ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರ ಪದಗ್ರಹಣ

ನಮ್ಮ ಕನ್ನಡದ ನೆಲದಲ್ಲಿ ಮಾತೃ ಬಾ಼ಷೆಯನ್ನು ಮರೆತು ಬೇರೆ ಬಾ಼ಷೆಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದು ಸರಿಯಲ್ಲ ಎಂದು ಶಾಸಕ ಕೆ ಎಸ್ ಲಿಂಗೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಚನ್ನಕೇಶವ ಸಭಾ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್  ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಇಂದು ನಮ್ಮ ಕರ್ನಾಟಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಅದರಲ್ಲೂ ಗಡಿ ವಿವಾದ,ಭೂಮಿ ಒತ್ತುವರಿ ,ಕನ್ನಡಕ್ಕೆ ಇನ್ನೂ ಸರಿಯಾದ ಮಾನ್ಯತೆ ಇಲ್ಲದ್ದು ನಮಗೆ ಕಂಡುಬರುತ್ತಿದೆ.ಇದನ್ನು ಹೊರತು ಪಡಿಸಿ ನಮ್ಮ ರಾಜ್ಯದಲ್ಲಿ ಅನೇಕ ಕವಿಗಳು,ಸಾಹಿತಿಗಳು ತಮ್ಮದೇ ಆದ ಛಾಪನ್ನು ಮೂಡಿಸಿದ್ದು ಕನ್ನಡಕ್ಕೆ ಹಿರಿಮೆ‌ತಂದು ಕೊಟ್ಟಿದ್ದಾರೆ.ಪಂಪ ,ರನ್ನ,ರಾಘವಾಂಕ ಕವಿಸಾಮ್ರಾಜ್ಯವನ್ನೇ ನಮ್ಮ ನಾಡು ಕಟ್ಟಿದೆ.ದಕ್ಷಿಣ ಭಾರತ ಆಳ್ವಿಕೆಯಲ್ಲೂ ,ರಾಜಪಾರಂಪರಿಕಾವಾಗಿ ಉತ್ತಮ ಆಡಳಿತ ಕೊಟ್ಟಂತ ಪ್ರತೀಕವಿದೆ.ನಮ್ಮ ಬೇಲೂರು ತಾಲೂಕು ಇದಕ್ಕೆ ಹೊರತಾಗಿಲ್ಲ,ಶ್ರೀ ಚನ್ನಕೇಶವ ಸ್ವಾಮಿ ದೇವಾಲಯವು,ಹಳೇಬೀಡಿನ ದೇವಾಲಯವೂ ಕೂಡ ವಿಶ್ವ ವಿಖ್ಯಾತವಾಗಿದೆ. ಕವಿ,ಸಾಹಿತ್ಯ,ಪಾರಂಪಾರಿಕ ,ಕೌಶಲ್ಯವೂ ಕೂಡ ನಮ್ಮಲ್ಲಿ ಅಡಗಿದೆ. ನಾವು ಕನ್ನಡಿಗರು ನಮ್ಮ ಕನ್ನಡತನವನ್ನು ಬಿಟ್ಟು ಬೇರೆನೂ ಭಾಷೆ ಬಳಸಬಾರದು.ಮನೆಯಲ್ಲಿ ಯಾವ ಭಾಷೆಯಾದರೂ ಮಾತಾಡಿಕೊಳ್ಳಿ ಆದರೆ ನಮ್ಮ ಭಾಷಾಭಿಮಾನ ಕನ್ನಡವಾಗಿರಲಿ.ಕನ್ನಡದ ಪ್ರಥಮ ಶಿಲಾಶಾಸನ ದೊರೆತ  ಹಲ್ಮಿಡಿ ಗ್ರಾಮದ ಅಭಿವೃದ್ಧಿ ಪಡಿಸುವಂತೆ ಹಿಂದಿನ ಅಧ್ಯಕ್ಷರಾದ ಹೆಚ್ ಎಂ ದಯಾನಂದ್ ಹಾಗೂ ಬಿಎಂ ರವೀಶ್ ಅವರು ಮನವಿಯಂತೆ ಗ್ರಾಮದ ಅಭಿವೃದ್ಧಿ ಗೆ  ರಸ್ತೆ ಸೇರಿದಂತೆ ಸುಮಾರು ೨೦ ಲಕ್ಷ ಶಾಸಕರ ಅನುದಾನದಲ್ಲಿ ಸೇರಿಸಿ ಗ್ರಾಮವನ್ನು ಮೂಲಭೂತ ಸೌಕರ್ಯಗಳಿಗೆ ಮೀಸಲಿಡಲಾಗುವುದು ಎಂದು ಹೇಳಿದರು.
ಹಾಸನ ಕ,ಸಾ,ಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಸಂಘಟನೆಯನ್ನು ಬೇಲೂರಿನಲ್ಲಿ ಮಾಡಿಕೊಂಡು ಬಂದಿದ್ದಾರೆ,ಇಂದಿನ ವಿದ್ಯಾಮಾನದಲ್ಲಿ ನಮ್ಮಲ್ಲಿ ಕನ್ನಡತನವನ್ನು ಬಿಟ್ಟು ಬೇರೆ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುತ್ತಿರುವುದು ಬೇಸರದ ಸಂಗತಿ.ಕನ್ನಡ ತಾಯಿಯ ಸೇವೆಯನ್ನು ಪ್ರತಿಯೊಬ್ಬ ಕನ್ನಡಿಗನೂ ಸಲ್ಲಿಸಬೇಕು.ನಮ್ಮ ಕನ್ನಡ ಭಾಷೆ ಸಾಹಿತ್ಯ, ಪರಂಪರೆಗೆ ಇಡೀ ದೇಶದಲ್ಲಿಯೇ ವಿಷೇಶ ಸ್ಥಾನಮಾನವಿದೆ ಎಂದು ತಿಳಿಸಿದರು.
ಗೌರವ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ ಹಲ್ಮಿಡಿ ಶಾಸನ ವಿಚಾರದಲ್ಲಿ ಇಂದು ನಮ್ಮನ್ನು ಆಳುತ್ತಿರುವ ಎಲ್ಲಾ ಸರ್ಕಾರಗಳು ವಿಫಲವಾಗಿದೆ.ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ಹಲ್ಮಿಡಿ ಉತ್ಸವವನ್ನು ನೆಡೆಸಲು ಸರ್ಕಾರ ವಿಫಲವಾಗಿರುವುದರಿಂದ ಮುಂದಿನ ದಿನಗಳಲ್ಲಿ ಜಿಲ್ಲಾ ,ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಂದ‌ ಹಲ್ಮಿಡಿ  ಉತ್ಸವವನ್ನು ಆಚರಿಸಲಾಗುವುದು.ಇಂದಿನ ಆದುನಿಕ ಯುಗದಲ್ಲಿ ಬೇರೆ ಬಾ಼ಷೆಗಳು ಅಂತರ್ಜಾಲ್ಲ್ಲಿ ಸಿಗುವಂತೆ ನಮ್ಮ ಕನ್ನಡ ಬಾ಼ಷೆಯೂ ಸಹ ಹೆಚ್ಚು ಬಳಸುವತ್ತ ಗಮನ ಹರಿಸಬೇಕು.ಅದಕ್ಕಾಗಿ ಪ್ರತಿಯೊಬ್ಬರೂ ಕನ್ನಡಿಗರೂ ಸಹ ಕಾರ್ಯನ್ಮುಖವಾಗಬೇಕು ಎಂದರು.

Post a Comment

Previous Post Next Post