ತರೀಕೆರೆ: ತಾಲೂಕಿನ ಹಳಿಯೂರು ಸಮೀಪದ ಭದ್ರಾ ಮೇಲ್ದಂಡೆ ನಾಲೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಹೊಸಪೇಟೆ ಮೂಲದ ಬಾಲಕ ಉಲ್ಲಾಸ್ (16) ಪಟ್ಟಣದಲ್ಲಿರುವ ಪಾಳೇಗಾರ ಕ್ಯಾಂಪ್ ನ ಅಜ್ಜಿ ಮನೆಗೆ ಇತ್ತೀಚೆಗೆ ಬಂದಿದ್ದ. ಶುಕ್ರವಾರ ಸಂಜೆ ಮೂರು ಗಂಟೆಯ ಸುಮಾರಿಗೆ ಸ್ನೇಹಿತರೊಂದಿಗೆ ಈಜಲು ಹೋಗಿದ್ದ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಈಜಲು ಇಳಿದಿದ್ದ ಎಂದು ಹೇಳಲಾಗಿದೆ. ನೀರಿನ ರಭಸ ಹೆಚ್ಚಿದ್ದ ಕಾರಣ ಸೊಂಟಕ್ಕೆ ಕಟ್ಟಿಕೊಂಡಿದ್ದ ಹಗ್ಗ ಬಿಚ್ಚಿ ಹೋಗಿದ್ದು ಬಾಲಕ ನೀರುಪಾಲಾಗಿದ್ದಾನೆ.
Tags
ಚಿಕ್ಕಮಗಳೂರು