ದಲಿತರ ಹಿಡುವಳಿ ಜಮೀನು ಉಳಿಸಿ ನ್ಯಾಯ ಕೊಡಿಸಲು ಡಿಸಿ ಕಛೇರಿ ಮುಂದೆ ಪ್ರತಿಭಟನೆ

ಹಾಸನ: ಮಿಲಿಟರಿ ಕ್ಯಾಂಪಿಗೆ ಮಂಜೂರು ಮಾಡಿಸಲು ಹೊರಟಿರುವ ತಹಸೀಲ್ದಾರ್ ಮಂಜುನಾಥ್ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಜೀತ ವಿಮುಕ್ತ ದಲಿತರ ಹಿಡುವಳಿ ಜಮೀನು ಉಳಿಸುವಂತೆ ಆಗ್ರಹಿಸಿ ಜೀತ ವಿಮುಕ್ತ ಕರ್ನಾಟಕ, ಕೃಷಿ ಕಾರ್ಮಿಕರ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
      ಸಕಲೇಶಪುರ ತಾಲೂಕು ಮಳಲಿ ಗ್ರಾಮದ ಸರ್ವೆ ನಂ.330 ರಲ್ಲಿ ಕಾಳಯ್ಯ ಬಿನ್ ಕೆಂಚಯ್ಯ ಎಂಬ ಜೀತ ವಿಮುಕ್ತರಿಗೆ 1976 ರಲ್ಲಿ ಮಂಜೂರು ಆಗಿದ್ದ ಸಾಗುವಳಿ ಚೀಟಿ, ದಾಖಲಾತಿ, ಸ್ಕೆಚ್ ಇದ್ದು, ಪಹಣಿಯಲ್ಲೂ ಸಹ 
ನಮೂದಾಗಿರುತ್ತದೆ. ಸದರಿ ಜಮೀನು ಬಸವನಹಳ್ಳಿ ಮಿಲಿಟರಿ ಕ್ಯಾಂಪ್‍ಗೆ ಹೊಂದಿಕೊಂಡಂತೆ
ಇರುವುದರಿಂದ ನಾವು ಬೆಳೆದಿದ್ದ ಬಾಳೆ, ಸಿಲ್ವರ್ ಗಿಡಗಳನ್ನು ಪ್ರತಿ ಬಾರಿಯೂ ಕಿತ್ತು ಹಾಕಿ ಮಿಲಿಟರಿ ಕ್ಯಾಂಪ್‍ನವರು ತೊಂದರೆ ಕೊಡುತ್ತಲೇ ಬಂದಿರುತ್ತಾರೆ. ತಹಸೀಲ್ದಾರ್ ಶ್ರೀ ಮಂಜುನಾಥ್‍ರವರು ಈ ಹಿಂದೆ ಮುಲಿಟರಿಯಲ್ಲಿದ್ದ ಕಾರಣಕ್ಕೆ ಮಿಲಿಟರಿಯವರನ್ನು ನಮ್ಮ ಮೇಲೆ ಎತ್ತಿಕಟ್ಟುತ್ತಾರೆ ನಿಮ್ಮ ಹಿಡುವಳಿ ಜಮೀನಾಗಿದ್ದು ಸಹ ನಿಮ್ಮನ್ನು ಈ ಜಮೀನಿಗೆ ಹೋಗಲು ಬಿಡುವುದಿಲ್ಲ, ಮಿಲಿಟರಿ ಜಮೀನಿಂದ 100 ಮೀಟರ್ ದೂರ ಸ್ವಂತ ಜಮೀನಿನಲ್ಲಿ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ. ನೀವು ಸರ್ಕಾರಕ್ಕೆ ಈ ಜಮೀನನ್ನು ಬರೆದುಕೊಡಿ ಎಂಬ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ಇದರಿಂದ ದಲಿತ, ಜೀತ ನಿಮಿತ್ತ ಕುಟುಂಬ ಇರಲು ಸಹ ಸ್ವಂತ ಮನೆಯಿಲ್ಲ, ಬೇರೆಯವರ ಹಿಡುವಳಿ ಜಮೀನಿನಲ್ಲಿ ವಾಸ ಇರುವಂತಾಗಿದೆ. ಕೂಡಲೇ ದಲಿತ ಜೀತ ವಿಮುಕ್ತ ಹಿಡುವಳಿ ಜಮೀನು ಸರ್ವೆ ನಂ. 