ಮನುಷ್ಯನ ಪ್ರಾಣಕ್ಕಿಂತ ಸರಕಾರಕ್ಕೆ ಹಣ ಹೆಚ್ಚಾಗಬಾರದು: ಹೆಚ್.ಡಿ. ರೇವಣ್ಣ

ಹಾಸನ: ಸರಕಾರ ಏನಾದರೂ ದಿವಾಳಿಯಾಗಿದ್ದರೇ ಸಾರ್ವಜನಿಕರಿಂದ ಶಾಸಕರು ಚಂದ ಎತ್ತಿ ಕೊರೋನಾ ರೋಗಿಗಳನ್ನು ನಿಬಾಯಿಸಲಾಗುವುದು. ಮನುಷ್ಯನ ಪ್ರಾಣಕ್ಕಿಂತ ಸರಕಾರಕ್ಕೆ ಹಣವೇ ಹೆಚ್ಚಾಗಬಾರದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.
     ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ನಿಧಿಗೆ ಸಾರ್ವಜನಿಕರಿಂದ 378 ಕೋಟಿ ರೂ ಹÀಣ ದೇಣಿಗೆಯಾಗಿ ಸರಕಾರಕ್ಕೆ ಬಂದಿದೆ. ಈ ಹಣದಲ್ಲಿ ಒಂದು ರೂಗಳನ್ನು ಖರ್ಚು ಮಾಡಿರುವುದಿಲ್ಲ ಎಂದು ಹೇಳಲಾಗಿದೆ. ಇದರಲ್ಲೆ 60 ಕೋಟಿ ರೂಗಳನ್ನು ಬಳಸಲು ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿ ನಿಯಂತ್ರಣಕ್ಕೆ ಕೊಡಲಿ. ಎಲ್ಲಾ ತಾಲೂಕುಗಳಿಗೂ ಹಣ ನೀಡುವಂತೆ ಒತ್ತಾಯಿಸಿದರು. ಏನಾದರೂ ಸರಕಾರ ದಿವಾಳಿಯಾಗಿದೆ ಎಂದು ಹೇಳಿದರೇ ಶಾಸಕರು ನಾವೇ ಚಂದ ಎತ್ತಾದರೂ ನೋಡಿ ಕೊಳ್ಳುತ್ತೇವೆ. 14 ತಿಂಗಳಿನಿಂದ ಖಜಾನೆ ಖಾಲಿಯಾಗಿದೆ ಎಂದು ಹೇಳಿದರೆ ನಾವೇ ಸಾರ್ವಜನಿಕರಿಂದ ಫಂಡ್ ಎತ್ತಿ ಕೊರೋನಾ ರೋಗಿಗಳನ್ನು ಉಳಿಸಿಕೊಳ್ಳುವುದಾಗಿ ಬೇಸರದಲ್ಲಿ ಹೇಳಿದರು. ರಾಜ್ಯದ 30 ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಕ್ಷೇತ್ರದಲ್ಲಿ ಕ್ಯಾಂಪ್ ಮಾಡಬೇಕು. ಈ ವೇಳೆ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಟೀಮ್ ಮಾಡಬೇಕು. ಇದರಲ್ಲಿ ವೈದ್ಯರು, ತಾಲೂಕು ಅಧಿಕಾರಿಗಳನ್ನು ಹಾಗೂ ವಿಲೇಜ್ ಅಕೌಂಟೆಂಟ ಇವರನ್ನು ನೇಮಕ ಮಾಡಬೇಕು. ಎಲ್ಲೆಲ್ಲೂ ಹಣ ಕಳಿಯುವಾಗ ಮನುಷ್ಯನ ಪ್ರಾಣಕ್ಕಿಂತ ಸರಕಾರಕ್ಕೆ ಹಣವೇ ಹೆಚ್ಚಾಗಬಾರದು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. 
