ಆಲೂರು : ಇಡೀ ದೇಶದ ಸಮಗ್ರ ಅಭಿವೃದ್ಧಿಯ ಜೊತೆಗೆ ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ಎಲ್ಲರಿಗೂ ಅವರು ಹಕ್ಕು ಅವಕಾಶಗಳನ್ನು ಒದಗಿಸುವ ಗುರುತರವಾದ ಜವಾಬ್ದಾರಿಯನ್ನು ಬಿಎಸ್ಪಿ ಪಕ್ಷ ಹೊಂದಿದೆ ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್ ತಿಳಿಸಿದರು
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಹುಜನ ಸಮಾಜ ಪಕ್ಷದಿಂದ ಆಯೋಜಿಸಿದ್ದ ತಾಲ್ಲೂಕು ಘಟಕ ಪದಾಧಿಕಾರಿಗಳ ಪುನರ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಿಂದೆಂದೂ ಕಂಡರಿಯಲಾರದಷ್ಟು ಭ್ರಷ್ಠಾಚಾರ, ಸ್ವಜನ ಪಕ್ಷಪಾತ, ಕೊಲೆ, ಸುಲುಗೆಗಳು, ಅನ್ಯಾಯ, ಅತ್ಯಾಚಾರಗಳು ಯಾವುದೇ ಕಾನೂನಿನ ಭಯವಿಲ್ಲದೆ ನಡೆಯುತ್ತಿವೆ. ಪರಿಣಾಮವಾಗಿ ಸಾಮಾನ್ಯ ಜನರ ಜೀವನ ಬಹಳ ದುಸ್ತರವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನಮ್ಮನ್ನಾಳುತ್ತಿರುವ ಸರ್ಕಾರಗಳು ಜಾರಿಗೆ ತಂದಿರುವ ಜನ ವಿರೋಧಿ ನೀತಿಗಳಾದ ನೋಟ್ ಬ್ಯಾನ್, ಜಿಎಸ್ ಟಿ, ಬ್ಯಾಂಕ್ ವಿಲೀನಿಕರಣ, ರೈಲ್ವೇ , ಎಲ್ ಐಸಿ ಮುಂತಾದವುಗಳ ಖಾಸಗೀಕರಣದಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಝಂಡ ಬೇರೆ ಬೇರೆ ಅಜಾಂಡ ಒಂದೆ ಆಗಿದೆ. ಈ ಎರಡು ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ಜನರು ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ರಾಜಕೀಯ ಶಕ್ತಿಗಾಗಿ ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇಡೀ ದೇಶದ ಸಮಗ್ರ ಅಭಿವೃದ್ದಿಯ ಕನಸು ಕಟ್ಟಿಕೊಂಡು ಎಲ್ಲಾ ಶೋಷಿತ ವರ್ಗಗಳ ಬಗ್ಗೆ ಅಪಾರವಾದ ಕಾಳಜಿ ಇಟ್ಟು " ಸರ್ವಜನ ಹಿತಾಯ ಸರ್ವಜನ ಸುಖಾಯ " ಎಂಬ ಘೋಷಣೆಯೊಂದಿಗೆ ಮುನ್ನಡೆಯುತ್ತಿರುವ ಏಕೈಕ ರಾಜಕೀಯ ಪಕ್ಷ ಅದು ಬಹುಜನ ಸಮಾಜ ಪಾರ್ಟಿ ಮಾತ್ರ.
ಪ್ರಜಾಪ್ರಭುತ್ವವನ್ನು ಉಳಿಸುವ , ಎಲ್ಲರಿಗೂ ಅವರ ಹಕ್ಕು ಅವಕಾಶಗಳನ್ನು ಓದಗಿಸುವ ಬಹಳ ಗುರುತರವಾದ ಜವಾಬ್ಧಾರಿಯನ್ನು ಬಿಎಸ್ಪಿ ಹೊಂದಿದೆ. ಪರ್ಯಾಯ ರಾಜಕೀಯ ಶಕ್ತಿಯಾದ ಬಿಎಸ್ಪಿಯನ್ನು ಬಲಗೊಳಿಸಲು ಎಲ್ಲಾ ಶೋಷಿತ ವರ್ಗಗಳು, ದಾರ್ಮಿಕ ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಕಾರ್ಮಿಕರು ಒಂದಾಗಬೇಕಾದ ಅನಿವಾರ್ಯತೆ ಇದೆ.
ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಲೂರು ತಾಲ್ಲೂಕು ಘಟಕವನ್ನು ಪುನರ್ ರಚನೆ ಮಾಡಲಾಯಿತು.
ತಾಲ್ಲೂಕು ಉಸ್ತುವಾರಿ ಸಂಯೋಜಕರಾಗಿ ದೇವರಾಜ ಜೆ.ತಿಮ್ಮನಹಳ್ಳಿ, ಅದ್ಯಕ್ಷರಾಗಿ ರಘು ಅಬ್ಬನ, ಉಪಾದ್ಯಕ್ಷರಾಗಿ ರಾಜು ಬ್ಯಾಬ , ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ್ ಕಲ್ಲಹಳ್ಳಿ, ಖಜಾಂಚಿಯಾಗಿ ಮಂಜುನಾಥ್ ಎಂ.ಹೊಸಳ್ಳಿ, ಬಿವಿಎಫ್ ಸಂಯೋಜಕರಾಗಿ ರವಿ ಎಂ.ಎಚ್.ಪುರ, ತಾಲ್ಲೂಕು ಕಾರ್ಯದರ್ಶಿಗಳಾಗಿ ಜಗದೀಶ್, ಸಣ್ಣಸ್ವಾಮಿ, ಬಸವರಾಜ್, ಸೋಮಶೇಖರ್, ಚಂದ್ರಶೇಖರ್ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಹರೀಶ್ ಅತ್ನಿ, ಜಿಲ್ಲಾ ಮುಖಂಡರುಗಳಾದ ಜಯವರ್ದನ್, ಪುಟ್ಟರಾಜು, ಪ್ರಕಾಶ್ ಕೆಸಗೋಡು, ಸುರೇಂದ್ರ ಹಾಸನ್, ಮಂಜುನಾಥ್ ಪ್ರಭಾಕರ್, ಕಾಂತರಾಜ್ ಮುಂತಾದವರು ಹಾಜರಿದ್ದರು
Tags
ಆಲೂರು