ಬಿಜೆಪಿ ಪ್ರಮುಖರ ಅನುಚಿತ ವರ್ತನೆಗೆ ಜೆಡಿಎಸ್ ಪ್ರಮುಖರ ಖಂಡನೆ

ಬೇಲೂರು: ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಅರೇಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಮಹಿಳಾ ಸಿಬ್ಬಂದಿ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿ ಮಾತನಾಡಿರುವುದನ್ನು ಜೆಡಿಎಸ್ ಪಕ್ಷದ ಪ್ರಮುಖರು ಖಂಡಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಯಾವುದೆ ಪಕ್ಷದ ನಾಯಕರೆನಿಸಿಕೊಂಡವರಿಗೆ ಜವಾಬ್ದಾರಿ ಇರಬೇಕು, ಅವರ ನಡಾವಳಿಕೆ ಮತ್ತೊಬ್ಬರಿಗೆ ಮಾದರಿಯಾಗಿರಬೇಕು, ಇಲ್ಲದಿದ್ದರೆ ಇಂತಹ ಘಟನೆಗಳು ಜರುಗಲು ಕಾರಣವಾಗುತ್ತದೆ. ಪೊಲೀಸರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಹೆಚ್ಚು ಕಾರ್ಯಕರ್ತರೊಂದಿಗೆ ತೆರಳಿ ಅನುಚಿತವಾಗಿ ನಡೆದುಕೊಳ್ಳುವುದು ಶೋಭೆಯಲ್ಲ, ನಾವು ಅಧಿಕಾರಿಗಳ ಭೇಟಿ ವೇಳೆ ಹೆಚ್ಚುಜನರನ್ನು ಕರೆದುಕೊಂಡು ಹೋಗುವುದು ತರವಲ್ಲ ಎಂದರು.
ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಮಾತನಾಡಿ, ಶಾಂತಿಭಂಗ ಆಗುವಂತ ಕೆಲಸವನ್ನು ಯಾವುದೆ ಮುಖಂಡರೂ ಮಾಡಬಾರದು, ಮುಖಂಡರು ಎನಿಸಿಕೊಂಡವರೆ ಪೊಲೀಸ್ ಠಾಣೆಗೆನುಗ್ಗಿ ಅಸಭ್ಯವಾಗಿ ನಡೆದುಕೊಂಡರೆ ಸಣ್ಣಪುಟ್ಟವರ ಗತಿಯೇನು?, ಇವರ ಹಾದಿಯಲ್ಲಿ ಇತರರೂ ನಡೆದುಕೊಂಡರೆ ಸರಿಯಾಗುತ್ತದೆಯಾ ಎಂದು ಪ್ರಶ್ನಿಸಿದರು. ತಾ.ಪಂ.ಸದಸ್ಯ ಸೋಮಯ್ಯ ಮಾತನಾಡಿ, ಬಿರಡಹಳ್ಳಿ ಮಧು ಹಾಗೂ ಭರತ್ ರೌಡಿಶೀಟರ್ ಆಗಿದ್ದಾರೆ. ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದರು ಎನ್ನುವ ಕಾರಣಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಅವರು ಠಾಣೆಗೆ ತೆರಳಿ ಕೆಟ್ಟರೀತಿ ನಡೆದುಕೊಂಡಿದ್ದು ಸರಿಯಲ್ಲ. ಇವರ ಈ ರೀತಿಯ ವರ್ತನೆಯಿಂದ ಅರೇಹಳ್ಳಿ ಭಾಗದಲ್ಲಿ ನೌಕರರು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ ಎಂದು ದೂರಿದರು. ಎಪಿಎಂಸಿ ಅಧ್ಯಕ್ಷ ಚಿನ್ನೇನಹಳ್ಳಿಮಹೇಶ್ ಇದ್ದರು.

Post a Comment

Previous Post Next Post