ಅರಸೀಕೆರೆ ತಾಲ್ಲೂಕು ಮಾಡಾಳು ಗ್ರಾಮದ ಶ್ರೀ ಸ್ವರ್ಣಗೌರಿ ಜಾತ್ರಾ ಮಹೋತ್ಸವವನ್ನು ರಾಜ್ಯ ಸರ್ಕಾರದ ಕೊರೋನಾ ಮಾರ್ಗಸೂಚಿಯಂತೆ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಮಂಡಳಿಯು ತಿಳಿಸಿದೆ.
ಪ್ರತಿವರ್ಷ ಗೌರಿ ಹಬ್ಬದಂದು ಪ್ರತಿಷ್ಟಾಪನೆಯಾಗಿ 9 ದಿನಗಳ ಕಾಲ ಸಹಸ್ರಾರು ಭಕ್ತರಿಗೆ ದರ್ಶನ ನೀಡುತ್ತಿದ್ದ ಸ್ವರ್ಣಗೌರಿ ದೇವಿಯ ವಿಗ್ರಹವನ್ನು ಈ ವರ್ಷ ಕೊರೊನಾ ಕಾರಣದಿಂದಾಗಿ ಪ್ರತಿಷ್ಟಾಪನೆ ಮಾಡುತ್ತಿಲ್ಲ, ಹಾಗಾಗಿ ಭಕ್ತರು ದರ್ಶನಕ್ಕೆ ಬರುವುದು ಬೇಡವೆಂದು ಮಂಡಳಿಯು ಹೇಳಿಕೆ ನೀಡಿದೆ.
Tags
ಅರಸೀಕೆರೆ