ಜೊತೆ ಜೊತೆಯಲ್ಲಿ ಮೇಘಾ ಶೆಟ್ಟಿ ಗಣೇಶ್ ಜೊತೆಯಲ್ಲಿ ತ್ರಿಬಲ್ ರೈಡಿಂಗ್ ಹೊರಟಿದ್ದರೆ.

ಮೇಘನಾ ಶೆಟ್ಟಿ ಅವರು ಕಿರುತೆರೆಗೆ ಜೊತೆ ಜೊತೆಯಲಿ ಸೀರಿಯಲ್ ಮುಖಾಂತರ ಪ್ರೇಕ್ಷಕರಿಗೆ ಪರಿಚಯ ಆದರು. ಅವರ ಅದ್ಭುತ ನಟನೆಯಿಂದ ಕನ್ನಡ ಪ್ರೇಕ್ಷಕರ ಮನವನ್ನು ಸೂರೆಗೊಂಡಿದ್ದಾರೆ. ಅವರ ಅಭಿನಯಕ್ಕೆ ಸಾಟಿಯೇ ಇಲ್ಲ. ಅವರು ನಟಿಸಿದ ಮೊದಲ ಧಾರಾವಾಹಿಯಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದಾರೆ.  


ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿ, ಈಗ ಬೆಳ್ಳಿತೆರೆಗೆ ಕೂಡ ಅದ್ದೂರಿಯಾಗಿ 'ತ್ರಿಬಲ್ ರೈಡಿಂಗ್' ಮೂಲಕ ಬರಲಿದ್ದಾರೆ. ಅದು ಗೋಲ್ಡನ್ ಸ್ಟಾರ್ ಜೊತೆ ಎನ್ನುವುದು ವಿಶೇಷ. 


 ಇದಕ್ಕೆ ಪ್ರತಿಕ್ರಿಯೆವಾಗಿ ಮೇಘನ ಶೆಟ್ಟಿ ಅವರು ಏನ್ ಎಂದು ಹೇಳಿದ್ದಾರೆ ನೋಡಿ " ಗಣೇಶ್ ಸರ್ ಜೊತೆ ನಟಿಸುತ್ತಿರುವುದು ತುಂಬ ಖುಷಿಯಾಗುತ್ತಿದೆ. ನಿಜಕ್ಕೂ ನಾನು ಪುಣ್ಯ ಮಾಡಿದ್ದೇನೆ. ಇವೆಲ್ಲವೂ ಸಾಧ್ಯವಾಗಿದ್ದು ಅಭಿಮಾನಿಗಳ ಪ್ರೀತಿಯಿಂದ. ಗಣೇಶ್ ಸರ್ ಅವರನ್ನು ನಾನು ಇದುವರೆಗೂ ಭೇಟಿ ಮಾಡಿಲ್ಲ. ಅವರ ಜೊತೆ ಕೆಲಸ ಮಾಡೋದಕ್ಕೆ ತುಂಬ ಥ್ರಿಲ್ ಆಗಿದ್ದೇನೆ. ಇಲ್ಲಿ ನಾನು ಹೋಮಲೀ ಕ್ಯಾರೆಕ್ಟರ್ ಮಾಡುತ್ತಿದ್ದೇನೆ. ನನ್ನ ಅಕ್ಕ ಈ ಸಿನಿಮಾದ ಕಥೆ ಕೇಳಿ ಫೈನಲ್ ಮಾಡಿದ್ದಾಳೆ. ಅವಳೇ ಯಾವಾಗಲೂ ನಿರ್ಧಾರ ತಗೊಳ್ಳೋದು' ಎಂದು ಹೇಳಿದ್ದಾರೆ. 


ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಚಿತ್ರವನ್ನು ಮಹೇಶ್ ನಿರ್ದೇಶನ ಮಾಡಿದ್ದರು. ಕೃಪಾಳು ಎಂಟರ್‌ಟೈನ್‌ಮೆಂಟ್' ಲಾಂಛನದಲ್ಲಿ ರಾಮ್ ಗೋಪಾಲ್ ವೈ ಎಂ ಈ ಚಿತ್ರ ನಿರ್ಮಿಸುತ್ತಿದ್ದಾರೆ.


ಮೇಘನಾ ಶೆಟ್ಟಿ ಅವರಿಗೆ ಯಶಸ್ಸು ಸಿಗಲ್ಲಿಎಂದು ನಾವು ಶುಭಕೋರೋಣ. 


Post a Comment

Previous Post Next Post