ಬಿಜೆಪಿ ಹಿಂಬಾಲಕರನ್ನಾ ಹದ್ಬಸ್ತಿನಲ್ಲಿಡಲು ಹೆಚ್.ಕೆ. ಕುಮಾರಸ್ವಾಮಿಯಿಂದ ಜಿಲ್ಲಾ ಮಂತ್ರಿಗೆ ಮನವಿ
ಹಾಸನ: ಚನ್ನರಾಯಪಟ್ಟಣದ ಸಬ್ ಇನ್ಸ್‍ಪೆಕ್ಟರ್ ಕಿರಣ್ ಕುಮಾರ್ ಆತ್ಮಹತ್ಯೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯಾಂಶ ಹೊರಬೇಕು. ಹಾಗೂ ಬಿಜೆಪಿ ಹಿಂಬಾಲಕರನ್ನು ಹದ್ಬಸ್ಥಿನಲ್ಲಿ ಇಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯ ಓರ್ವ ಸಬ್ ಇನ್ಸ್‍ಪೆಕ್ಟರ್ ಆತ್ಮಹತ್ಯೆ ಘಟನೆ ಈ ತಾಲೂಕು ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿ ಅಧಿಕಾರಿಗಳು ಎಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಇತ್ತಿಚಿನ ಘಟನೆ ಉದಾಹರಣೆಯಾಗಿದೆ. ರಾಜಕೀಯ ಒತ್ತಡದಿಂದ, ವಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆಗೆ ಒಳಗಾಗಿದಾದ್ದರೂ ಇಲ್ಲವೇ ಮೇಲಾಧಿಕಾರಿಗಳ ಒತ್ತಡಕ್ಕೆ ಓಳಗಾಗಿದ್ದಾರೂ ಒಟ್ಟಾರೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜ ಎಂದರು. ಇದು ಜಿಲ್ಲೆಯ ಕೆಳ ಮಟ್ಟದಿಂದ ಮೇಲ್ ಮಟ್ಟದ ಅಧಿಕಾರಿಗಳವರೆಗೂ ಈರೀತಿಯ ಒತ್ತಡಗಳು ನಡೆಯುತ್ತಿದೆ. ಈ ಸಬ್ ಇನ್ಸ್ ಪೆಕ್ಟರ್ ಘಟನೆಯನ್ನು ಸರಕಾರವು ಹಗುರವಾಗಿ ಪರಿಗಣಿಸದೇ ಈ ಘಟನೆಯನ್ನು ಉನ್ನತ ಮಟ್ಟದ ಸಂಸ್ಥೆಯಿಂದ ನಿಷ್ಕಕ್ಷಪಾತವಾಗಿ ತನಿಖೆ ಮಾಡಿಸಿ ಸತ್ಯಾಂಶ ಹೊರಬರಬೇಕು. ಇದನ್ನು ಗೃಹ ಇಲಾಖೆಯು ಕಠಿಣವಾಗಿ, ತೀವ್ರವಾಗಿ ಪರಿಗಣಿಸಿ ತನಿಖೆ ಮಾಡುವಂತೆ ಎಂದು ಒತ್ತಾಯಿಸಿದರು. ಬಿಜೆಪಿ ಆಡಳಿತವಹಿಸಿಕೊಂಡ ನಂತರ ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಸದಾಗಿ ನೇಮಕವಾದ ನಂತರ ಘಟನೆ ನಡೆದಿದೆ. ಜೆ.ಸಿ. ಮಾಧುಸ್ವಾಮಿಯವರು ಇಲ್ಲಿ ಜಿಲ್ಲಾ ಮಂತ್ರಿಯಾಗಿ 10 ತಿಂಗಳು ಇದ್ರು. ಜನಪ್ರತಿನಿಧಿಗಳಿಗೆ, ಎಲ್ಲಾರಿಗೂ ಸ್ಪಂದಿಸುತ್ತಿದ್ದರು. ಇತ್ತಿಚಿಗೆ ಕಳೆದ ಎರಡು ತಿಂಗಳಿನಿಂದ ಹಾಸನ ಜಿಲ್ಲೆಯಲ್ಲಿ ಏನಾಗಿದೆ? ಪಕ್ಷದ ಹಿಂಬಾಲಕರು ಸಕಲೇಶಪುರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ದೆ ಮಾಡಿದ ಬಿಜೆಪಿ ಅಭ್ಯರ್ಥಿ ಮತ್ತು ಅವರ ಸಹಚರರು ಕ್ಷೇತ್ರಕ್ಕೆ ಬಂದು ಕೆಳ ಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲ್ ಮಟ್ಟದ ಅಧಿಕಾರಿಗಳವರೆಗೂ ಎಲ್ಲಾ ರೀತಿಯ ಒತ್ತಡವನ್ನು ಹಾಕಿ ನಮ್ಮ ಕಾರ್ಯಕರ್ತರಿಗೆ ಗುತ್ತಿಗೆ ಕೊಡಬೇಕು, ನಾವು ಹೇಳಿದ ಕೆಲಸವನ್ನೇ ಮಾಡಬೇಕು ಹಾಗೂ ಏನು ಕ್ರಿಯೆ ಯೋಜನೆ ಮಾಡಲಾಗಿದೆ, ನಮಗೆ ಹೇಳದೇ ಕೆಲಸ ನಿರ್ವಹಿಸುವಾಗಿಲ್ಲ ಎಂದೆಲ್ಲಾ ಕಿರುಕುಳ ನೀಡಲಾಗುತ್ತಿರುವುದಾಗಿ ದೂರಿದರು. ಈ ಎಲ್ಲಾ ಬಗ್ಗೆ ಅಧಿಕಾರಿಗಳು ನಮ್ಮ ಬಳಿ ಬಂದು ತಮ್ಮ ಅಸಹಯಕತೆಯನ್ನು ತೋಡಿಕೊಳ್ಳುತ್ತಿದ್ದಾರೆ. ಈಗೆ ಮುಂದುವರೆದರೇ ಜಿಲ್ಲೆಯಲ್ಲಿ ಆಡಳಿತ ನಡೆಯುವುದು ಹೇಗೆ? ಕಾನೂನು ವ್ಯವಸ್ಥೆ ಏನಾಗುವುದು? ಹಿಂದೆ ಸಕಲೇಶಪುರದಲ್ಲಿ ಮುನ್ಸಿಪಾಲ್ಟಿಯಲ್ಲಿ ಜೂ. ಇಂಜಿನಿಯರ್ ಮಹಿಳಾ ಅಧಿಕಾರಿ ಇದ್ದು, ಒತ್ತಡಕ್ಕೆ ಒಳಗಾಗಿ ಸುಳ್ಳು ಮಾಹಿತಿ ಕೊಟ್ಟು ಅವರನ್ನು ಬದಲಾವಣೆ ಮಾಡಿಸಿದರು. ಈ ಬಗ್ಗೆ ಡಿಸಿ ಬಳಿ ಚರ್ಚೆ ಮಾಡಿದ್ದು, ನಂತರ ಬದಲಾವಣೆ ಮಾಡಲು ಒಪ್ಪಿಗೆ ನೀಡಿರುವುದಾಗಿ ತಮ್ಮ ಅಸಹಯಕತೆ ಹೇಳಿಕೊಂಡರು. ಯಾರು ಅಸಹಯಕತೆ ಹೇಳದೇ ತನಿಖೆ ಮಾಡಬೇಕು ಎಂದು ಸಲಹೆ ನೀಡಿದರು. ಉನ್ನತ ಮಟ್ಟದ ಮತ್ತು ಕೆಳ ಮಟ್ಟದ ಅಧಿಕಾರಿಗಳಿಗೆ ರಕ್ಷಣೆ ಕೊಡದಿದ್ದರೇ ನಿಷ್ಪಕ್ಷ ಪಾತವಾಗಿ ಕೆಲಸ ಮಾಡುವುದು ಹೇಗೆ ಎಂದು ಬೇಸರವ್ಯಕ್ತಪಡಿಸಿದರು. ಬಿಜೆಪಿ ಪಕ್ಷದ ಹಿಂಬಾಲಕರನ್ನು ಹದ್ಬಸ್ತಿನಲ್ಲಿ ಇಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರು. ಹಿಂಬಾಲಕರನ್ನು ಬಿಟ್ಟು ಆಡಳಿತವನ್ನು ಮಾಡಲು ಹೊರಟರೇ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಆಹಾರ ಘಟಕದಲ್ಲಿ ಕರ್ತವ್ಯಯ ನಿರ್ವಹಿಸಿದ ಆಹಾರ ಘಟಕದ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಎಲ್ಲಾದರೂ ಅಕ್ಕಿ ದಾಸ್ತಾನು ಅಕ್ರಮ ಕಂಡು ಬಂದರೇ ತಕ್ಷಣ ಕ್ರಮ ಜರುಗಿಸುತ್ತಿದ್ದರು. ಒಳ್ಳೆಯ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಬೇಸರವ್ಯಕ್ತಪಡಿಸಿದರು.
