ಸಕಲೇಶಪುರ : ಬಿಸಿಯೂಟ ನೌಕರರ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ನೌಕರರು, ಸಿ ಐಟಿಯು ಕಾರ್ಯಕರ್ತೆಯರು ತಾಲೂಕು ಪಂಚಾಯತಿ ಎದುರು ಅನಿರ್ದಿಷ್ಟಾವದಿ ಮುಷ್ಕರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಿಯುಟಿಐನ ತಾಲೂಕು ಮುಖಂಡೆ ಸೌಮ್ಯ ಮಾತನಾಡಿ ಏಪ್ರೀಲ್ ತಿಂಗಳಿಂದ ಬಿಸಿಯೂಟ ನೌಕರರಿಗೆ ಸರ್ಕಾರ ವೇತನ ನೀಡದೆ ಸತಾಯಿಸುತ್ತಿದ್ದು,ಎಷ್ಟೋ ಕುಟುಂಬಗಳು ಈ ಕೆಲಸವನ್ನು ನಂಬಿಕೊಡಿರುವುದರಿಂದ ಅವರ ಕುಟುಂಬಗಳು ಬೀದಿ ಪಾಲಗುವ ಹಿನ್ನಲೆಯಲ್ಲಿ ಸರ್ಕಾರ ಕೂಡಲೆ ಅವರ ಬಾಕಿ ವೇತನವನ್ನು ನೀಡುವವರೆಗೂ, ಬಿಸಿಯೂಟದ ನೌಕರರು ತಾಲೂಕು ಪಂಚಾಯತಿ ಭಾಗದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದ ಸರಕಾರ ವೇತನ ಜಾರಿ ಮಾಡುವರೆಗೂ ಸಹ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ತಾಲೂಕಿನಲ್ಲಿ ಸುಮಾರು 200 ಜನ ಬಿಸಿಯೂಟ ನೌಕರರು ಹಾಗೂ ಸಿಬ್ಬಂದಿಗಳಿದ್ದು,ಯಾರಿಗೂ ಸಹ ಏಪ್ರೀಲ್ ತಿಂಗಳಿಂದ ವೇತನ ನೀಡಿಲ್ಲ.ಅಲ್ಲದೆ ಕೋವಿಡ್ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿದಾಗಲೂ ಸಹ ಮಕ್ಕಳಿಗೆ ನೀಡುತ್ತಿದ್ದ ಬಿಸಿಯೂಟ ನಿಲ್ಲಿಸಿದ್ದರೂ ಸಹ ಅವರ ಆಹಾರ ಧಾನ್ಯಗಳನ್ನು ಅವರ ಮನೆಗಳಿಗೆ ತಲುಪಿಸುವಂತಹ ಕೆಲಸಮಾಡುವುದರ ಜೊತೆಗೆ ಹಾಗೂ ಕೊರೊನಾದಿಂದ ಕ್ವಾಂರೆಂಟೆನ್ ಇದ್ದವರಿಗೂ ಸಹ ನಾವುಗಳು ಅವರಿಗೆ ಆಹಾರ ತಯಾರಿಸುವ ಕೆಲಸ ಮಾಡಿದ್ದು,ಆದರೂ ಸರ್ಕಾರ ನಮಗೆ ವೇತನ ನೀಡದೆ ನಮ್ಮನ್ನು ಕಡೆಗಣಿಸಲಾಗುತ್ತಿದೆ.ಸರ್ಕಾರ ಕೇವಲ ಬಾಯಿ ಮಾತಲ್ಲಿ ಬಿಸಿಯೂಟ ನೌಕರರನ್ನು ಕಡ್ಡಾಯಗೊಳಿಸುತ್ತೇವೆ,ಸ್ವಾವಲಂಬನೆ ಯಾಗಿ ಅವರಿಗೆ ದಾರಿ ದೀಪ ಮಾಡಿಕೊಡುತ್ತೇವೆ ಎನ್ನುವುದು ಅವರ ಆಶ್ವಾಸನೆಯಾಗಿದ್ದು,ಈ ಉದ್ಯೋಗ ನಂಬಿಕೊಂಡಿರುವ ಎಷ್ಟೋ ಬಡ ಮಹಿಳೆಯರು,ವಿಚ್ಚೇಧಿತರು,ವಿಧವೆಯರು ಈ ಕೆಲಸ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸರಕಾರ ಕೂಡಲೆ ಇವದ ಉದ್ಯೋಗವನ್ನು ಖಾಯಂಗೊಳಿಸಬೇಕು, ಕನಿಷ್ಠ ವೇತನ ಜಾರಿ ಮಾಡಬೇಕು ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯಬೇಕು ಎಂದು ಆಗ್ರಹಿಸಿದರು.
ಮಾನವೀಯತೆ ಮೆರೆದ ಕಾರ್ಯನಿರ್ವಾಹಣ ಅಧಿಕಾರಿ : ಬಿಸಿಯೂಟ ನೌಕರರು, ಸಿ ಐಟಿಯು ಕಾರ್ಯಕರ್ತೆಯರು ಪ್ರತಿಭಟನೆ ತಾಲೂಕು ಪಂಚಾಯತಿ ಕಚೇರಿ ಮುಂಬಾಗ ನಡೆಸುತ್ತಿದ್ದ ಸಂದರ್ಬದಲ್ಲಿ ಮಳೆಯಿಂದ ಕಿರಿ ಕಿರಿ ಅನುಭವಿಸುವುದನ್ನು ನೋಡಿದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಧರಣಿ ಮುಷ್ಕರ ನಡೆಸುವಂತೆ ಮುಷ್ಕರ ನಿರತರೊಂದಿಗೆ ಹೇಳಿದರು. ಮುಷ್ಕರ ನಿರತರು ಸಭಾಂಗಣದಲ್ಲಿ ಮುಷ್ಕರವನ್ನು ಮುಂದುವೆರಸಿದರು.
ಸಾವಿತ್ರಿ, ಮಣಿಯಮ್ಮ, ಸುಮಿತ್ರ, ಶಾಂತ
ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ರವಿಕುಮಾರ್ ಅವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು.
Tags
ಸಕಲೇಶಪುರ