ಸ್ವಾಮಿ ವಿವೇಕಾನಂದ ಬಡಾವಣೆಯ ಬಳಿ ಪಿಎಸ್ಐ ಇದ್ದ ಜೀಪು ಪಲ್ಟಿ

ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ ಐ ಸಂಚರಿಸುತ್ತಿದ್ದ ಜೀಪು ಪಲ್ಟಿಯಾಗಿದೆ.

ಪಿಎಸ್ಐ ತಿರುಮಲೇಶ್ ಹಾಗೂ ಚಾಲಕ ಸುನೀಲ್ ರೌಂಡ್ಸ್ ನಲ್ಲಿದ್ದಾಗ ಸ್ವಾಮಿ ವಿವೇಕಾನಂದ ಬಡಾವಣೆಯ ಸರ್ಕಲ್ ಬಳಿ ಆಲ್ಟೋ ಕಾರೊಂದು ಗುದ್ದಿದ ಪರಿಣಾಮ ಪಿಎಸ್ಐವಿದ್ದ ಜೀಪು ಮಗಚಿ ಬಿದ್ದಿದೆ.

ಈ ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿಯಾಗಲಿ ಅಥವಾ ನೋವು ಉಂಟಾಗಿಲ್ಲವೆಂದು ಪಿಎಸ್ಐ ತಿರುಮಲೇಶ್ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಆದರೆ ತಿರುವಿನ ಬಳಿ ಆಲ್ಟೋ ಕಾರಿನ ಚಾಲಕ ವೇಗದಲ್ಲಿ ಬರುತ್ತಿದ್ದು ಪೊಲೀಸ್ ಜೀಪ್ ನ್ನ ಗಮನಿಸದೆ ಇರುವ ಹಿನ್ನಲೆಯಲ್ಲಿ ಈ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ಘಟನೆ ನಡೆದ ಸ್ಥಳ ತುಂಗ‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದರೂ ಸಹ ನಗರ ವ್ಯಾಪ್ತಿಯಲ್ಲಿ ನಡೆದ ಪರಿಣಾಮ ಪೂರ್ವ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

Post a Comment

Previous Post Next Post