ಆರ್ ಟಿ ಇ ಮಕ್ಕಳಿಗೂ ಶುಲ್ಕ ನೀಡುವಂತೆ ಖಾಸಗಿ ಶಾಲೆಯ ಒತ್ತಡ ಕರವೇ ಇಂದ ಉಗ್ರ ಪ್ರತಿಭಟನೆಯ ಎಚ್ಚರಿಕೆ.
ಸಕಲೇಶಪುರ :ಇನ್ನೂ ಶಾಲೆಗಳನ್ನು ಆರಂಭಿಸುವ ದಿನ ನಿಗದಿಯಾಗಿಲ್ಲ. ಆನ್ ಲೈನ್ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಆದರೆ ಅದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುವಂತಿಲ್ಲ ಎಂದು ಸರಕಾರ ಆದೇಶಿಸಿದೆ. ಆದರೆ ಈಗ ಆನ್ ಲೈನ್ ಶಿಕ್ಷಣಕ್ಕಾಗಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಅಡ್ಮಿಷನ್ ಮಾಡಿಸಲು, ಪುಸ್ತಕ ಖರೀದಿಸಲು ಸೂಚಿಸುತ್ತಿವೆ. ಇನ್ನು ಬಡಮಕ್ಕಳಿಗೆ ನೆರವಾಗಲೆಂದು ಸರ್ಕಾರ ಆರ್ ಟಿ ಇ ಅಡಿಯಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿದ್ದರು ಸಹ ಖಾಸಗಿ ಶಾಲೆಗಳು ಶುಲ್ಕ ನೀಡುವಂತೆ ಒತ್ತಡ ಹಾಕುತ್ತಿರುವುದು ಕಂಡು ಬಂದಿದೆ. ಶಾಲೆಯ ಈ ನಡೆಯ ವಿರುದ್ಧ ಗುರುವಾರ ಪೋಷಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
ಗುರುವಾರ ತಾಲೂಕಿನ ಬಾಳ್ಳುಪೇಟೆಯ ವಿವೇಕ ಆಂಗ್ಲ ಮಾಧ್ಯಮ ಶಾಲೆಗೆ ಪೋಷಕರು ಹಾಗೂ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು ನಂತರ ಈ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ )ಬಣದ ತಾಲ್ಲೂಕು ಅಧ್ಯಕ್ಷ ಆರ್. ಎಸ್ ದಿನೇಶ್, ಮಕ್ಕಳಿಂದ 17000 ಶುಲ್ಕವನ್ನು ಕಟ್ಟಿಸಿ ಕೊಳ್ಳುತ್ತಿದ್ದು. ಆರ್ ಟಿ ಇ ಮಕ್ಕಳಿಗೂ ಕೂಡ ₹5000 ಕಟ್ಟಬೇಕೆಂದು ಒತ್ತಡ ಹಾಕುತ್ತಿರುವುದು ಕಂಡು ಬಂದಿದೆ.ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿ ನೆಪದಲ್ಲಿ ದಂಧೆಗೆ ಇಳಿದಿವೆ. ಶುಲ್ಕ ಕಟ್ಟಿಸಿಕೊಳ್ಳುವ ದಕ್ಕೆ ಯಾವುದೇ ರೀತಿಯ ರಸೀದಿಗಳನ್ನು ನೀಡುತ್ತಿಲ್ಲ. ಬಡಮಕ್ಕಳಿಗೆ ನೆರವಾಗಲೆಂದು ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಆರ್ ಟಿ ಇ ಯೋಜನೆಯ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಅಂತ ಮಕ್ಕಳಿಂದಲೂ ಕೂಡ ಶುಲ್ಕ ವಸೂಲು ಮಾಡುತ್ತಿರುವುದು ಖಂಡನೀಯ. ಇನ್ನೊಂದು ವಾರದಲ್ಲಿ ಶಾಲೆಯ ಎಲ್ಲಾ ಮಕ್ಕಳ ಪೋಷಕರ ಸಭೆ ಕರೆಯಬೇಕು ಸುಮಾರು ಐದು ವರ್ಷಗಳಿಂದ ಆರ್ ಟಿ ಇ ಮಕ್ಕಳಿಂದ ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದೇ ಹೋದಲ್ಲಿ ಇನ್ನೊಂದು ವಾರದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಸಿದರು.