     ಕೊರೋನಾ ಪಾಸಿಟಿವ್ ಇರುವವರನ್ನು ಕನಿಷ್ಟ 10 ಅಡಿ ದೂರ ಇಟ್ಟು ಸಾಮಾಜಿಕ ಅಂತರ ಕಾಪಾಡಬೇಕು. ಒಂದು ರೂಮಿಗೆ 5 ಹಾಸಿಗೆ ಹಾಕಿದರೇ ಉತ್ತಮ. ತಾತ್ಕಲಿಕ ಶೌಚಾಲಯ ನಿರ್ಮಿಸಲಿ. ಈಗ ಶಾಲೆಗಳು ನಡೆಯುತ್ತಿಲ್ಲ. ಆಯಾ ತಾಲೂಕಿನ ಶಾಲೆಗಳನ್ನು ಬಳಸಿಕೊಳ್ಳಲಿ. ಈಗಾಗಲೇ ಕೊರೋನಾ ಪಾಸಿಟಿಬ್ 1 ಲಕ್ಷದ 50 ಸಾವಿರ ತಲುಪಿದೆ. ಆಗಸ್ಟ್ ಅಂತ್ಯದ ವೇಳೆಗೆ ಮತ್ತೊಂದು ಲಕ್ಷ ಹೆಚ್ಚಾಗಲಿದೆ ಎಂದು ಆತಂಕವ್ಯಕ್ತಪಡಿಸಿದ ಅವರು ಈ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಕಟ್ಟು ನಿಟ್ಟಿನಕ್ರಮ ಕೈಗೊಳ್ಳಬೇಕಾಗಿದೆ. ಈಲ್ಲಾ ಉಸ್ತುವಾರಿ ಸಚಿವರನ್ನು ಒಂದು ವಾರಗಳ ಕಾಲ ಇಲ್ಲೆ ಕ್ಯಾಂಪ್ ಹಾಕುವಂತೆ ತಾಕೀತು ಮಾಡಿದರು. ಮುರಾರ್ಜಿ ಶಾಲೆಗಳಲ್ಲಿ ಕುರಿಗಳನ್ನು ತುಂಬುವಾಗೇ ಕೊರೋನಾ ರೋಗಿಗಳನ್ನು ತುಂಬಿದ್ದಾರೆ. ಇವರಿಗೆಲ್ಲಾ ಒಂದೆ ಶೌಚಾಲಯವಿದೆ. ಯಡಿಯೂರಪ್ಪನವರು ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಿ ಬರಲಿ. ಕೊರೋನಾ ವಿಚಾರದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಹಾಸನ ಜಿಲ್ಲೆಯೊಂದರಲ್ಲೆ ದಿನೆ ದಿನೆ ನೂರಾರು ಪಾಸಿಟಿವ್ ಪತ್ತೆಯಾಗುತ್ತಿದ್ದು, ಇನ್ನು ಬೆಂಗಳೂರಿನಲ್ಲಿ ಪ್ರತಿದಿನ 2 ಸಾವಿರಕ್ಕಿಂತ ಹೆಚ್ಚಿನ ಪ್ರಕರನ ದಾಖಲಾಗುತ್ತಿದೆ. ಜೊತೆಗೆ ದಿನನಿತ್ಯ ಸಾವಿನ ಸಂಖ್ಯೆಯು ಹೆಚ್ಚಾಗುತ್ತಿದೆ. ಶಾಲೆಗಳನ್ನು ಉಪಾಯೋಗಿಸಿಕೊಂಡು ಒಂದು ರೂಮಿನಲ್ಲಿ 5 ಜನ ಕೊರೋನಾ ರೋಗಿಗಳನ್ನು ಹಾಕಬೇಕು ಮತ್ತು ತಾತ್ಕಲಿಕವಾಗಿ ಶೌಚಾಲಯ, ಸ್ನಾನ ಗೃಹ ನಿರ್ಮಿಸುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚೆ ಮಾಡುವುದಾಗಿ ಹೇಳಿದರು. 
     ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post