ಹಾಸನದಲ್ಲಿಂದು 501 ಕರೋನ ಪಾಸಿಟಿವ್ ಪತ್ತೆ ಜಿಲ್ಲೆಯಲ್ಲಿ ಒಟ್ಟು ಸಂಖ್ಯೆ 12000 ಕ್ಕೆ ಏರಿಕೆ

ಹಾಸನ: ಜಿಲ್ಲೆಯಲ್ಲಿ  ಕರೊನಾ ದಿನದಿಂದ ದಿನಕ್ಕೆ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಲೇ ಇದೆ. ಇಂದು ಒಂದೇ ದಿನ ಗರಿಷ್ಠ 501 ಜನರಲ್ಲಿ ಕೋವಿಡ್-19 ದೃಢಪಟ್ಟಿದ್ದು 4 ಜನ ಮೃತಪಟ್ಟಿದ್ದಾರೆ. 
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12000 ಕ್ಕೆ ಏರಿಕೆಯಾಗಿದ್ದು, 8730 ಜನ ಇಲ್ಲಿವರೆಗೆ ಡಿಸ್ಚಾರ್ಜ್ ಆಗಿದ್ದಾರೆ. 3023 ಸಕ್ರಿಯ ಪ್ರಕರಣಗಳಿದ್ದು, 55 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರೊನಾದಿಂದ ಈ ತನಕ 247 ಜನ ಮೃತಪಟ್ಟಿದ್ದಾರೆ.

Post a Comment

Previous Post Next Post