ಟಿಸಿ ವರ್ಗಾವಣೆ ಕೊಡಲು ನಿರಾಕರಿಸಿದ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು-ಉಪನ್ಯಾಸಕರ ಆಕ್ರೋಶ


ಹಾಸನ: ಪ್ರಥಮ ಪಿಯುಸಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಹೋಗಲು ಟಿಸಿ ಕೇಳಿದರೇ ಕೊಡಲು ನಿರಾಕರಿಸಿದ ಸ್ಟೂಡೆಂಟ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ನಡವಳಿಕೆ ಖಂಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶವ್ಯಕ್ತಪಡಿಸಿದಲ್ಲದೆ ಕಾಲೇಜು ಮುಂದೆ ಧರಣಿ ಕುಳಿತರು. ಕಳೆದ ಹಲವಾರು ತಿಂಗಳಿನಿಂದ ಸಂಬಳ ನೀಡದೆ ವಂಚಿತರಾಗಿರುವ ಉಪನ್ಯಾಸಕರು ಕೂಡ ಪ್ರತಿಭಟನೆಗೆ ಮುಂದಾದರು.
       ಹೌದು ಈ ಪ್ರತಿಭಟನೆ ನಡೆದಿದ್ದು, ನಗರದ ರಿಂಗ್ ರಸ್ತೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಎದುರು ಇರುವ ಸ್ಟೂಡೆಂಟ್ ಪಿಯು ಕಾಲೇಜಿನ ಆವರಣದಲ್ಲಿ. ಇಂದು ಕೊರೋನಾ ಎಂಬ ಮಹಾಮಾರಿ ಆವರಿಸಿ ಸಾವು-ನೋವು ಸಂಭವಿಸುತ್ತಿರುವ ಸಂದರ್ಭದಲ್ಲಿ ಅನವಶ್ಯಕವಾಗಿ ಪದೆ ಪದೆ ಕಾಲೇಜು ಬಳಿ ಬರುವಂತೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಅನಾನುಕೂಲವಾಗಿದ್ದು ಕೂಡಲೇ ವಿದ್ಯಾರ್ಥಿಗಳು ಬೇರೆ ಕಾಲೇಜಿಗೆ ಸೇರಲು ಟಿಸಿ ಕೊಡಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳನ್ನೇಲ್ಲಾ ಒಂದು ರೂಮಿಗೆ ಸೇರಿಸಿಒಕಂಡು ಬೇರೆ ಕಾಲೇಜಿಗೆ ಹೋಗದಂತೆ ಒತ್ತಾಯ ಪೂರ್ವಕವಾಗಿ ವಿದ್ಯಾರ್ಥಿಗಳ ಮನವರಿಕೆ ಮಾಡಲು ಮುಂದಾದರು. ಈ ವೇಳೆ ಪೋಷಕರು ಆಕ್ರೋಶವ್ಯಕ್ತಪಡಿಸಿದ ವೇಳೆ ಕಾಲೇಜಿನ ಆಡಳಿತ ಮಂಡಳಿಯವರು ಬಂದು ಪೋಷಕರ ವಿರುದ್ಧ ಕಿಡಿಕಾರಿದರು. ಈ ವೇಳೆ ಎನ್.ಎಸ್.ಯು.ಐ ಮತ್ತು ರೈತ ಸಂಘದವರು ಕೂಡ ದಾವಿಸಿ ವಿದ್ಯಾರ್ಥಿಗಳ ಪರ ನಿಂತರು. ಪರ-ವಿರೋಧದ ಮಾತಿನ ವಾಗ್ವಾದಗಳು ಕೇಳಿ ಬಂದಿತು.
      ಸರಿಯಾಗಿ ಸಂಬಳ ಕೊಡದ ಕಾರಣ ಎಲ್ಲಾ ಉಪನ್ಯಾಸಕರು ಬೇರೆ ಕಾಲೇಜಿಗೆ ಹೋಗುತ್ತಿರುವುದರಿಂದ ವರ್ಗಾವಣೆ ಪತ್ರವನ್ನು ಕೇಳಲು ಕಾಲೇಜಿಗೆ ಹೋದ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸ್ಪಂದಿಸಲಿಲ್ಲ. ಹಲವು ಬಾರಿ ಕಾಲೇಜಿಗೆ ಹೋದಾಗ ಅವಶ್ಯಕತೆ ಇಲ್ಲದ ದಾಖಲೆಗಳನ್ನು ಕೇಳಿದ್ದರು. ಎಲ್ಲಾ ದಾಖಲೆ ಕೊಟ್ಟರೂ ಕೂಡ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸಿರುವುದಾಗಿ ದೂರಿದರು. ಮತ್ತು ಹಲವು ತಿಂಗಳಿನಿಂದ ಸಂಬಳ ಕೊಡದಿರುವ ನಾವುಗಳು ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಕೂಡಲೇ ಬೇರೆ ಕಾಲೇಜಿಗೆ ಉಪನ್ಯಾಸ ಮಾಡಲು ವರ್ಗಾವಣೆ ಪತ್ರ ಕೊಡಬೇಕು ಎಂದು ತಮ್ಮ ಬೇಡಿಕೆಯಲ್ಲಿ ಮನವಿ ಮಾಡಿದ್ದಾರೆ. 

Post a Comment

Previous Post Next Post