ಅರಕಲಗೂಡು ತಾಲ್ಲೂಕಿನ ವಿಜಾಪುರ ಅರಣ್ಯ ಗ್ರಾಮದಲ್ಲಿ ಇಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ರಸ್ತೆ ನಿರ್ಮಾಣದ ಕಾರ್ಯಕ್ರಮಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸಿ ಭೂಮಿ ಪೂಜೆ ನೇರವೇರಿಸಿದರು.
ನಂತರ ಮಾತನಾಡಿ ಅವರು ಮಲ್ಲಿಪಟ್ಟಣ ಹೋ ವಿಜಾಪುರ ಅರಣ್ಯ ಗ್ರಾಮದಿಂದ ಕೋನಾಪುರ ಮಾರ್ಗವಾಗಿ ಮುದಿಗೆರೆ ರಸ್ತೆ ಸಂಪರ್ಕಿಸುವ 9 ಗ್ರಾಮಗಳ ರಸ್ತೆಗಳ ನಿರ್ಮಾಣಕ್ಕೆ ಜನರು ಬೇಡಿಕೆ ಇಟ್ಟಿದ್ದು ಇದರ ಸಂಭಂದ ಚುನಾವಣೆ ಸಂದರ್ಭದಲ್ಲಿ ಮಾಡಿಕೊಡಲು ನಾನು ಮತ್ತು ಶಾಸಕರು ಆಶ್ವಾಸನೆ ನೀಡಿದ್ದೇವೆ ಕೊಟ್ಟ ಭರವಸೆ ತಕ್ಕಂತೆ ಶಾಸಕರೊಂದಿಗೆ ಮಾತುಕತೆ ನಡೆಸಿ ಈದಿನ ಆ ಗ್ರಾಮಗಳ ರಸ್ತೆಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ಅವರ ನೀರೀಕ್ಷೆಯನ್ನು ಈಡೇರಿಸಿದ್ದೇವೆ ಈಕಾಮಗಾರಿ ಒಟ್ಟು 9.61 ಕಿಮೀ ಉದ್ದದ ಕಾಂಕ್ರೀಟ್ ಮತ್ತು ಡಾಂಬರ್ ರಸ್ತೆಯಾಗಿದ್ದು 939 ಲಕ್ಷ ರೂಗಳ ಅನುದಾನ ವಾಗಿರುತ್ತೆ .
ಉತ್ತಮ ರಸ್ತೆ ನಿರ್ಮಾಣವಾಗಬೇಕು, ಶಾಸಕರು ರಸ್ತೆಯ ಗುಣಮಟ್ಟಕ್ಕೆ ಒತ್ತು ಕೊಡುವುದರಿಂದ ಉತ್ತಮವಾಗಿ ನಿರ್ಮಾಣವಾಗುತ್ತದೆ. ಯಾರೇ ಗುತ್ತಿಗೆದಾರರು ಇರಲಿ ಇಂಜಿನಿಯರ್ ಇರಲಿ ಅವರಿಗಿಂತ ಗ್ರಾಮಸ್ಥರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ನಿಮ್ಮ ಊರಿನಲ್ಲಿ ಆಗುವ ಕಾಮಗಾರಿಯನ್ನು ಮುಂದೆ ನಿಂತು ಮಾಡಿಸಿಕೊಳ್ಳಬೇಕು ಒಳ್ಳೆಯ ರಸ್ತೆಯನ್ನು ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಗುತ್ತಿಗೆದಾರರು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದರು.
ಶಾಸಕರಾದ ಎ.ಟಿ.ರಾಮಸ್ವಾಮಿ ಮಾತಾನಾಡಿ
ಅರಕಲಗೂಡು ಕ್ಷೇತ್ರಕ್ಕೆ ಈವರ್ಷ ಸುಮಾರು 30 ಕಿಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮಂಜೂರಾತಿ ಆಗಿದೆ ಅದರ ಒಟ್ಟು ವೆಚ್ಚ ಸುಮಾರು 19 ಕೋಟಿ. ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ,ಹೊರಗಿನ ರಸ್ತೆ ಡಾಂಬರ್ ರಸ್ತೆಗಳಾಗಿದೆ.ಭೂಮಿ ಪೂಜೆ ಮಾಡುವ ಉದ್ದೇಶವೇನೆಂದರೆ ಗ್ರಾಮಸ್ಥರಿಗೆ ಇದರ ಬಗ್ಗೆ ತಿಳಿಸುವುದರ ಜೊತೆಗೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡುವುದು ಎಂದರು.
Tags
ಅರಕಲಗೂಡು