ಕೊರೊನ ವೈರಸ್ ಮಹಾಮಾರಿ ಹೊಡೆತಕ್ಕೆ ಬಹಳಷ್ಟು ಜನರು ತೊಂದರೆಯಲ್ಲಿ ಸಿಲುಕಿದ್ದಾರೆ. ಎಂದು ಪಾಲಕರು ಕೇಳುತ್ತಿದ್ದಾರೆ.ಮಧ್ಯೆ ಆನ್ ಲೈನ್ ಶಿಕ್ಷಣಕ್ಕೆ ಪುಸ್ತಕ ಖರೀದಿಸಬೇಕು, ಪುಸ್ತಕ ಖರೀದಿಸಲು ಪ್ರವೇಶ ಪಡೆಯಬೇಕು, ಈಗ ಪ್ರವೇಶ ಹಾಗೂ ಪುಸ್ತಕ ಖರೀದಿಸಬೇಕಾಗಿದೆ. ಲಾಕ್ ಡೌನ್ನಿಂದಾಗಿ ಬಹುತೇಕರು ಕೆಲಸವಿಲ್ಲದೆ ಹಣವಿಲ್ಲದ ಈ ಸಂದರ್ಭದಲ್ಲಿ ಶಾಲಾ ಶುಲ್ಕ ಕಟ್ಟುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ಕೆಲವು ಶಾಲೆಗಳು ಹಣ ಕಟ್ಟದೆ ಇದ್ದರೆ ಟಿಸಿ ಹಿಂಪಡೆಯಲು, ವಾಟ್ಸಾಪ್ ಗ್ರೂಪ್ನಿಂದ ಹೆಸರು ರಿಮೂವ್ ಮಾಡುತ್ತಾರೆ ಎಂದು ಪೋಷಕರಾದ ತೇಜಸ್ ಆರೋಪಿಸಿದರು. ಮಹಿಳಾ ಪೋಷರೊಬ್ಬರು ಮಾತನಾಡಿ, ಆನ್ಲೈನ್ ಶಿಕ್ಷಣಕ್ಕೆ ನಮ್ಮ ಮಕ್ಕಳಿಗೆ ನಾವು ಮೊಬೈಲ್ ಕೊಡಿಸಬೇಕು ಮತ್ತೊಂದೆಡೆ ಶಾಲೆಯ ಡೊನೇಷನ್ ಕಟ್ಟಬೇಕು ಈ ನಡುವೆ ನಾವು ಕಂಗಾಲಾಗಿದ್ದೇವೆ ಎಂದು ತಮ್ಮ ಅಸಹಾಯತೆಯನ್ನು ತೋಡಿಕೊಂಡರು.
ಏನೇ ಆಗಲಿ ಲಾಕ್ಡೌನ್ ಇಂದ ಕಂಗಾಲಾಗಿ ಸಂಕಷ್ಟದಲ್ಲಿರುವ ಪೋಷಕರಿಗೆ ಖಾಸಗಿ ಶಾಲೆಗಳು ತಮ್ಮ ಬದ್ಧತೆಯನ್ನು ಪ್ರದರ್ಶನ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಯಾವುದೇ ತೊಂದರೆಯಾಗದಂತೆ ಶಿಕ್ಷಣ ನೀಡಲಿ ಎನ್ನುವುದೇ ಹಾಸನ ಸೀಮೆ ತಂಡದ ಆಶಯವಾಗಿದೆ.
Tags
ಹಾಸನ