ಕರಾವಳಿಯ ಧ್ವನಿ ಮಾಂತ್ರಿಕ : ಎಕೆ.ಶೆಟ್ಟಿ ನಡೂರು


ಹ್ವಾಯ್  ಮಾರ್ರೆ ,ನಾನ್ ಎಕೆ.ಶೆಟ್ಟಿ ನಡೂರು ಅಂತ ಮಾತು ಅರಂಬಿಸುವುದರ ಮೂಲಕ ಸಾವಿರಾರು ಕರಾವಳಿಯ ಜನರ ಮನಸ್ಸು ಗೆದ್ದವರು ಇವರು.ಕರಾವಳಿಯ ಅಪ್ಪಟ ಪ್ರತಿಭೆ.ಮಿಮಿಕ್ರಿ ಮಾಂತ್ರಿಕ,ಅದೇಷ್ಟೋ  ನ್ಯೂಸ್ ರಿಪೋರ್ಟರ್ ,ರಾಜಕಾರಣಿಯ ಮಿಮಿಕ್ರಿ ಮಾಡುತ್ತಾ  ,ನಿರೂಪಣೆ ಮೂಲಕ  ಕರಾವಳಿಯಲ್ಲಿ ಫೇಮಸ್ ಆಗಿರುವ ಪ್ರತಿಭೆ ಎಕೆ. ಶೆಟ್ಟಿ ನಡೂರು.
ಸಂದರ್ಭಕ್ಕೆ ಅನುಗುಣವಾದ ಕಾರ್ಯಕ್ರಮ ವಾಗಿರಲಿ,ಜಾಗ್ರತಿ ಕಾರ್ಯಕ್ರಮ ,ಹಾಸ್ಯದ ಕಾರ್ಯಕ್ರಮ ಹೀಗೆ ಯಾವುದೇ ಕಾರ್ಯಕ್ರಮ ಇದ್ದರೂ ಕೂಡ ಎಕೆ. ಶೆಟ್ಟಿ ಅವರು ದ್ವನಿ ನೀಡುವುದರಲ್ಲಿ ಸಖತ್ ಫೇಮಸ್.


ಎಕೆ.ಶೆಟ್ಟಿ ನಡೂರು ಅಂತಲೇ ಫೇಮಸ್ ಆಗಿರುವ ಇವರ ನಿಜವಾದ ಹೆಸರು ಬಹುತೇಕರಿಗೆ ತಿಳಿದಿಲ್ಲ.ಇವರ ಪೂರ್ಣ ಹೆಸರು  ಅಕ್ಷಯ ಕುಮಾರ್ ಶೆಟ್ಟಿ ನಡೂರು.ನಿರೂಪಣೆ ಮಾಡುತ್ತಾ ತಾನೇ ಕಷ್ಟ ಪಟ್ಟು ವೇದಿಕೆಗಳನ್ನು ಸೃಷ್ಟಿಸಿಕೊಂಡವರು ಇವರು.ಕ್ರೀಡಾ ವೀಕ್ಷಕ  ವಿವರಣೆಗಾರ, ಹೋತಾಪತಿಗ್ ಒಂದ್ ಮಾತು ,ಒಡ್ಳೊಳಗಿನ ಮಾತು,ಊರಬದಿ ವಾರ್ತೆ,ಕುಂದಾಪುರದ ಸೂಪರ್ ಮಿನಿಟ್ ಹೀಗೆ ಸಾಲು ಸಾಲು ಯೂಟ್ಯೂಬ್ ಸರಣಿಯ ಮೂಲಕ ಜನರ ಮನಸನ್ನು ಗೆದ್ದವರು.ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ದ್ವನಿ ನೀಡುತ್ತಾ ತನ್ನದೇಆದ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡಿದ್ದಾರೆ ಎಕೆ.ಶೆಟ್ಟಿ ನಡೂರು.ತನ್ನ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.ಕರೋನದ ಸಮಯದಲ್ಲಿ ವಿಡಿಯೋ ಮೂಲಕ ಜಾಗ್ರತಿ ಮೂಡಿಸಿದ ಇವರ ವಿಡಿಯೋ ರಾಜ್ಯಮಟ್ಟದ ಮಾದ್ಯಮದಲ್ಲಿ ಮೆಚ್ಚುಗೆ ಗಳಿಸಿತ್ತು.
ಇವರು ಮೂಲತಃ ಮಂದರ್ತಿಯ ನಡೂರಿನವರು.ತಾಯಿ  ಕಸ್ತೂರಿ ಶೆಟ್ಟಿ, ತಂದೆ ಪ್ರಶಾಂತ್ ಶೆಟ್ಟಿ.ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಇವರು ತಮ್ಮ ಸ್ವ  ಪರಿಶ್ರಮದ ಮೂಲಕ ಬೆಳೆದವರು.ತನ್ನ ಸಾಧನೆಯನ್ನು ನೋಡಲು ತಂದೆ ಇರಬೇಕಾಗಿತ್ತು ಅವರು ತುಂಬಾ ಖುಷಿ ಪಡುತ್ತಿದ್ದರು ಎನ್ನುವುದು ಇವರ ಮಾತು.ರಜೆಯಲ್ಲಿ ಹೊಟೇಲ್,  ಪೇಂಟಿಂಗ್ ಕೆಲಸ  ಮಾಡಿ ಬಾರ್ಕೂರಿನ ಸರಕಾರಿ ಕಾಲೇಜಿನಲ್ಲಿ  ಪದವಿ ಪಡೆದದ್ದರು .ಎರಡು  ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ  ಕೆಲಸ ಮಾಡಿದ್ದರು. ಆ ನಂತರ ತನ್ನ ಕೆಲಸಕ್ಕೆ ಗುಡ್ ಬೈ ಹೇಳಿ ತನ್ನ ದ್ವನಿಯನ್ನೆ ಬಂಡವಾಳವಾಗಿಸಿಕೊಂಡವರು.
ಕುಂದಗನ್ನಡದ ವಾಟ್ಸಪ್ಪ ಕಿರು  ಪ್ರತಿಭೆ, ಕರಾವಳಿಯ ವಾಟ್ಸಪ್ ಹೀರೋ ಹೀಗೆ ಹಲವು ಬಿರುದುಗಳನ್ನು ಇವರ ಅಭಿಮಾನಿಗಳೇ ಇವರಿಗೆ ನೀಡಿದ್ದಾರೆ.