ಇಂದು ಒಂದು ವರ್ಷದ ಬಿಜೆಪಿ ಸರಕಾರದ ಸಾಧನೆ ಎಂದರೇ ವರ್ಗವಣೆ ಒಂದೆ ಸಾಧನೆ. ಕೋವಿಡ್ ವಿಚಾರವಾಗಿ ಅದನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಲ್ಲ. ಇದರಲ್ಲೂ ಸರಕಾರ ಸಂಪೂರ್ಣ ವಿಫಲವಾಗಿ ದೇವರೇ ದಿಕ್ಕು ಎಂದು ಹೇಳುವ ಸ್ಥಿತಿಗೆ ಬಂದಿದ್ದು, ಇದೊಂದು ಅಸಹಯಕತೆ ಸರಕಾರವಾಗಿದೆ ಎಂದು ಮಾತಿನ ವಾಗ್ದಾಳಿ ನಡೆಸಿದರು. ಚಲನಚಿತ್ರ ಪ್ರಖ್ಯಾತ ನಟಿ ಸುಧಾರಾಣಿಗೆ ಸರಿಯಾದ ಚಿಕಿತ್ಸೆ ದೊರಕದಂತಹ ಪರಿಸ್ಥಿತಿ ಬಂದರೇ ಎಂದು ಘಟನೆಯೊಂದನ್ನು ಇದೆ ವೇಳೆ ನೆನಪಿಸಿಕೊಂಡರು. ಆಲೂರಿನ ರೋಗಿ ಓರ್ವ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ದಿನಕ್ಕೆ 40 ಸಾವಿರ ರೂಗಳ ಬಿಲ್ ಹಾಕಿರುವುದು ಇದೆನಾ ಆಡಳಿತ ಎಂದು ಜರಿದರು. ಮಹಾನಿಯರಾದ ಟಿಪ್ಪು, ಯೇಸು, ಬುದ್ದ ಇತರರ ಪಠ್ಯಗಳನ್ನೇಲ್ಲಾ ಡ್ರಾಫ್ ಮಾಡಿದ್ದಾರೆ. ಬೇಜಾರು ವಾಗಬಾರದು ಎಂದು ಸಂಗೋಳ್ಳಿ ರಾಯಣ್ಣ ಎಲ್ಲಾ ಸಲ್ಪ ಸಲ್ಪ ಸೇರಿಸಿದ್ದಾರೆ. ಶೇಕಡ 30 ಭಾಗ ಪಠ್ಯ ತೆಗೆಯಬೇಕು ಎಂದರೇ ಈ ಪಠ್ಯವನ್ನೇ ತೆಗೆಯಬೇಕಾಗಿತ್ತಾ? ಗಣಿತ, ವಿಜ್ಞಾನ ಕೆಲವನ್ನು ಕಡಿಮೆ ಮಾಡಲಿ, ಮಹಾನಿಯರ ಪಠ್ಯ ಕೈಬಿಟ್ಟಿರುವುದು ಉತ್ತಮವಾಗಿಲ್ಲ. ಸುರೇಶ್ ಕುಮಾರ್ ಒಬ್ಬ ಬುದ್ದಿವಂತ ಮಾಧರಿ ಸಚಿವರಾಗಿದ್ದು, ಅವರು ಕೂಡ ಒತ್ತಡಕ್ಕೆ ಒಳಗಾಗಿರಬಹುದು ಎಂದು ಅಸಮಧಾನವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಎಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡ ರಘು ಇತರರು ಪಾಲ್ಗೊಂಡಿದ್ದರು.
Tags
ಹಾಸನ