ಮನೆ ನಿರ್ಮಾಣ:ನಿಂದಿಸಿ ಹಲ್ಲೆಗೆ ಯತ್ನ

ಬಾಳ್ಳುಪೇಟೆ: ಮಡ್ಡಿನಕೆರೆ ಗ್ರಾಮದ ಕಮಲಮ್ಮ ಎಂಬುವವರ ಗ್ರಾಮಠಾಣಾ ಜಾಗದಲ್ಲಿ ಮನೆ
ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ ಮನೆ ನಿರ್ಮಾಣ
ಮಾಡದಂತೆ ಕಮಲಮ್ಮ ಅವರ ಸೋದರನ ಮಕ್ಕಳು
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವ
ಘಟನೆ ನಡೆದಿದೆ.
 ಕಮಲಮ್ಮ ಅವರು ಜು. 23 ರಂದು ಬೆಳಗೋಡು ಹೋಬಳಿಯ  ಮಡ್ಡಿನಕೆರೆ(ಹೊಸಗದ್ದೆ) ಗ್ರಾಮದ ಗ್ರಾಮಠಾಣ ಜಾಗದಲ್ಲಿಹೊಸದಾಗಿ ಮನೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ಅವರ ಸಹೋದರನ ಮಕ್ಕಳಾದ ಸಾಗರ ಮತ್ತು ದರ್ಶನ್ಎಂಬುವವರು ಮನೆ ನಿರ್ಮಿಸದಂತೆ ಕಮಲಮ್ಮ ಮತ್ತು ಅವರ ಸೊಸೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ಸಾಮಾಗ್ರಿಗಳನ್ನು ಹೊಡೆದು ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು ಮನೆಯ ಆಸುಪಾಸಿನಲ್ಲಿ ಬೆಳೆದಿದಿದ್ದ ಬೆಳೆಗಳನ್ನು ಕೂಡ ಕಡಿದು ಹಾಕಿದ್ದಾರೆ.  ಇದರಿಂದ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಮಲಮ್ಮ ಈಗ ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ.
ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದ ಅವರು ಪೊಲೀಸರು ಒಬ್ಬರ ಪರವಾಗಿ ವರ್ತಿಸುತ್ತಿದ್ದಾರೆ ಇದರಿಂದ ನಿನಗೆ ನ್ಯಾಯ ದೊರಕಿಸಿಕೊಡಬೇಕೆಂದು ಪತ್ರಿಕೆಯ ಮೂಲಕ ಕೇಳಿಕೊಂಡಿದ್ದಾರೆ

Post a Comment

Previous Post Next Post