ಅದೇಷ್ಟೋ ಕಾರ್ಯಕ್ರಮಗಳಿಗೆ ಉಚಿತವಾಗಿ ದ್ವನಿ ನೀಡುತ್ತಿದ್ದಾರೆ.ತಾನು  ಗಳಿಸಿದ ಸ್ವಲ್ಪ ಪಾಲು ಹಣವನ್ನು ಅನಾರೋಗ್ಯ ಪೀಡಿತರಾಗಿ ನೀಡುತ್ತಿದ್ದಾರೆ.

ಈ ತನಕ ಸುಮಾರು 400ರಕ್ಕೂ ಹೆಚ್ಚು ಕಾರ್ಯಕ್ರಮ ಗಳಿಗೆ ದ್ವನಿಯಾಗಿದ್ದಾರೆ.ರಾಜ್ಯ ಹೊರರಾಜ್ಯಗಳಲ್ಲಿ ಕೂಡ ಎಕೆ.ಶೆಟ್ಟಿ ನಡೂರು  ಅನ್ನುವ ಹೆಸರು ಪ್ರಸಿದ್ಧ ಪಡೆದಿದೆ.ಪ್ರಸ್ತುತ ತನ್ನ ಹುಟ್ಟೂರಿನಲ್ಲಿ  ಎಕೆ .ಶೆಟ್ಟಿ ಡಿಜಿಟಲ್ ಸ್ಟುಡಿಯೋ ಹಾಕಿಕೊಂಡು ಅದರ ಮೂಲಕ ತನ್ನ ವಿಶಿಷ್ಟ ಮ್ಯಾನರಿಸಂ ಮೂಲಕ ಜನರನ್ನು ರಂಜಿಸುತ್ತಿದ್ದಾರೆ.


"ಕುಂದಾಪ್ರ ನನ್ನ ಹುಟ್ಟೂರು ,ಹಾಗಾಗಿ ಅಲ್ಲಿನ ಕನ್ನಡ ನನಗೆ ರಕ್ತಗತವಾಗಿ ಬಂದಿದೆ.ಏನಾದರೂ ಸಾಧಿಸಬೇಕು ಅನ್ನುವ ಯೋಚನೆ ಅಲ್ಲಿ ಇರುವಾಗಲೇ ವಿಡಿಯೋ ರೆಕಾರ್ಡಿಂಗ್ ಆರಂಭಿಸಿದೆ. ನನ್ನೂರಿನ ಭಾಷೆ ನನ್ನನ್ನು ಜನರಿಗೆ ಇನ್ನಷ್ಟು ಹತ್ತಿರ ಮಾಡಿಸಿದೆ.ಕರಾವಳಿಯ ವಾಟ್ಸಪ್ ಹೀರೋ ಹೀಗೆ ಅಭಿಮಾನಿಗಳೇ  ಸಾಕಷ್ಟು ಬಿರುದು ಕೊಟ್ಟಿದ್ದಾರೆ ಅವರಿಗೆ ನಾನೂ ಚಿರಋಣಿ ಎನ್ನುವುದು ಇವರ ಮಾತು".

 ಯಾರೇ ಸಿಗಲಿ ಎಲ್ಲರನ್ನೂ ನಗುಮುಖದಿಂದ ಬಾಯಿ ತುಂಬಾ ಮಾತನಾಡಿಸುವ ಗುಣ ಇವರದ್ದು. 
ಈಗಾಗಲೇ ಸಾಕಷ್ಟು ಪ್ರಶಸ್ತಿ,ಪುರಸ್ಕಾರಗಳು ಅರಸಿ ಬಂದಿರುವ ಈ ಕರಾವಳಿ ಪ್ರತಿಭೆಗೆ ಇನ್ನೂ ಹೆಚ್ಚಿನ ಅವಕಾಶ ಸಿಗುವಂತಾಗಲಿ.

-ನವ್ಯ ಶ್ರೀಶೆಟ್ಟಿ

Post a Comment

Previous Post Next Post