ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾದಲ್ಲಿ ಸೈಡ್ ಆಕ್ಟರ್ ಸಿಗ್ತಾ ಇದ್ದರೂ. ಈಗ ಮೈನ್ ಆಕ್ಟ್ರು ಸಿಗ್ತಾರಾ ನೋಡ್ಬೇಕು


ಚಿಕ್ಕಮಗಳೂರು,ಆ.29: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಇದು ವ್ಯವಸ್ಥಿತವಾದ ರಾಜ್ಯ, ಅಂತರಾಷ್ಟ್ರೀಯ ಜಾಲ, ಇಲ್ಲಿಯವರೆಗೆ ದಂಧೆಯ ಸೈಡ್ ಆಕ್ಟರ್ ಸಿಗ್ತಾಯಿದ್ದರು ಈಗ ಮೇನ್ ಆಕ್ಟ್ರು ಸಿಗ್ತಾರಾ ನೋಡ್ಬೇಕು ಎಂದು ಸಚಿವ ಸಿಟಿ ರವಿ ತಿಳಿಸಿದರು‌.

ಇಂದ್ರಜಿತ್ ಅವರಿಗೆ ರಕ್ಷಣೆ ಇದೆ. ಅವರು ತನಿಖೆಗೆ ಸಹಕಾರ ನೀಡಬೇಕು ಹಾಗೂ ಅವರು ಯಾರ ಬಗ್ಗೆಯೂ ಅವರಿಗೆ ಭಯ ಬೇಡ, ಪೊಲೀಸ್ ಇಲಾಖೆ ರಕ್ಷಣೆ ವ್ಯವಸ್ಥೆ ಮಾಡುತ್ತೆ ಎಂದು ಹೇಳಿದ್ದಾರೆ.

ಈ ಜಾಲವನ್ನ ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಇಂದ್ರಜಿತ್ ಅವರ ಸಹಕಾರದ ಬೇಕಿದೆ. ಈ ತನಿಖೆಯನ್ನು ಪೊಲೀಸರು ಗಂಭೀರವಾಗಿ ನಡೆಸುತ್ತಿದ್ದಾರೆ. ಈ ರಾಕೆಟ್ ನಲ್ಲಿ ಯಾರಿದ್ದಾರೆ, ವ್ಯಾಪಾರ ಯಾರದ್ದು ಎಂಬುದು ತನಿಖೆಯ ಬಳಿಕ ತಿಳಿಲಿದೆ ಎಂದರು.

Post a Comment

Previous Post Next Post