ಬರೋಬ್ಬರಿ 24 ಜನರ ಹೆಸರು ರಿವೀಲ್ ಮಾಡಿದ ನಟಿ ಸಂಜನಾ


ನಟಿ ಸಂಜನಾರನ್ನು ಇಂದು ವಿಚಾರಣೆ ನಡೆಸುತ್ತಿದ್ದು ಆಕೆ ಬರೋಬ್ಬರಿ 24 ಜನರ ಹೆಸರು ಹೇಳಿದ್ದಾರೆ ಎನ್ನಲಾಗಿದೆ. ಮೊದ ಮೊದಲು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ವಾದಿಸುತ್ತಿದ್ದ ಸಂಜನಾ ಸಿಸಿಬಿ ಅಧಿಕಾರಿಗಳು ದಾಖಲೆ ಸಮೇತ ಆಕೆಯ ಮುಂದೆ ಇಡುತ್ತಿದ್ದಂತೆಯೇ ಆಕೆ 24 ಜನರ ಹೆಸರು ಹೇಳಿದ್ದಾರೆ ಎನ್ನಲಾಗಿದೆ.ಬೆಂಗಳೂರಿನ ಮಾಜಿ ಶಾಸಕರ ಮಗ, ಇಬ್ಬರು ನಟರು, ಕಿರುತೆರೆಯ ನಾಲ್ಕು ಜನರ ಸ್ನೇಹ ವಿದೆ ಎಂದಿದ್ದಾರೆ. ಅಲ್ಲದೇ ಪ್ರಸಿದ್ಧ ಬಿಜಿನೆಸ್ ಮೆನ್ ಗಳ ಪಾರ್ಟಿಯಲ್ಲಿ ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.ಈ ಹಿಂದೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಮಾಡಿದ ಆರೋಪಕ್ಕೆ ಸಂಜನಾ ಗರಂ ಆಗಿದ್ದರು. ಪ್ರಶಾಂತ್ ಸಂಬರಗಿ ನನ್ನ ಇಮೇಜ್ ಹಾಳು ಮಾಡುತ್ತಿದ್ದಾನೆ. ನನ್ನ ಮೇಲೆ ಆರೋಪ ಮಾಡಲು ಆತನ ಬಳಿ ಸಾಕ್ಷ್ಯ ಏನಿದೆ. ಸಿಕ್ಕ ಸಿಕ್ಕ ಕಡೆ ಹೆಸರು ಹಾಳು ಮಾಡುವ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ ಹಳೆ ದ್ವೇಷಕ್ಕಾಗಿ ನನ್ನ ಮೇಲೆ ಡ್ರಗ್ ಆರೋಪ ಹೊರಿಸುತ್ತಿದ್ದಾನೆ ಎಂದು ಸಂಜನಾ ಗರಂ ಆಗಿದ್ದರು.ಇಂದು ಡ್ರಗ್ ಕೇಸಿಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಆಕೆಯ ಮನೆಯ ಮೇಲೆ ಬೆಳಿಗ್ಗೆ ದಾಳಿ ಮಾಡಿ ಅನೇಕ ಮಹತ್ವದ ದಾಖಲೆಯನ್ನು ವಶಪಡಿಸಿಕೊಂಡರು ಎನ್ನಲಾಗಿದೆ. ಆಕೆಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.

Post a Comment

Previous Post Next Post