ಮೂಡಿಗೆರೆ ಹ್ಯಾಂಡ್‍ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡಿ

ಮೂಡಿಗೆರೆ ಹ್ಯಾಂಡ್‍ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡಿ
ವಿಜಯವಾಣಿ ಸುದ್ದಿಜಾಲ ಬಣಕಲ್:ಮೂಡಿಗೆರೆ ಹ್ಯಾಂಡ್ ಪೋಸ್ಟ್ ವೃತ್ತಕ್ಕೆ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿಡಬೇಕಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಕಸಾಪ, ಪೀಸ್ ಅಂಡ್ ಅರ್ವೆನೇಸ್ ಟ್ರಸ್ಟ್, ಕನ್ನಡ ಜಾನಪದ ಪರಿಷತ್ತು, ಕೊಟ್ಟಿಗೆಹಾರದ ಅಂಬೇಡ್ಕರ್ ಯುವಕ ಸಂಘ ಮತ್ತು ಗೆಳೆಯರ ಬಳಗದ ವತಿಯಿಂದ ತೇಜಸ್ವಿ ಜನ್ಮದಿನದ ಪ್ರಯುಕ್ತ ನಡೆದ ರಕ್ತದಾನ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.
ಮೂಡಿಗೆರೆ ಹ್ಯಾಂಡ್‍ಪೋಸ್ಟ್ ಎಂದೊಡನೆ ತೇಜಸ್ವಿ ಅವರ ಹೆಸರು ನೆನಪಿಗೆ ಬರುತ್ತದೆ. ತೇಜಸ್ವಿ ಅವರು ಬದುಕಿ ಬಾಳಿದ ಊರಾದ ಹ್ಯಾಂಡ್‍ಪೋಸ್ಟ್‍ನ ವೃತ್ತಕ್ಕೆ ತೇಜಸ್ವಿ ಹೆಸರಿಡುವುದು ಸೂಕ್ತ. ಮೂಡಿಗೆರೆ ಹ್ಯಾಂಡ್‍ಪೋಸ್ಟ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ವೃತ್ತವಾಗಿದೆ. ದಿನನಿತ್ಯ ಈ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಈ ಮಾರ್ಗವಾಗಿ ಬರುವುದರಿಂದ ತೇಜಸ್ವಿ ಹೆಸರನ್ನು ವೃತ್ತಕ್ಕೆ ಹಿಡುವುದು ತೇಜಸ್ವಿಯವರಿಗೆ ಈ ಊರಿನವರು ಗೌರವ ಸಲ್ಲಿಸಿದಂತಾಗುತ್ತದೆ. ಹ್ಯಾಂಡ್‍ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕಿದೆ ಎಂದರು.
ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್‍ಗೋಡ್ ಮಾತನಾಡಿ ತೇಜಸ್ವಿ ಅವರ ಚಿಂತನೆಗಳು ಜನಸಾಮಾನ್ಯರನ್ನು ತಲುಪಬೇಕಿದೆ. ವಿಶೇಷವಾಗಿ ಮನೆಮನೆಗೆ ತೇಜಸ್ವಿ ಪುಸ್ತಕಗಳು ತಲುಪಬೇಕಿದೆ. ತೇಜಸ್ವಿ ಅವರ ವಿಚಾರಗಳು ಯುವಪೀಳಿಗೆಯನ್ನು ಗಾಡವಾಗಿ ಪ್ರಭಾವಿಸಿವೆ ಎಂದರು.
ಕೊಟ್ಟಿಗೆಹಾರ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರಭಾಕರ್ ಬಿನ್ನಡಿ ಮಾತನಾಡಿ ತೇಜಸ್ವಿ ಅವರು ತಮ್ಮ ಕೃತಿಗಳ ಮೂಲಕ ಓದುಗರಲ್ಲಿ ವೈಚಾರಿಕತೆಯನ್ನು ಬೆಳೆಸುವ ಜೊತೆಗೆ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುತ್ತಾರೆ ಎಂದರು.
ಪೀಸ್ ಅಂಡ್ ಅರ್ವೇರ್ನೆಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಲ್ತಾಪ್ ಬಿಳುಗುಳ, ಕೊಟ್ಟಿಗೆಹಾರ ಗೆಳೆಯರ ಬಳಗದ ಉಪಾಧ್ಯಕ್ಷ ಸಂಜಯಗೌಡ ಮಾತನಾಡಿದರು. 
ಬಣಕಲ್ ಹೋಬಳಿಯ ಎಸ್‍ಎಸ್‍ಎಲ್‍ಸಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಶ್ರಾವ್ಯ, ಗೌತಮಿ, ಅಕ್ಷಿತಾ, ಸುಕ್ಷಿತಾ, ಅಪೂರ್ವ, ಉಷಾ,  ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪೀಸ್ ಅಂಡ್ ಅವೆರ್ನೇಸ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್, ಮಲ್ನಾಡ್ ಗಲ್ಪ್ ಕ್ಲಬ್ ಅಧ್ಯಕ್ಷ ಹಮೀದ್ ಸಬ್ಬೇನಹಳ್ಳಿ, ಕಸಾಪ ಪಧಾಧಿಕಾರಿಗಳಾದ ಎಂ.ಎಸ್ ಅಶೋಕ್, ಲಕ್ಷ್ಮಣಗೌಡ, ಎಂ.ಎಸ್ ನಾಗರಾಜ್, ಜಯಪಾಲ್, ಭಕ್ತೇಶ್, ವೆಂಕಟೇಶ್, ಆರೀಪ್, ಪರೀಕ್ಷಿತ್, ನಾಗರಾಜ್, ಅಶ್ವತ್, ಪಿ.ಕೆ ಮಂಜುನಾಥ್ ಮುಂತಾದವರು ಇದ್ದರು

Post a Comment

Previous Post Next Post