ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಹೋದ ಪೋಷಕರ ಮತ್ತು ವಿದ್ಯಾರ್ಥಿಗಳ ಬಳಿ ಯಾವುದೇ ಲೆಕ್ಕಪತ್ರವಿಲ್ಲದೆ ದುರ್ಗಿಗುಡಿ ಶಾಲೆಯಲ್ಲಿ ಹಣ ಪಡೆಯಲಾಗುತ್ತಿರುವ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ವಿದ್ಯಾರ್ಥಿನಿಯೋರ್ವರ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಬಂದ ಪೋಷಕರ ಬಳಿ ರಶೀದಿ ಇಲ್ಲದೆ ಹಣಪಡೆಯುವುದರ ಬಗ್ಗೆ ವಿಡಿಯೋವೊಂದು ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ಪೋಷಕರ, ಶಿಕ್ಷಕರ ಹಾಗು ಮುಖ್ಯೋಪಧ್ಯಾಯರ ನಡುವಿನ ಮಾತಿನ ಚಕಮಕಿ ಭರ್ಜರಿಯಾಗಿಯೇ ನಡೆದಿದೆ.
ಶಿವಮೊಗ್ಗದ ದುರ್ಗಿಗುಡಿ ಶಾಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿಯೋರ್ವಳ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಬಂದ ಪೋಷಕರ ಬಳಿ ಶಿಕ್ಷಕರಾದ ಡಿ.ವಿ.ಹುಳ್ಳೂರು ಹಾಗೂ ರವಿ ಎಂಬುವವರು ಇತರೆ ಪೋಷಕರ ಬಳಿ 50 ರೂ ಹಣ ಪಡೆತ್ತಿದ್ದಾರೆ. ಈ ಹಣ ಸಂಗ್ರಹಣೆ ಯಾವುದೇ ತಿಳುವಳಿಕೆ ಪತ್ರವಿಲ್ಲದೆ, ಹಾಗೂ ರಶೀದಿಯೂ ಇಲ್ಲದೆ ಪಡೆಯುತ್ತಿದೆ ಎಂದು ವಿದ್ಯಾರ್ಥಿನಿಯ ಪೋಷಕರೋರ್ವರು ಆಕ್ಷೇಪಿಸಿದ್ದಾರೆ.
ಶಿಕ್ಷಕರು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಶಾಲೆಯ ಮುಖ್ಯೋಪಧ್ಯಾಯರ ಬಳಿಯೂ ದೂರು ನೀಡಿದಾಗ ಇದಕ್ಕೆಲ್ಲಾ ರಶೀದಿ ನೀಡಲು ಸಾಧ್ಯವಿಲ್ಲ. ಬೇಕಾದರೆ ಕೊಡಬಹುದು ಬಿಟ್ಟರೆ ಬಿಡಬಹುದು ಎಂದು ದರ್ಫದಿಂದ ಉತ್ತಿರಿಸಿದ್ದಾರೆ. ಈ ಕುರಿತು ವಿಡಿಯೋವೊಂದನ್ನೂ ಹೆಸರು ಹೇಳಲು ಇಚ್ಛಿಸದ ಪೋಷಕರು ಬಿಡುಗಡೆ ಮಾಡಿದ್ದಾರೆ. ಇದನ್ನ ಸಾಮಾಜಿಕ ಜಾಲತಾಣದಲ್ಲಿಯೂ ಬಿಡುಗಡೆ ಮಾಡಲಾಗಿದೆ.
ಅಕೌಂಟಬಿಲಿಟಿ ಇಲ್ಲದೆ ಹಣ ಸಂಗ್ರಹಣೆ ಯಾಕೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ಕಟ್ಟಡದ ಅಭಿವೃದ್ಧಿಗೆ ಸಂಗ್ರಹಿಸಲಾಗುತ್ತಿದೆ ಎಂದರೆ ಅದಕ್ಕೆ ಅಕೌಂಟಬಿಲಿಟಿ ಬೇಡವೇ? ಮುಖ್ಯೋಪಧ್ಯಾಯರು ಜೆರಾಕ್ಸ್ ಗೆ ನಾಲ್ಕು ಕಾಪಿಗಳನ್ನ ಪಡೆಯಬೇಕಿದೆ. ಈ ಹಣವನ್ನ ಸಂಗ್ರಹಿಸಲು ಇದೊಂದು ಪ್ರಯತ್ನವಾಗಿದೆ ಎಂಬ ಅರ್ಥದಲ್ಲಿ ಈ ವಿಡಿಯೋದಲ್ಲಿ ಹೇಳವ ಪ್ರಯತ್ನ ಮಾಡಿದ್ದಾರೆ. ಆದರೂ ಸರ್ಕಾರಿ ಶಾಲೆಯಲ್ಲಿ ಇಂತಹ ಪ್ರಸಂಗಗಳು ನಡೆಯುತ್ತವೆ ಎಂದರೆ ನಾಚಿಕೆಗೇಡಿನ ಸಂಗತಿ.
Tags
ಶಿವಮೊಗ್ಗ