ಹಾಸನ: ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಶನಿವಾರದಂದು ಪಶು ಸಂಗೋಪನಾ ಇಲಾಖೆಯವತಿಯಿಂದ ಆಯೋಜಿಸಿದ್ದ ಪಶು ಸಂಜೀವಿನಿ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯನವರು ಪುಷ್ಪವನ್ನು ಹಾಕಿ ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಸಾಕಿದ ಜಾನುವಾರುಗಳು ಖಾಯಿಲೆಗಳಿಗೆ ತುತ್ತಾದಾಗ ಕೇವಲ ಒಂದು ಕರೆ ಮಾಡಿದರೆ ಸಾಕು, ಪಶು ಸಂಜೀವಿನಿ ವಾಹನವು ರೈತರ ಮನೆಯ ಬಾಗಿಲಿಗೆ ಬಂದು ಜಾನುವಾರುಗಳ ಚಿಕಿತ್ಸೆ ಮಾಡುವ ಸೌಲಭ್ಯವನ್ನು ಈ ಮೂಲಕ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದರು.
ಜನುವಾರುಗಳು ಖಾಯಿಲೆ ಬಿದ್ದಾಗ ರೈತರು ಅವುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಬದಲು ರೈತರ ಮನೆ ಬಾಗಿಲಿಗೇ ಅಗತ್ಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಈ ವಾಹನ ಮಾಡುತ್ತದೆ ಎಂದು ಹೇಳಿದರು. 200 ಕೆ.ಜಿ ಗೆ ಒಳಪಟ್ಟ ಜಾನುವಾರುಗಳಿಗೆ ಈ ವಾಹನದಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ರೈತರು ಸಾಕುವ ಜಾನುವಾರುಗಳ ಚಿಕಿತ್ಸೆಗೆ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಮೂಲಕ ಉತ್ತಮ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ರೈತರಿಗೆ ಪಶು ಸಂಜೀವಿನಿ ವಾಹನದ ಬಗ್ಗೆ ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದ್ದು, ಎಲ್ಲರೂ ಸಹ ಈ ವಾಹನದ ಉಪಯೋಗವನ್ನು ಪಡೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಪಶು ಸಂಜೀವಿನಿ ವಾಹನದ ಕುರಿತ ಮಾಹಿತಿಯನ್ನೊಳಗೊಂಡ ಬಿತ್ತಿ ಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚುವಂತೆ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಇದೆ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ, ಉಪವಿಭಾಗಧೀಕಾರಿ ನವೀನ್ ಭಟ್, ತಹಸೀಲ್ದಾರ್ ಶಿವಶಂಕರಪ್ಪ ಇತರರು ಪಾಲ್ಗೊಂಡಿದ್ರು.
Tags
ಹಾಸನ