330ನ್ನು ಜಿಲ್ಲಾಧಿಕಾರಿಗಳು ಬಿಟ್ಟು ಬಸವನಹಳ್ಳಿ ಗ್ರಾಮದ ಜಮೀನು ಆದೇಶಿಸಿರುವ ಪ್ರಕಾರ ಮಂಜೂರು ಮಾಡಿ ತಹಸೀಲ್ದಾರ್ ಮಂಜುನಾಥ್ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರ್ವೆ ನಂ. 330ರ ಜಮೀನು ಜೀತ ವಿಮುಕ್ತರಿಗೆ ಬಿಟ್ಟು ಕೊಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
    1976 ರಿಂದಲೂ ತೊಂದರೆ ಕೊಡುತ್ತಿರುವ ಮಿಲಿಟರಿ ಅಧಿಕಾರಿಗಳ ಮೇಲೆ ಪ.ಜಾತಿ\ಪ.ಪಂಗಡ
ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಅಧಿಕಾರಿಗಳು ಸ್ಪಷ್ಟವಾಗಿ ಮಳಲಿ ಸರ್ವೆ ನಂ.330 ನ್ನು ಬಿಟ್ಟು ಮಂಜೂರು ಮಾಡಲು ಆದೇಶ ಮಾಡಿದ್ದರೂ ಕೂಡ ತಹಸೀಲ್ದಾರ್ ಮಂಜುನಾಥ್ ರವರು ಇದ್ದೇಶ ಪೂರ್ವಕವಾಗಿ ಬಡ ಜೀತ ವಿಮುಕ್ತರು ಮಾನಸಿಕವಾಗಿ ಕಿರುಕುಳ ನೀಡುತ್ತಾರೆ ಜಮೀನು ಬರೆದುಕೊಡುವಂತೆ ಒತ್ತಾಯ ಮಾಡಿ ನಿಮ್ಮ ಜಮೀನನ್ನು ನಾನು ಬಿಟ್ಟುಕೊಡುವುದಿಲ್ಲ. ಸರ್ಕಾರಕ್ಕೆ
ಬರೆದುಕೊಡುವಂತೆ ಬೆದರಿಕೆ ಹಾಕುತ್ತಿರುವ ತಹಶೀಲ್ದಾರ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ
ಒತ್ತಾಯಿಸಿದರು. ಮೂಗಲಿ (ಶಿಡಿಗಳಲೆ) ಗ್ರಾಮದ ಜೀತ ವಿಮುಕ್ತರು ಬದಲಿ ಭೂಮಿ ನೀಡಿ ಹಾಗೂ ಹೆಬ್ಬನಹಳ್ಳಿ ಗ್ರಾಮದ ಸರ್ವೆ ನಂ.30ರ ಜಮೀನು ಜೀತ ವಿಮುಕ್ತರು ಖಾತೆ ಮಾಡದ ಹೆಚ್.ಆರ್.ಪಿ ಯವರಿಗೆ ಮಂಜೂರು ಮಾಡಿರುವುದನ್ನು ವಿರೋಧಿಸುತ್ತೇವೆ. ಮತ್ತು ಒಂದೇ ಜಮೀನು ಹೇಗೆ ಎರಡೆರಡು ಜನರಿಗೆ ಸಾಗುವಳಿ ನೀಡಿರುವ ತಹಸೀಲ್ದಾರ್ ಕ್ರಮ ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ತಮ್ಮ ಹಕ್ಕೋತ್ತಾಯ ಮಾಡಿದರು.
      ಪ್ರತಿಭಟನೆಯಲ್ಲಿ ಜೀತ ವಿಮುಕ್ತ ಕರ್ನಾಟಕ, ಕೃಷಿ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಂಚಾಲಕ ಬೈರಪ್ಪ, ಜೀತ ವಿಮುಕ್ತ ದಲಿತರಾದ ಹರೀಶ್, ಗಂಗಮ್ಮ, ದೇವರಾಜು, ಶಾರದ ಇತರರು ಪಾಲ್ಗೊಂಡಿದ್ದರು.

Post a Comment

Previous Post Next Post