ಕೊರೋನಾದಿಂದ ಸಿಎಂ ಯಡಿಯೂರಪ್ಪನವರು ಶೀಘ್ರ ಗುಣಮುಖರಾಗುವಂತೆ ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ


ಹಾಸನ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊರೋನಾದಿಂದ ಶೀಘ್ರ ಗುಣಮುಖರಾಗುವಂತೆ ಹಾಸನ ನಗರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
       ಗುರುವಾರ ಬೆಳಗಿನಿಂದಲೇ ನಗರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರದಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು.
      ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎನ್. ನಾಗೇಶ್ ರವರು, ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪನವರು ಕೊರೋನಾ ಎಂಬ ಮಹಾಮಾರಿಯ ಸಂಕಷ್ಟವನ್ನು ಅತ್ಯಂತ ಜಾಗರುಕತೆಯಿಂದ ಎದುರಿಸಿದ್ದಾರೆ. ಕೊರೋನಾ ಮಹಾಮಾರಿ ಜನತೆಗೆಯಲ್ಲದೇ ಮುಖ್ಯಮಂತ್ರಿಗಳಿಗೂ ಹರಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಬೇಗ ಗುಣಮುಖರಾಗಲಿ ಎಂದು ನಗರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಗಿದೆ. ಮುಖ್ಯಮಂತ್ರಿಗಳ ಜೊತೆಗೆ ಇಡೀ ರಾಜ್ಯದ ಜನತೆಯು ಕೊರೋನಾದಿಂದ ಮುಕ್ತರಾಗಿ ಬರಲಿ. ಯಡಿಯೂರಪ್ಪನವರು ಕೊರೋನಾ ಖಾಯಿಲೆಯಿಂದ ಗುಣಮುಖರಾಗಿ ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಮುಂದಾಗಲಿ ಎಂದು ಇದೆ ವೇಳೆ ದೇವರಲ್ಲಿ ್ಲ ಮೊರೆ ಹೋಗಿರುವುದಾಗಿ ಹೇಳಿದರು.
      ಇದೆ ವೇಳೆ ಬಿಜೆಪಿ ಮುಖಂಡರಾದ ಜಿಲ್ಲಾ ಕಾರ್ಯದರ್ಶಿ ಅವಿನಾಶ್, ಶರತ್ ಭೂಷಣ್, ವೀರಶೈವ ಮತ್ತು ಲಿಂಗಾಯಿತ ಯುವ ಸೇನೆಯ ಮೋಹನ್ ಕುಮಾರ್, ಮಧು ಮೆಡಿಕಲ್ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post