ಬಿಳಗುಲಿ ಗ್ರಾಮದ ಸ.ನಂ119 ರ 4 ಎಕರೆ ಪ್ರದೇಶದಲ್ಲಿ ಕಸವಿಲೇವಾರಿ ಘಟಕ

ರಾಮನಾಥಪುರ ಹೋಬಳಿಯ ಬಿಳಗುಲಿ ಗ್ರಾಮದ ಸ.ನಂ119 ರ 4 ಎಕರೆ ಪ್ರದೇಶದಲ್ಲಿ ಕಸವಿಲೇವಾರಿ ಘಟಕಕ್ಕೆ  ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ಕೆಲಸ ಪ್ರಾರಂಭಿಸಲಾಯಿತು. ಈ ಸಂಧರ್ಭದಲ್ಲಿ ರಾಮನಕೊಪ್ಪಲು ಗ್ರಾಮಸ್ಥರು ಕೆಲಸ ನಿರ್ವಹಿಸದಂತೆ ತಡೆಯಲು ಬಂದಾಗ ಕೊಣನೂರು ಠಾಣೆಯ ಆರಕ್ಷಕ ಉಪನಿರೀಕ್ಷಕ ಸಾಗರ್ ಸಮಾಧಾನ ಪಡಿಸಿದರು. ಈ ಸಂಧರ್ಭದಲ್ಲಿ ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ, ಪಿ.ಡಿ.ಓ ವಿಜಯಕುಮಾರ್, ಕಾರ್ಯದರ್ಶಿ ನಿಂಗಣ್ಣ, ಗ್ರಾಮಲೆಕ್ಕಿಗರಾದ ಕೆ.ಜೆ.ಧರ್ಮೇಶ್, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

Post a Comment

Previous Post Next Post