ತಪ್ಪು ಮಾಡಿದ ಇವರನ್ನು ಬೆತ್ತಲೆ ಮಾಡಿ :ಜಗ್ಗೇಶ್..!

ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ನಿನ್ನೆ ಇಂದಲೇ ನಮ್ಮ ಸ್ಯಾಂಡಲ್ವುಡ್ ನಲ್ಲಿ ಡ್ರಗ್ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅದೇ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕ ನಟ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಇದೆ ವಿಚಾರವಾಗಿ ಸರಣಿ ಟ್ವಿಟ್ ಮಾಡಿ ಮತ್ತೆ ಸುದ್ದಿ ಮಾಡಿದ್ದಾರೆ, ಹೌದು ತಪ್ಪು ಮಾಡಿದವರು ಶಿಕ್ಷೆ ಅನುಭವಿಸುಲೇಬೇಕು ಎನ್ನುವ ಮಾತಿನ ಪ್ರಕಾರ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.  ನಟ ಜಗ್ಗೇಶ್ ಅವರು ಟ್ವಿಟ್ ನಲ್ಲಿ ಹೇಳಿರುವ ಹಾಗೆ, "ಶ್ರೇಷ್ಠ ಮನುಜನ್ಮ!ಅದುನಶ್ವರ ಸತ್ಯ!ಆದರು ಆ ನಶ್ವರದೇಹ ನಶಿಸುವಮುನ್ನ ಸಾರ್ಥಕಪಡಿಸಿ ಬದುಕಬೇಕು!ನಶೆ ಹಾದರದ ಹಿಂದೆ ಬರಿ ಸಿನಿಮ ಅಲ್ಲಾ ಸಮಾಜವೆ ಆಕರ್ಷಶಿತ ಆಗುತ್ತಿದೆ! ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು!ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೆ ನಶೆಹಾದರದ ದಾಸರು!ಉಪ್ಪುತಿಂದವ ನೀರುಕುಡಿಯುವ! ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.  
ಮತ್ತು ಈ ಹಿಂದೆ ಹೋಗಿದ್ದ ಒಂದು ಪಾರ್ಟಿ ಯಿಂದ ಅರ್ಧಕ್ಕೆ ಯಾಕೆ ಹೊರ ಬಂದರು ಎಂಬುದಾಗಿ ಹೇಳಿ ಹಳೆಯ ವಿಚಾರಕ್ಕೆ ಟ್ವಿಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ, "ಬಲವಂತಕ್ಕೆ 2017 ಒಬ್ಬ ರಾಜಕಾರಣಿ ಪಾರ್ಟಿ ಗೆ ಹೋಗಿದ್ದೆ!ಅರ್ಧಘಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ ಬಂದುಸೇರಿದ ಅರ್ಧಉಡುಗೆ ಸುಂದರಿಯರು!ಅದಕಂಡು ನಾನು ನನ್ನ ಆತ್ಮೀಯ ಯುವನಟಗ....!ಹೇಳದೆಕೇಳದೆ ಲಿಫ್ಟು ಬಳಸದೆ 12ಮಹಡಿ ಇಳಿದು ಓಡಿದೆವು!ಅದೆಕಡೆ ಇಂದಿಗು ನನಗೆ ಯಾರು ಕರೆಮಾಡದಂತೆ ಮೊಬೈಲ್ ವರ್ಜಿಸಿದೆ! ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು!" ಎಂದು ಹೇಳಿ ಈ ರೀತಿ ತಪ್ಪು ಮಾಡಿದವರ ಹೆಸರನ್ನು ಬಯಲು ಮಾಡಿ ಆಗಷ್ಟೇ ಜನರಿಗೆ ಅರಿವು ಆಗುತ್ತದೆ ಎಂದು ಹೇಳಿದರು...  

ಜಗ್ಗೇಶ್ ಅವರ ಈ ವಿಚಾರಕ್ಕೆ ಸಂಬಂಧಿಸಿದಂತೆ, ಕೊನೆಯ ಟ್ವಿಟ್ ಇದಾಗಿದ್ದು" ಸರಿಯಾಗಿ ಬಾಳಿಬದುಕುವ ನಿರ್ದಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಟ! ನನ್ನ ಬದುಕು ಎನ್ನುವರ ಮಠಕ್ಕೆ ಸೇರಿಸಿದರು 
ನಶೆ ಹಾದರದ ಬಿಸಿ ಹೆಂಚಿನಮೇಲೆ ಸ್ವಲ್ಪ ಕಾಲಬದುಕಿ 
ವಿಕೃತ ಆನಂದ ಅನುಭವಿಸಿ ಸೀದುಹೋಗುತ್ತಾರೆ!

Post a Comment

Previous Post Next Post