ಸಿಪಿಐ(ಎಂ) ಕೇಂದ್ರ ಸಮಿತಿಯಿಂದ ಮೋದಿ ಸರಕಾರದ ಜನ ವಿರೋಧಿ ಆಚರಣೆ


ಸಕಲೇಶಪುರ:  ಮೋದಿ ಸರಕಾರದ ಜನವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ಸಿಪಿಐ(ಎಂ) ಕೇಂದ್ರ ಸಮಿತಿ ಕಾರ್ಯಕರ್ತರು ನಡೆಸಿದ.ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.

ಪ್ರಮುಖ ಆಗ್ರಹಗಳು: 
ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಬಡ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ೬ ತಿಂಗಳ ವರೆಗೆ  ತಿಂಗಳಿಗೆ ರೂ. ೭೫೦೦ ನಗದು ವರ್ಗಾವಣೆ ಮಾಡಬೇಕು. 

ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ ೧೦ ಕೆ.ಜಿ.ಯಂತೆ  ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು.  

 ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಿ ಕೂಲಿ ದರವನ್ನು ಏರಿಸಿ, ವರ್ಷದಲ್ಲಿ  ೨೦೦ ದಿನಗಳ ಕೆಲಸದ ಖಾತ್ರಿಯನ್ನು ಒದಗಿಸಬೇಕು. ಒಂದು ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು  ತರಬೇಕು. ಎಲ್ಲಾ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು.  
ಅಂತರ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ) ಕಾಯ್ದೆ ೧೯೭೯ ನ್ನು  ತೆಗೆದುಹಾಕುವ ಪ್ರಸ್ತಾವವನ್ನು ರದ್ದು ಮಾಡಬೇಕು, ಬದಲಿಗೆ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಬೇಕು.   ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಠ ಜಿಡಿಪಿಯ ಶೇ. ೩ ಕ್ಕೆ ಹೆಚ್ಚಿಸಬೇಕು. 
ಅಗತ್ಯ ವಸ್ತುಗಳ ಕಾಯ್ದೆಯನ್ನು ತೆಗೆದುಹಾಕುವ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಎಲ್ಲ 
ಸುಗ್ರೀವಾಜ್ಞೆಗಳನ್ನು ರದ್ದುಮಾಡಬೇಕು. 
ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು/ತಿದ್ದುಪಡಿ/ಅಮಾನತು ಮಾಡುವ ಎಲ್ಲಾ ಪ್ರಸ್ತಾವಗಳನ್ನು ಹಿಂತೆಗೆದುಕೊಳ್ಳಬೇಕು.  ಸಾರ್ವಜನಿಕ ವಲಯದ ಉದ್ದಿಮೆಗಳ, ವಿಶೇಷವಾಗಿ ಭಾರತೀಯ ರೈಲ್ವೆ, ವಿದ್ಯುತ್, ಪೆಟ್ರೋಲಿಯಂ,  ಕಲ್ಲಿದ್ದಲು, ಬ್ಯಾಂಕ್/ವಿಮೆ, ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಉದ್ದಿಮೆಗಳ ಖಾಸಗೀಕರಣವನ್ನು ರದ್ದುಮಾಡಬೇಕು. 
 ಪ್ರಧಾನ ಮಂತ್ರಿಗಳ ಹೆಸರಿನಲ್ಲಿರುವ ಒಂದು ಖಾಸಗಿ ಟ್ರಸ್ಟ್ ನಿಧಿಯಲ್ಲಿ ಸಂಗ್ರಹವಾಗಿರುವ ಎಲ್ಲ ನಿಧಿಗಳನ್ನು  ಮಹಾಸೋಂಕನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ವರ್ಗಾಯಿಸಬೇಕು.  
ಮಹಾಸೋಂಕನ್ನು ಎದುರಿಸಲು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸುತ್ತಿರುವುದರಿಂದ ಮಹಾಸೋಂಕಿಗೆ  ತುತ್ತಾಗಿರುವ ಕುಟುಂಬಗಳಿಗೆ ರಾಷ್ಟಿçÃಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಪ್ರಕಾರ ಒಂದು ಸಲದ  ಹಣಕಾಸು ನೆರವನ್ನು ಪ್ರಕಟಿಸಬೇಕು. 
 ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು/ಒಬಿಸಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟು ನಿಟ್ಟಾಗಿ  ಜಾರಿಗೊಳಿಸಬೇಕು. ಎಲ್ಲ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. 
ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮಿಸ್ಟರುಗಳ  ಸಾಧನೆಗಳ ಆಧಾರದಲ್ಲಿ ಪರೀಕ್ಷಿಸಬೇಕು ಮತ್ತು ಪದವಿಗಳನ್ನು ಕೊಡಬೇಕು.  
ಜಮ್ಮು ಮತ್ತು ಕಾಶ್ಮೀರದಲ್ಲಿ ಅಗಸ್ಟ್ ೨೦೧೯ ರಿಂದ ಬಂಧನದಲ್ಲಿರುವ ಎಲ್ಲರನ್ನು ತಕ್ಷಣ ಬಿಡುಗಡೆ  ಮಾಡಬೇಕು. ಎಲ್ಲ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಬೇಕು ಮತ್ತು ಜನಗಳ ಮುಕ್ತ ಓಡಾಟಕ್ಕೆ ಅವಕಾಶ  ಕೊಡಬೇಕು. 
 ಯು.ಎ.ಪಿ.ಎ., ಎನ್.ಎಸ್.ಐ. ರಾಜದ್ರೋಹದ ಕಾಯ್ದೆ ಮುಂತಾದ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಿ  ಜೈಲುಗಳಲ್ಲಿ ಇಟ್ಟಿರುವ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು.  
ಪರಿಸರ ಪರಿಣಾಮ ನಿರ್ಧಾರದ (ಇ.ಐ.ಎ.) ೨೦೨೦ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು.  
ಹೆಚ್ಚುತ್ತಿರುವ ದಲಿತರ ಮೇಲಿನ ಹಿಂಸಾಚಾರ, ಮಹಿಳೆಯರ ವಿರುದ್ಧದ ಕೌಟುಂಬಿಕ ಹಾಗೂ ಲೈಂಗಿಕ  ದೌರ್ಜನ್ಯಗಳನ್ನು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಮತ್ತು ಆದಿವಾಸಿ ಬುಡಕಟ್ಟು  ಜನಗಳ ಶೋಷಣೆ ಮಾಡುತ್ತಿರುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಯಲ್ಲಿ  ಸಿಪಿಐ(ಎಂ) ಮುಖಂಡ ನವೀನ್ ಕುಮಾರ್, ತಾಲ್ಲೂಕು  ಅಧ್ಯಕ್ಷೆ ಸೌಮ್ಯ ಮುಂತಾದವರು ಇದ್ದರು.

Post a Comment

Previous Post Next Post