ಕೋರಂ ಕೊರತೆಯಿಂದ ಮುಂದೂಡಲ್ಪಟ್ಟ ಜಿಪಂ ವಿಶೇಷ ಸಭೆ

ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಹೊರ ಹೊರಟ ಸದಸ್ಯರು
ಹಾಸನ: ಶನಿವಾರ ಬೆಳಿಗ್ಗೆ ನಡೆಯಬೇಕಾದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಜೆಡಿಎಸ್ ಸದಸ್ಯರ ಗೈರು ಹಾಜರಿಯಲ್ಲಿ ಕೊರೋ ಕೊರತೆ ಕಂಡು ಬಂದಿದ್ದರಿಂದ ಸಭೆಯನ್ನು ಮುಂದೂಡಲ್ಪಟ್ಟಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಇಡಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ವೇತಾ ದೇವರಾಜು ಹಾಗೂ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಎ. ಪರಮೇಶ್ ಹಾಗೂ ಸದಸ್ಯರುಗಳೆಲ್ಲಾ ಹೊರಟು ಹೋದರು.
      ನಗರದ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಶೇಷ ಸಭೆ ಕರೆಯಲಾಗಿತ್ತು. ಸಭೆಗೆ ಜೆಡಿಎಸ್ ನ 22 ಜನ ಜಿಪಂ ಸದಸ್ಯರು ಹೊರತುಪಡಿಸಿ ಉಳಿದ ಕಾಂಗ್ರೆಸ್ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಒಂದು ಸಭೆ ನಡೆಯಬೇಕಾದರೇ ಕೋರಂ ಇರುವುದು ಅತ್ಯವಶ್ಯಕ. ಜೆಡಿಎಸ್ ನ ಎಲ್ಲಾ ಸದಸ್ಯರು ಹಾಜರಾಗಲಿಲ್ಲ. ಬರುವಿಕೆಗಾಗಿ ಮದ್ಯಾಹ್ನ 1 ಗಂಟೆಯವರೆಗೂ ಕಾಯಲ್ಪಟಿತು. ಒಂದು ಗಂಟೆಯ ನಂತರ ಸಭೆಯನ್ನು ಮುಂದೂಡಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಸಭಾಂಗಣದಿಂದ ಒಬ್ಬೊಬ್ಬರಾಗಿ ಹೊರ ಹೋದರು.
ಅಭಿವೃದ್ಧಿ ಕೆಲಸಗಳಿಗೆ ಜಿಪಂ ಅಧ್ಯಕ್ಷರು ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನ ಜಿಪಂ ಸದಸ್ಯರು ಒಂದು ಕಡೆ ಆರೋಪ ಮಾಡಿದರೇ, ಮತ್ತೊಂದು ಕಡೆ ಎಲ್ಲಾ ಕ್ಷೇತ್ರಗಳಿಗೂ ಅನುದಾನದಲ್ಲಿ ಹಣ ಹಂಚಿಕೆ ಮಾಡಲಾಗಿದೆ ಎಂಬುದು ಜಿಪಂ ಅಧ್ಯಕ್ಷರ ವಾದವಾಗಿದೆ. ಒಟ್ಟಾರೆ     ರಾಜಕೀಯ ಕೆಸರಾಟದಲ್ಲಿ ಜಿಲ್ಲಾ ಪಂಚಾಯತ್ ನಿಂದ ಯಾವ ಅಭಿವೃದ್ಧಿ ಕೆಲಸ ಆಗದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

Post a Comment

Previous Post Next Post