವಾನೆ ಮಾಡಿದ ಘಟನೆ ನಡೆದಿದೆ.
        ಕಳೆದ ಎರಡು ದಿನಗಳ ಹಿಂದೆ ನಗರದ ಎನ್.ಆರ್. ವೃತ್ತ, ರಸ್ತೆ ಬಳಿ ಬಾಗಿಲು ಹಾಕಿದ ಅಂಗಡಿಯೊಂದರ ಮುಂದೆ ನಿರ್ಗತಿಕರಾದ ಮಹಿಳೆ ಓರ್ವಳನ್ನು ಮೊದಲು ಕೊಲೆ ಮಾಡಿ ನಂತರದಲ್ಲಿ ಸತ್ತ ಹೆಣಕ್ಕೆ ಅನೇಕ ಬಾರಿ ಅತ್ಯಾಚಾರ ಮಾಡಿದ ಘಟನೆಯು ಇಲ್ಲಿನ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈ ಬಗ್ಗೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಗ್ಗೆ ಪ್ರಕಟ ಮಾಡಿತ್ತು. ಕೊನೆಗೂ ಎಚ್ಚೆತ್ತುಕೊಂಡ ನಗರಸಭೆಯು ಗುರುವಾರ ಬೆಳಿಗ್ಗೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಹಾಸನ ನಗರ ಸಂಚರಿಸಿ ದಾರಿಯಲ್ಲಿ ಕಂಡ, ಹಾಗೂ ಅಲ್ಲಿ ಇಲ್ಲಿ ಬೀದಿಯಲ್ಲಿಯೇ ಮಲಗಿದವರನ್ನು ಗುರುತಿಸಿ ಒಟ್ಟು 40 ಜನ ಭೀಕ್ಷುಕರನ್ನು ಮತ್ತು ನಿರ್ಗತಿಕರನ್ನು ಕರೆತರಲಾಯಿತು. ಇವರಲ್ಲಿ 32 ಜನ ಪುರುಷರು, 8 ಜನ ಮಹಿಳೆಯರು ಸೇರಿ ಎಲ್ಲಾರನು ಪರೀಕ್ಷೆಗೆ ಒಳಪಡಿಸಿದರು. ಇವರಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್ ಬಂದಿದ್ದರೇ ಅಂತವರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗುವುದು. ಇನ್ನು ವಯೋ ವೃದ್ಧರನ್ನು ಒಂದು ಕೇಂದ್ರಕ್ಕೆ, ಯುವಕರಾಗಿರುವವರನ್ನು ಮತ್ತೊಂದು ಕಡೆಗೆ ಕಳುಹಿಸುವುದಾಗಿ ಹೇಳಿದ್ದಾರೆ. 
       ಇದೆ ವೇಳೆ ಎಎಸ್ಪಿ ನಂದಿನಿ ರವರು ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರ ವ್ಯಾಪ್ತಿಯಲ್ಲಿ ಈ ಹಿಂದೆ ಹಲವಾರು ಘಟನೆಗಳು ನಡೆದ ಹಿನ್ನಲೆಯಲ್ಲಿ ಮುನ್ನೇಚ್ಚರಿಕ ಕ್ರಮವಾಗಿ ಭೀಕ್ಷುಕರು, ಮಾನಸಿಕ ಅಸ್ವಸ್ಥರನ್ನು ಮತ್ತು ನಿರ್ಗತಿಕರನ್ನು ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನಮ್ಮ ಪೊಲೀಸ್ ಇಲಾಖೆವತಿಯಿಂದ ಸುಮಾರು 40 ಜನರನ್ನು ರಕ್ಷಣೆ ಮಾಡಿದ್ದೇವೆ ಎಂದರು. ತಾತ್ಕಲಿಕವಾಗಿ ಆಶ್ರಯ ನೀಡುವ ಕೆಲಸವಾಗಿದೆ. ಕೊರೋನಾ ಪರೀಕ್ಷೆ ಕೂಡ ಮಾಡಿಸಿದ ಬಳಿಕ ಸಂಬಂಧ ಪಟ್ಟ ವಸತಿ ಗೃಹಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗುವುದು. ಮುಂದೆ ತಾಲೂಕು ಕೇಂದ್ರಗಳಲ್ಲು ಕಾರ್ಯಚರಣೆ ಮಾಡಲಾಗುವುದು. ಈ ರೀತಿಯ ವ್ಯಕ್ತಿಗಳು ಎಲ್ಲಾದರೂ ಕಂಡು ಬಂದರೇ ಪೊಲೀಸ್ ಇಲಾಖೆಗೆ ಇಲ್ಲವೇ ನಗರಸಭೆಗೆ ಮಾಹಿತಿಯನ್ನು ಕೊಡುವಂತೆ ಮನವಿ ಮಾಡಿದರು. 
       ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಮೊನ್ನೆ ಹಾಸನ ನಗರದಲ್ಲಿ ನಡೆದ ಘಟನೆಯ ಆಧಾರದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿರವರ ಮಾರ್ಗದರ್ಶನದಲ್ಲಿ ಹಾಸನ ಮುಖ್ಯ ಭಾಗಗಳಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಈ ವೇಳೆ ಒಟ್ಟು 40 ಜನರನ್ನು ಕರೆದೊಯ್ದು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು. ನಂತರದಲ್ಲಿ ಇವರನ್ನು ಪುನರ್ ವಸತಿ ಕೇಂದ್ರಕ್ಕೆ ರವಾನಿಸಲಾಗುವುದು. ಅಲ್ಲಿವರೆಗೂ ಸಿಡಿಪಿಒ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದರು. 

Post a Comment

Previous Post Next Post