ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ರಾಜಕೀಯವಾಗಿ ಏನೇನು ಆರೋಪಗಳನ್ನು ಮಾಡುತ್ತಿದ್ದಾರೆ ಅದನ್ನೆಲ್ಲಾ ನಾನು ಸಲಹೆ ರೂಪದಲ್ಲಿ ಸ್ವೀಕರಿಸುವೆ ಎಂದು ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಬ್ ರಿಜಿಸ್ಟರ್ ಹಾನಕ್ಕೆ ಬಂದಿರುವವರು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರೇ ಹಾಕಿದಂತ ವ್ಯಕ್ತಿ. ಮೊದಲು ಹೊಳೆನರಸೀಪುರದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್.ಡಿ. ರೇವಣ್ಣನವರು ಅಧಿಕಾರದಲ್ಲಿ ಇದ್ದಾಗ ಸಬ್ ರಿಜಿಸ್ಟರ್ ಅಧಿಕಾರಿಯನ್ನು ಹಾಸನಕ್ಕೆ ವರ್ಗಾಯಿಸಿದರು. ಹೊಸಬರನ್ನು ಹಾಕಿದರೇ ವರ್ಗವಣೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ಆದರೇ ಇಲ್ಲಿಗೆ ಅವರೆ ಹಾಕಿದ ಅಧಿಕಾರಿ ಬಂದರೇ ಭ್ರಷ್ಟಚಾರ ನಡೆಯುತ್ತಿದೆ ಎನ್ನುತ್ತಾರೆ ಎಂದು ಟಾಂಗ್ ಕೊಟ್ಟರು. ರೇವಣ್ಣನವರು ರಾಜಕೀಯವಾಗಿ ಏನೇನು ಆರೋಪ ಮಾಡುತ್ತಾರೆ ಅದನ್ನು ನಾನು ಸಲಹೆ ರೂಪದಲ್ಲಿ ಸ್ವೀಕರಿಸಿ ಯಾವ ರೀತಿ ಸಾರ್ವಜನಿಕರಿಗೆ ಅನುಕೂಲವಾಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ನನ್ನ ಕ್ಷೇತ್ರದ ನಗರಸಭೆ ಯಾವ ಮೀಸಲಾತಿಗಾದರೂ ಬರಲಿ ಬಿಜೆಪಿ ಸದಸ್ಯ ಯಾರು ಇರುತ್ತಾರೆ ಅವರು ಅಧ್ಯಕ್ಷರಾಗುತ್ತಾರೆ. ಜನರಲ್ ಪುರುಷ, ಮಹಿಳೆಯಾಗಲಿ, ಬಿಸಿಎಂ ಮತ್ತು ಬಿಸಿಎಂ (ಎ) ಆಗಲಿಮ ಎಸ್.ಸಿ. ಮತ್ತು ಎಸ್.ಟಿ. ಯಾವ ಕ್ಯಾಟಗರಿ ಬಂದರೂ ನಮ್ಮ ಸದಸ್ಯರೆ ಅಧ್ಯಕ್ಷರಾಗುವುದು ನಿಶ್ಚಿತ ಎಂದು ಭರವಸೆ ನುಡಿದರು. ಈಗ ಯಾವ ಪಕ್ಷಕ್ಕೂ ಕೂಡ ಬಹುಮತ ಇರುವುದಿಲ್ಲ. ಅಭಿವೃದ್ಧಿಗೆ ಪೂರಕವಾಗಿ ಕೆಲಸವಾಗಬೇಕಾದರೇ ಸ್ಥಳೀಯನಾಗಿ ಶಾಸಕನಿದ್ದೇನೆ. ಸರಕಾರವಿದೆ ಎಂದರು.
ಹಾಸನ ನಗರದ ಪ್ರಮುಖವಾಗಿರುವ ಹೊಸ ಬಸ್ ನಿಲ್ದಾಣಕ್ಕೆ ಹಾದು ಹೋಗುವ ಮಧ್ಯೆ ಮೇಲ್ ಸೇತುವೆ ಕೆಲಸ ತಡವಾಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಶಾಸಕರು, ಸೇತುವೆಯನ್ನು ತಾಂತ್ರಿಕವಾಗಿ ಮಾಡುವ ಕೆಲಸವಾಗಿದೆ. ಅವಸರದಲ್ಲಿ ಕೆಲಸ ಮಾಡಲು ಹೋಗಿ ಒಮ್ಮೆ ಕುಸಿದು ಬಿದ್ದಿರುವುದನ್ನು ಎಲ್ಲಾರು ಗಮನಿಸಿದ್ದೇವೆ. ಆತುರದ ಕೆಲಸ ಬೇಡ. ತಾಂತ್ರಿಕವಾಗಿ ಕ್ರಿಯಾಶೀಲತೆಯಿಂದ ಮಾಡಬೇಕಾಗಿರುವ ಕೆಲಸವಾಗಿರುವುದರಿಂದ ಉತ್ತಮ ಕಾಮಗಾರಿಯನ್ನು ಮಾಡೋಣ ಆದರೇ ಆತುರದ ಕೆಲಸ ಬೇಡ ಎಂದರು. ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ಮಾಡಿ ತ್ವರೀತವಾಗಿ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಕಳೆದ ಎರಡು ದಿವಸಗಳ ಹಿಂದೆ ನಡೆದ ಘಟನೆ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಲಾಗಿದೆ. ಮಾನಸಿಕ ಸ್ಥಿತಿಯನ್ನು ಕಳೆದುಕೊಂಡಿರುವ ವ್ಯಕ್ತಿ ಇಂತಹ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಮೇಲ್ ನೋಟಕ್ಕೆ ಕಂಡು ಬಂದಿದೆ. ಈ ಘಟನೆ ಬಗ್ಗೆ ಇನ್ನು ಹೆಚ್ಚಿನ ರೀತಿ ತನಿಖೆ ನಡೆಸಿ ಅಪರಾಧಿಯನ್ನು ಶೀಘ್ರವಾಗಿ ಬಂಧಿಸಬೇಕೆಂದು ಒತ್ತಾಯಿಸಿದರು. ಈಗಾಗಲೇ ಪೊಲೀಸ್ ಇಲಾಖೆ ಕಾರ್ಯಾನ್ಮುಕವಾಗಿದ್ದು, ಮುಂದಿನ ದಿನಗಳಲ್ಲಿ ಅಂತಹ ಕೆಲಸವಾಗದಂತೆ ಮುಂಜಾಗ್ರತ ಕ್ರಮಕೈಗೊಳ್ಳಲು ಇಲಾಖೆಗೆ ತಿಳಿಸಿರುವುದಾಗಿ ಹೇಳಿದರು. ಈ ಘಟನೆಯನ್ನು ಪೊಲೀಸ್ ಇಲಾಖೆ ಮೇಲೆ ಮಾತ್ರ ಹೊರಿಸುವುದಿಲ್ಲ. ವ್ಯಕ್ತಿ ಮಾನಸಿಕ ಅಸಮತೋಲವಾಗಿರುವುದಾಗಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Tags
ಹಾಸನ